ಸುನಕ್ ಸಾಗಿ ಬಂದ ಹಾದಿ

2015: ಯಾರ್ಕ್‌ಶೈರ್‌ನ ರಿಚ್‌ಮಂಡ್ ಕ್ಷೇತ್ರದ ಸಂಸದರಾಗಿ ಆಯ್ಕೆ

2016: ಬ್ರೆಕ್ಸಿಟ್‌ನಿಂದ ದೇಶ ಹೊರಬೇಕೆಂಬ ಅಚಲ ನಿಲುವು

2018: ಥೆರೆಸಾ ಮೇ ಅವರ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ನಿರ್ವಹಣೆ. ಹೊಸದಾಗಿ ಮರುನಾಮಕರಣಗೊಂಡ ವಸತಿ, ಸಮುದಾಯ ಮತ್ತು ಸ್ಥಳೀಯ ಸರ್ಕಾರಗಳ ಸಚಿವಾಲಯದ ಜವಾಬ್ದಾರಿ

2019–ಜುಲೈ: ಬೋರಿಸ್ ಜಾನ್ಸನ್ ಅವರ ಸರ್ಕಾರದಲ್ಲಿ ಚಾನ್ಸಲರ್ ಸಾಜಿದ್ ಜಾವಿದ್ ಅವರ ಅಧೀನದಲ್ಲಿ ಹಣಕಾಸು ಸಚಿವರಾಗಿ, ಹೊಸ ನಾಯಕನಾಗಿ ಗುರುತಿಸಿಕೊಂಡರು

2020– ಫೆಬ್ರುವರಿ: ಪ್ರಧಾನಿಯೊಂದಿಗೆ ಅಧಿಕಾರ ಸಂಘರ್ಷದಿಂದ ಜಾವಿದ್ ರಾಜೀನಾಮೆ ನಂತರ ಚಾನ್ಸಲರ್ ಆಗಿ ಪದೋನ್ನತಿ. ಬ್ರಿಟನ್ ಸರ್ಕಾರದಲ್ಲಿ ಅತ್ಯುನ್ನತ ಸಚಿವಾಲಯ ಮುನ್ನಡೆಸಿದ ಮೊದಲಭಾರತೀಯ ಎನ್ನುವಶ್ರೇಯ

2020– ಏಪ್ರಿಲ್: ಕೋವಿಡ್–19 ಸಾಂಕ್ರಾಮಿಕದಿಂದ ಮಾರ್ಚ್‌ನಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರಿಕೆ. ಹಣ ಉಳಿತಾಯ ಮತ್ತು ಉದ್ಯೋಗ ಹಾಗೂ ವಾಣಿಜ್ಯ ವ್ಯವಹಾರ ರಕ್ಷಣೆಗಾಗಿ ಪರಿಹಾರ ಯೋಜನೆಗಳನ್ನು ಪರಿಚಯಿಸಲು ಸರಣಿ ಮಿನಿ ಬಜೆಟ್ ಮಂಡನೆ, ದೇಶದ ಜನತೆಯಿಂದ ಪ್ರಶಂಸೆ

2021: ಬೋರಿಸ್‌ಜಾನ್ಸನ್ ಅವರಿಗೆ ಪಾರ್ಟಿಗೇಟ್ ಹಗರಣ ಸುತ್ತಿಕೊಂಡಾಗ ಅವರ ಉತ್ತರಾಧಿಕಾರಿ ಎಂದೇ ಬಿಂಬಿತ

2022:ಲಾಕ್ ಡೌನ್ ನಿಯಮ ಉಲ್ಲಂಘಿಸಿ ಡೌನಿಂಗ್ ಸ್ಟ್ರೀಟ್‌ನ ಕ್ಯಾಬಿನೆಟ್ ಕೊಠಡಿಯಲ್ಲಿ ಜಾನ್ಸನ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದಾಗಿ ಒಪ್ಪಿಕೊಂಡರು

2022– ಏಪ್ರಿಲ್: ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವುದಕ್ಕೆ ಮತ್ತು ಪತ್ನಿಯು ಬ್ರಿಟನ್‌ಗೆ ತೆರಿಗೆ ಪಾವತಿಸುತ್ತಿರುವುದಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ

2022 ಜುಲೈ: ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ಸಾಜಿದ್ ಜಾವಿದ್ ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಚಾನ್ಸಲರ್ ಸ್ಥಾನಕ್ಕೆ ಸುನಕ್ ರಾಜೀನಾಮೆ

2022–ಜುಲೈ 8: ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಪ್ರಧಾನಿ ಹುದ್ದೆಗೆ ಸ್ಪರ್ಧೆ ಘೋಷಣೆ

ಜುಲೈ 20: ಪ್ರಧಾನಿ ಚುನಾವಣೆಯಲ್ಲಿ 137 ಮತಗಳನ್ನು ಪಡೆದು ತಮ್ಮ ಎದುರಾಳಿ ಲಿಜ್ ಟ್ರಸ್‌ಗಿಂತ ಮುನ್ನಡೆ

ಆಗಸ್ಟ್ 5:ಟಿ.ವಿ ಚರ್ಚೆಯಲ್ಲಿ ಮತದಾರರ ಬೆಂಬಲದಿಂದ ಜಯ

ಸೆಪ್ಟೆಂಬರ್ 5: ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಲಿಜ್ ಟ್ರಸ್ ಎದುರು ಸೋಲು

ಅಕ್ಟೋಬರ್ 14: ಆರ್ಥಿಕ ಪ್ರಕ್ಷುಬ್ಧತೆಯ ನಡುವೆ ಚಾನ್ಸಲರ್ ಹುದ್ದೆಯಿಂದ ಕ್ವಾಸಿ ಕ್ವಾರ್ಟೆಂಗ್ ಅವರನ್ನು ವಜಾಗೊಳಿಸಿದ ಲಿಜ್ ಟ್ರಸ್

ಅಕ್ಟೋಬರ್ 20: ಸ್ವಪಕ್ಷೀಯರ ಬಹಿರಂಗ ಬಂಡಾಯದಿಂದ ಟ್ರಸ್ ರಾಜೀನಾಮೆ, ಆರು ವಾರಗಳ ಅಧಿಕಾರಕ್ಕೆ ಇತಿಶ್ರೀ

ಅಕ್ಟೋಬರ್ 24: ತ್ವರಿತಗತಿಯ ಚುನಾವಣೆಯಲ್ಲಿ ಅಂತಿಮ ಕಣದಿಂದ ಬೋರಿಸ್ ಜಾನ್ಸನ್ ನಿರ್ಗಮನ, ಕೊನೆ ಕ್ಷಣದಲ್ಲಿ ಪೆನ್ನಿ ಮೊರ್ಡಾಂಟ್ ಕೂಡ ನಿರ್ಗಮನ; ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.