ಶನಿವಾರ, ಫೆಬ್ರವರಿ 27, 2021
30 °C

ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹೆಸರಿನ ನಕಲಿ ಖಾತೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹೆಸರಿನ ನಕಲಿ ಖಾತೆಯನ್ನು ಟ್ವಿಟರ್‌ ನಿಷೇಧಿಸಿದೆ.

ಆಯತೊಲ್ಲಾ ಅಲಿ ಖಮೇನಿ ಎಂಬ ಹೆಸರಿನ ಖಾತೆಯಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಜೀವ ಬೆದರಿಕೆಯ ಪೋಸ್ಟ್‌ ಹಾಕಲಾಗಿತ್ತು. ಸದ್ಯ ಈ ಖಾತೆ ನಕಲಿ ಎಂದು ಸಾಬೀತಾಗಿದೆ. 

ಈ ನಕಲಿ ಖಾತೆಯಿಂದ ಟ್ರಂಪ್‌ ಗಾಲ್ಫ್ ಆಡುತ್ತಿರುವ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಇದರೊಂದಿಗೆ ‘ಸೇಡು ನಿಶ್ಚಿತ’ ಎಂದು ಬರೆಯಲಾಗಿತ್ತು.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್‌ ವಕ್ತಾರ,‘ ಈ ಟ್ವೀಟ್‌, ಸಂಸ್ಥೆಯ ಹಲವು ನೀತಿಗಳನ್ನು ಉಲ್ಲಂಘಿಸಿದೆ. ಆದರೆ ಆಯತೊಲ್ಲಾ ಅಲಿ ಖಮೇನಿ ಅವರ ಹೆಸರಿನಲ್ಲಿರುವ ಈ ಖಾತೆಯು ನಕಲಿ ಎಂದು ತಿಳಿದುಬಂದಿದೆ’ ಎಂದರು.

@khamenei_site ಎಂಬ ಟ್ವಿಟರ್‌ ಖಾತೆಯನ್ನು ನಿಷೇಧಿಸಲಾಗಿದ್ದು, ಈ ಖಾತೆಯು ಖಮೇನಿ ಅವರ ಅಧಿಕೃತ ವೆಬ್‌ಸೈಟ್‌ನೊಂದಿಗೆ ಲಿಂಕ್‌ ಆಗಿದೆ. ಅಲ್ಲದೆ ಈ ಖಾತೆಯಲ್ಲಿ ಖಮೇನಿ ಅವರ ಭಾಷಣಗಳು ಸೇರಿದಂತೆ ಇತರೆ ಅಧಿಕೃತ ವಿಷಯಗಳನ್ನು ಕೂಡ ಪೋಸ್ಟ್‌ ಮಾಡಲಾಗಿತ್ತು.

ಕಳೆದ ವರ್ಷ ಅಮೆರಿಕವು ಬಾಗ್ದಾದ್‌ನಲ್ಲಿ ಡ್ರೋನ್‌ ಮೂಲಕ ಕ್ಷಿಪಣಿ ದಾಳಿ ನಡೆಸಿ ಇರಾನ್‌ ಸೇನೆಯ ‘ರೆವಲ್ಯೂಷನ್ ಗಾರ್ಡ್‌’ ಪಡೆಯ ಮುಖ್ಯಸ್ಥ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಅವರ ಹತ್ಯೆ ಮಾಡಿತ್ತು.

ಕಳೆದ ತಿಂಗಳು ಈ ಬಗ್ಗೆ ಪ್ರತಿಕ್ರಿಯಿಸಿದ ಖಮೇನಿ ಅವರು, ಸುಲೇಮಾನಿ ಅವರ ಹತ್ಯೆಗೆ ಆದೇಶ ನೀಡಿದವರ ವಿರುದ್ಧ ಪ್ರತಿಕಾರ ತೀರಿಸುವುದಾಗಿ ಹೇಳಿದ್ದರು. ಸರಿಯಾದ ಸಮಯದಲ್ಲಿ ಈ ಪ್ರತಿಕಾರವನ್ನು ತೀರಿಸಿಕೊಳ್ಳಲಾಗುವುದು ಎಂದು ಟ್ರಂಪ್‌ ಹೆಸರನ್ನು ಪ್ರಸ್ತಾಪಿಸದೆ ಆಕ್ರೋಶ ವ್ಯಕ್ತಪಡಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು