ಬುಧವಾರ, ಅಕ್ಟೋಬರ್ 28, 2020
28 °C
ಚುನಾವಣಾ ರ್‍ಯಾಲಿ

ನನಗೆ ಸೂಪರ್‌ಮ್ಯಾನ್‌ ಅನುಭವವಾಗುತ್ತಿದೆ: ಡೊನಾಲ್ಡ್ ಟ್ರಂಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಕೊರೊನಾ ಸೋಂಕಿಗೆ ಪ್ರಾಯೋಗಿಕ ಔಷಧದ ಚಿಕಿತ್ಸೆ ಪಡೆದ ನಂತರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದು, ನನಗೆ ‘ಸೂಪರ್‌ಮ್ಯಾನ್‌‘ ರೀತಿಯ ಅನುಭವವಾಗುತ್ತಿದೆ‘ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ಕೊರೊನಾದಿಂದ ಗುಣಮುಖರಾದ ನಂತರ ಪೆನ್ಸಿಲ್ವೇನಿಯಾದ ಜಾನ್ಸ್‌ಟೌನ್‌ನಲ್ಲಿ ನಡೆದ ಎರಡನೇ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್‌, ಕಿಕ್ಕಿರಿದು ತುಂಬಿದ್ದ ಸಾರ್ವಜನಿಕರ ಎದುರು, ‘ಕೊರೊನಾ ಚಿಕಿತ್ಸೆ ನಂತರ ನನಗೆ ಸೂಪರ್‌ ಮ್ಯಾನ್‌‘ನಂತಹ ಅನುಭವವಾಗುತ್ತಿದೆ‘ ಎಂದು ಹೇಳಿದರು.

ಇದೇ ವೇಳೆ ಕೊರೊನಾಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ, ಶ್ವೇತಭವನದ ವೈದ್ಯರು ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಬಹುದೆಂದು ಅನುಮತಿ ನೀಡಿದ್ದರು. ಇದಾದ ನಂತರ ಸೋಮವಾರದಿಂದ ಪ್ರಾಯೋಗಿಕವಾಗಿ ಫ್ಲೋರಿಡಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಟ್ರಂಪ್ ಭಾಗವಹಿಸಿದ್ದರು.

‘ನನಗೆ ತಿಳಿದಂತೆ ಉತ್ತಮ ಚಿಕಿತ್ಸೆ ಪಡೆದಿದ್ದೇನೆ. ಉತ್ತಮ ಅನುಭವವನ್ನೂ ಪಡೆದಿದ್ದೇನೆ. ಪ್ರತಿಕಾಯಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೂ ಅದನ್ನು ತೆಗೆದುಕೊಂಡೆ. ಒಟ್ಟಾರೆ ಈಗ ಸೂಪರ್‌ಮ್ಯಾನ್‌ನಂತಹ ಅನುಭವವಾಗುತ್ತಿದೆ‘ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು