ಸೋಮವಾರ, ಅಕ್ಟೋಬರ್ 26, 2020
24 °C

ಅಫ್ಗಾನಿಸ್ತಾನ | ಉಗ್ರರಿಂದ 6 ಪೊಲೀಸರ ಹತ್ಯೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಾಬೂಲ್: ಅಫ್ಗಾನಿಸ್ತಾನದ ನಂಗಾರ್ಹರ್‌ ಪ್ರಾಂತ್ಯದಲ್ಲಿ ಕಾನೂನು ಜಾರಿ ಅಧಿಕಾರಿಗಳನ್ನು ಗುರಿಯಾಗಿರಿಸಿ ಉಗ್ರರು ನಡೆಸಿದ ದಾಳಿಯಿಂದಾಗಿ ಆರು ಮಂದಿ ಮೃತಪಟ್ಟಿದ್ದು, ಮತ್ತೆ ಆರು ಜನರು ಗಾಯಗೊಂಡಿದ್ದಾರೆ ಎಂದು ಮಂಗಳವಾರ ವರದಿಯಾಗಿದೆ.

ಈ ಪ್ರಾಂತ್ಯದಲ್ಲಿರುವ ಪಾಚಿರ್ ವಾ ಅಗಂ ಜಿಲ್ಲೆಯ ಗೆರಾ ಖೇಲ್‌ ಪ್ರದೇಶದಲ್ಲಿರುವ ಪೊಲೀಸ್‌ ಚೆಕ್‌ಪೋಸ್ಟ್‌ ಮೇಲೆ ಉ್ರಗರು ಸೋಮವಾರ ಸಂಜೆ ದಾಳಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗಾಯಾಳು ಅಧಿಕಾರಿಗಳನ್ನು ನಂಗಾರ್ಹರ್‌ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರವಾಗಲೀ, ಯಾವುದೇ ಉಗ್ರ ಸಂಘಟನೆಯಾಗಲಿ ಘಟನೆ ಸಂಬಂಧ ಹೇಳಿಕೆ ನೀಡಿಲ್ಲ.

ಅಫ್ಗಾನಿಸ್ತಾನದಲ್ಲಿ ಗಲಭೆ ನಿಯಂತ್ರಿಸುವ ಸಲುವಾಗಿ ತಾಲಿಬಾನ್‌ ಮತ್ತು ಅಮೆರಿಕ ನಡುವಣ ಫೆಬ್ರುವರಿ 29 ರಂದು ಶಾಂತಿ ಒಪ್ಪಂದ ನಡೆದಿದೆ. ಆದಾಗ್ಯೂ ದೇಶದಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು