ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಆಮ್ಲಜನಕ ಪೂರೈಕೆ: ತ್ರಿವಳಿಗಳಿಂದ ₹ 2.06 ಕೋಟಿ ಸಂಗ್ರಹ

Last Updated 4 ಮೇ 2021, 6:56 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿ ಕೋವಿಡ್‌ ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುವ ನಿಟ್ಟಿನಲ್ಲಿ ಭಾರತೀಯ–ಅಮೆರಿಕನ್‌ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಮೂವರು (ತ್ರಿವಳಿ) ₹2.06 ಕೋಟಿ(280,000 ಡಾಲರ್‌) ಸಂಗ್ರಹಿಸಿದ್ದಾರೆ.

ಇವರು ‘ಲಿಟಲ್‌ ಮೆಂಟರ್ಸ್‌’ ಸಂಘಟನೆಯ ಸ್ಥಾಪಕರಾಗಿದ್ದಾರೆ. ತಮ್ಮ ಶಾಲೆಯ ಸ್ನೇಹಿತರು ಮತ್ತು ಕುಟುಂಬದವರ ಸಹಾಯದಿಂದ ಇವರು ₹2.06 ಕೋಟಿಯನ್ನು ಸಂಗ್ರಹಿಸಿದ್ದಾರೆ.

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಆಸ್ಪತ್ರೆ ಮತ್ತು ರೋಗಿಗಳಿಗೆ ಆಮ್ಲಜನಕ ಪೂರೈಕೆ ಪರಿಕರ, ವೆಂಟಿಲೇರ್‌ಗಳ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಈ ಹಣವನ್ನು ಬಳಸಲಿದ್ದಾರೆ.

‘ನಿಮಗೆ ಆ ವೈದ್ಯಕೀಯ ಸಲಕರಣೆಗಳ ಅವಶ್ಯಕತೆಯಿಲ್ಲದಾಗ ಅವುಗಳನ್ನು ನಮಗೆ ವಾಪಸ್‌ ನೀಡಬೇಕು. ನಾವು ಅವನ್ನು ಬೇರೆ ರೋಗಿಗಳಿಗೆ ನೀಡುತ್ತೇವೆ. ಇದು ನಮ್ಮ ಏಕೈಕ ವಿನಂತಿ. ಈ ಸಲಕರಣೆಗಳು ಬಹಳ ಮಹತ್ವದ್ದಾಗಿವೆ. ಈ ದೊಡ್ಡ ಕೆಲಸವನ್ನು ಮಾಡಲು ನಮಗೆ ನಿಮ್ಮೆಲ್ಲರ ಸಹಕಾರ ಬೇಕು’ ಎಂದು 15 ವರ್ಷದ ತ್ರಿವಳಿಗಳಾದ ಗಿಯಾ, ಕರೀನಾ, ಅರ್ಮನ್‌ ಗುಪ್ತಾ ಅವರು ಹೇಳಿದ್ದಾರೆ.

‌ಇವರು, ಭಾರತಕ್ಕೆ ಅಗತ್ಯವಸ್ತುಗಳನ್ನು ಪೂರೈಸುವಂತೆ ಅಮೆರಿಕದ ಸಂಸದರಲ್ಲಿ ಈ ಹಿಂದೆ ಮನವಿ ಮಾಡಿದ್ದರು. ಇವರು ಭಾರತದ ಪ್ರಮುಖ ನಗರದಲ್ಲಿ ವಿತರಣಾ ಕೇಂದ್ರಗಳನ್ನು ತೆರೆಯಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT