ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುರಂಧ್ರ ಸುತ್ತ ಎಕ್ಸ್‌ರೇ ಪತ್ತೆ: ಭಾರತದ ವಿಜ್ಞಾನಿಗಳ ಸಾಧನೆ

Last Updated 22 ಸೆಪ್ಟೆಂಬರ್ 2020, 13:50 IST
ಅಕ್ಷರ ಗಾತ್ರ

ನವದೆಹಲಿ: ಕಪ್ಪುರಂಧ್ರಗಳ ಸುತ್ತ ಕಾಸ್ಮಿಕ್‌ ಎಕ್ಸ್‌ರೇಗಳು ಇರುವುದನ್ನು ಮುಂಬೈ ಮೂಲದ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ (ಟಿಐಎಫ್‌ಆರ್)ನ ಖಗೋಳವಿಜ್ಞಾನಿ ಸುದೀಪ್‌ ಭಟ್ಟಾಚಾರ್ಯ ನೇತೃತ್ವದ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.

ಈ ಸಂಶೋಧನೆಯು ಕಪ್ಪುರಂಧ್ರಗಳ ಕುರಿತ ಅಧ್ಯಯನಕ್ಕೆ ಮತ್ತಷ್ಟು ನೆರವಾಗಲಿದೆ.

ಕಪ್ಪುರಂಧ್ರಗಳಿಗೆ ಮೇಲ್ಮೈ ಎಂಬುದು ಇರುವುದಿಲ್ಲ. ಈ ಆಕಾಶಕಾಯಗಳನ್ನು ಸ್ಪರ್ಶಿಸುವ ಬೆಳಕಿಗೆ, ಅವುಗಳ ಮೂಲಕ ಹಾಯ್ದು ಹೋಗಲು ಆಗುವುದಿಲ್ಲ. ಕಪ್ಪುರಂಧ್ರಗಳಿರುವ ಅಗಾಧ ಗುರುತ್ವಾಕರ್ಷಣ ಶಕ್ತಿಯೇ ಇದಕ್ಕೆ ಕಾರಣ. ಹೀಗಾಗಿ ಇವುಗಳ ಎಲ್ಲೆ ಗುರುತಿಸುವುದು ಕಷ್ಟ.

ಆದರೆ, ಸುದೀಪ್‌ ಭಟ್ಟಾಚಾರ್ಯ ನೇತೃತ್ವದ ತಂಡವು, ಈ ಕಪ್ಪುರಂಧ್ರಗಳ ಬಳಿ ಕಾಸ್ಮಿಕ್‌ ಎಕ್ಸ್‌ರೇ ಅಸ್ತಿತ್ವವನ್ನು ಪತ್ತೆ ಹಚ್ಚಿರುವುದು ಇವುಗಳ ಎಲ್ಲೆಯನ್ನು ಗುರುತಿಸಲು ಹಾಗೂ ಈ ಬ್ರಹ್ಮಾಂಡ ತನ್ನ ಒಡಲಲ್ಲಿ ಹುದುಗಿಸಿಟ್ಟುಕೊಂಡಿರುವ ಅಗಾಧ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಈ ಬ್ರಹ್ಮಾಂಡದಲ್ಲಿ ಸೂರ್ಯನಿಗಿಂತಲೂ ಹತ್ತುಪಟ್ಟು ದ್ರವ್ಯರಾಶಿ ಹೊಂದಿರುವ ಕಪ್ಪುರಂಧ್ರಗಳಿವೆ.ನ್ಯೂಟ್ರಾನ್‌ ತಾರೆಗಳು ಸಹ ಇವೆ. ಈ ನ್ಯೂಟ್ರಾನ್‌ ತಾರೆಗಳು ಹಾಗೂ ಕಪ್ಪುರಂಧ್ರಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಸಹ ನಮ್ಮ ಸಂಶೋಧನೆ ನೆರವಾಗಲಿದೆ’ ಎಂದು ಭಟ್ಟಾಚಾರ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT