ಶುಕ್ರವಾರ, ಡಿಸೆಂಬರ್ 4, 2020
24 °C

ಅಲಾಸ್ಕಾದಲ್ಲಿ ಟ್ರಂಪ್‌ಗೆ ಗೆಲುವು, ಎಲೆಕ್ಟೋರ್‌ಮತ 217ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಯಗಳಿಸಿದ್ದಾರೆ. ಮೂರು ಎಲೆಕ್ಟೋರ್‌ ಮತಗಳನ್ನೂ ಪಡೆದಿದ್ದು ಇವರ ಎಲೆಕ್ಟೋರ್‌ ಮತ ಒಟ್ಟು 217 ಆಗಿದೆ.

ರಿಪಬ್ಲಿಕನ್‌ ಪಕ್ಷ ಇಲ್ಲಿ ಸೆನೆಟ್‌ ಸ್ಥಾನವನ್ನೂ ಉಳಿಸಿಕೊಂಡಿದೆ. ಪಕ್ಷದ  ಡಾನ್‌ ಸುಲೈವನ್‌ ಅವರು ಜಯ ಗಳಿಸಿದ್ದಾರೆ

ಅಮೆರಿಕದ ಸೆನೆಟ್‌ನಲ್ಲಿ ಒಟ್ಟು 100 ಸದಸ್ಯರಿದ್ದು ರಿಪಬ್ಲಿಕನ್‌ ಪಕ್ಷ ಈಗ ಒಟ್ಟು 50 ಸದಸ್ಯರನ್ನು ಹೊಂದಿದೆ.

ಡೆಮಾಕ್ರಟಿಕ್‌ ಪಕ್ಷ 48 ಸ್ಥಾನಗಳನ್ನು ಹೊಂದಿದ್ದು ಸೆನೆಟ್‌ನ 2 ಸ್ಥಾನಗಳಿಗೆ ಜನವರಿ 5ರಂದು ಚುನಾವಣೆ ನಡೆಯಲಿದೆ.

ಒಟ್ಟು 538 ಎಲೆಕ್ಟೋರ್‌ ಮತಗಳ ಪೈಕಿ ಜೋ ಬೈಡನ್‌ ಅವರು 279 ಮತಗಳನ್ನು ಪಡೆದಿದ್ದು ಈಗಾಗಲೇ ಅವರನ್ನು ವಿಜಯಿ ಎಂದು ಘೋಷಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು