ಗುರುವಾರ , ಅಕ್ಟೋಬರ್ 29, 2020
26 °C

ವೀಸಾ ಅವಧಿಗೆ ಮಿತಿ: ಟ್ರಂಪ್‌ ಆಡಳಿತದಿಂದ ಪ್ರಸ್ತಾವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಪತ್ರಕರ್ತರು ಹೊಂದಿರುವ ವೀಸಾ ಅವಧಿಗೆ ಮಿತಿ ಹೇರುವ ಪ್ರಸ್ತಾವವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಮುಂದಿಟ್ಟಿದೆ.

ವೀಸಾ ಸೌಲಭ್ಯದ ದುರ್ಬಳಕೆ, ರಾಷ್ಟ್ರೀಯ ಭದ್ರತೆಗೆ ಅಪಾಯದ ಸಾಧ್ಯತೆ ಎಂದು ಕಳವಳ ವ್ಯಕ್ತಪಡಿಸಿರುವ ಟ್ರಂಪ್‌ ಆಡಳಿತ, ಈಗ ಈ ವೀಸಾ ಅವಧಿಗೆ ಮಿತಿ ಹೇರಲು ಮುಂದಾಗಿದೆ. ಈ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. 

‘ಉದ್ದೇಶಿತ ಕ್ರಮ ನಿರ್ದಿಷ್ಟ ದೇಶವೊಂದಕ್ಕೆ ಅನ್ವಯ ಅಲ್ಲ. ಆದರೆ, ವೀಸಾ ನೀಡುವ ವ್ಯವಸ್ಥೆಯಲ್ಲಿ ಈಗ ಕೆಲವೊಂದು ನ್ಯೂನತೆಗಳಿವೆ. ಈ ನ್ಯೂನತೆಗಳನ್ನೇ ಬಳಸಿ ಚೀನಾ ಮೂಲದ ಕೆಲವರು ವೀಸಾ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅದೇ ರೀತಿ ಚೀನಾ ಮೂಲದ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಪತ್ರಕರ್ತರೇ ಹೆಚ್ಚು ಲಾಭ ಪಡೆದಿದ್ದಾರೆ’ ಎಂದು ಮೂಲಗಳು ಹೇಳಿವೆ.

ಪ್ರಸ್ತಾವಿತ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳಿಗೆ ನೀಡುವ ವೀಸಾ (ಎಫ್‌ ವೀಸಾ), ಸಂಶೋಧಕರ ವೀಸಾ (ಜೆ) ಅವಧಿಯು ಕ್ರಮವಾಗಿ ಅವರು ಕೈಗೊಳ್ಳುವ ಅಧ್ಯಯನ ಅಥವಾ ಸಂಶೋಧನೆಗೆ ನಿಗದಿಪಡಿಸಿದ ಅಂತಿಮ ದಿನಾಂಕದವರೆಗೆ ಇಲ್ಲವೇ ಗರಿಷ್ಠ ನಾಲ್ಕು ವರ್ಷಗಳವರೆಗೆ ಇರಲಿದೆ ಎಂದು ಆಂತರಿಕ ಭದ್ರತಾ ಇಲಾಖೆ (ಡಿಎಚ್‌ಎಸ್‌) ತಿಳಿಸಿದೆ.

‘ದೇಶದ ಶಿಕ್ಷಣ ವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಪ್ಪಿಸಲು, ವಲಸೆ ಕಾನೂನುಗಳನ್ನು ಮತ್ತಷ್ಟೂ ಕಠಿಣಗೊಳಿಸುವ ಸಂಬಂಧ ವೀಸಾ ನಿಯಮಗಳಿಗೆ ತಿದ್ದುಪಡಿ ತರುವುದು ಅಗತ್ಯ’ ಎಂದು ಹಿರಿಯ ಅಧಿಕಾರಿ ಕೆನ್‌ ಕಕಿನೆಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು