ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಎಂದೂ ಒಪ್ಪದ್ದನ್ನು, ಅವರ ಪರ ವಕೀಲರು ಒಪ್ಪಿದ್ದಾರೆ: ಬ್ರೂಸ್ ಕ್ಯಾಸ್ಟರ್

ಅಮೆರಿಕನ್ನರು ಇಷ್ಟವಾಗದಿದ್ದನ್ನು ಸೋಲಿಸುತ್ತಾರೆ: ಬ್ರೂಸ್ ಕ್ಯಾಸ್ಟರ್
Last Updated 10 ಫೆಬ್ರುವರಿ 2021, 7:13 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ಸೋತಿದ್ದನ್ನು ಎಂದೂ ಒಪ್ಪಿಕೊಳ್ಳಲಿಲ್ಲ, ಆದರೆ ಅವರಿಗೆ ಎರಡನೇ ಬಾರಿಗೆ ವಾಗ್ದಂಡನೆ ವಿಧಿಸುವ ವೇಳೆ ಅವರ ಪರ ವಕಾಲತ್ತು ವಹಿಸಿದ್ದ ವಕೀಲರು, ಜೋ ಬೈಡನ್ ಗೆಲುವನ್ನು ಒಪ್ಪಿಕೊಂಡಿದ್ದಾರೆ.

ಈ ಕುರಿತು ಮಂಗಳವಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವಕೀಲ ಬ್ರೂಸ್ ಕ್ಯಾಸ್ಟರ್ ‘ ಅಮೆರಿಕದ ಜನರು ಹಳೆಯದನ್ನು ಇಷ್ಟಪಡದಿದ್ದರೆ ಹೊಸ ಆಡಳಿತವನ್ನು ಆಯ್ಕೆಮಾಡುವಷ್ಟು ಚಾಣಾಕ್ಷರು ಮತ್ತು ಅವರು ಹಾಗೆಯೇ ಮಾಡಿದ್ದಾರೆ‘ ಎಂದು ಜೋ ಬೈಡನ್ ಆಯ್ಕೆ ಉಲ್ಲೇಖಿಸದೇ ಹೇಳಿದರು.

ಪೆನ್ಸಿಲ್ವೇನಿಯಾದ ಮಾಜಿ ಪ್ರಾಸಿಕ್ಯೂಟರ್ ಆಗಿರುವ ಕ್ಯಾಸ್ಟರ್ ಅವರ ಈ ಟೀಕೆಗಳು ಆಶ್ಚರ್ಯ ಮೂಡಿಸಿದ್ದು, ಟ್ರಂಪ್ ಅವರ ನಿಲುವಿಗೆ ವ್ಯತಿರಿಕ್ತವಾಗಿದೆ.

ಮಾಜಿ ಅಧ್ಯಕ್ಷ ಟ್ರಂಪ್ ತಮ್ಮ ಅಧಿಕಾರಾವಧಿಯ ಕೊನೆಯವರೆಗೂ ಚುನಾವಣೆಯ ಫಲಿತಾಂಶದ ವಿರುದ್ಧ ಮಾತನಾಡುತ್ತಾ, ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರು. ಜನವರಿ 6ರಂದು ಕ್ಯಾಪಿಟಲ್‌ ಮೇಲೆ ನಡೆದ ದಾಳಿಯನ್ನು ಪ್ರಚೋದಿಸಿದ ಆರೋಪದ ಮೇಲೆ, ಅವರನ್ನು ವಾಗ್ದಂಡನೆಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT