ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನ ಭವಿಷ್ಯ ಅನಿಶ್ಚಿತ: ಸಿಬ್ಬಂದಿ ಪ್ರಶ್ನೆಗೆ ಸಿಇಒ ಅಗರವಾಲ್‌ ಉತ್ತರ 

Last Updated 26 ಏಪ್ರಿಲ್ 2022, 5:55 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು ವಿಶ್ವದ ನಂಬರ್‌ 1 ಶ್ರೀಮಂತ ಎಲಾನ್‌ ಮಸ್ಕ್‌ಗೆ ಮಾರಾಟ ಮಾಡುವ ತೀರ್ಮಾನ ಕೈಗೊಂಡ ಬಳಿಕ ಸಂಸ್ಥೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪರಾಗ್‌ ಅಗರವಾಲ್‌, ‘ಟ್ವಿಟರ್‌ನ ಭವಿಷ್ಯ ಅನಿಶ್ಚಿತವಾಗಿದೆ’ ಎಂದಿದ್ದಾರೆ.

ಕಂಪನಿಯ ಸಿಬ್ಬಂದಿಯನ್ನು ಒಳಗೊಂಡ ‘ಟೌನ್‌ಹಾಲ್‌ ಮೀಟಿಂಗ್’ನಲ್ಲಿ ಅಗರವಾಲ್‌ ಸೋಮವಾರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಮಾತುಕತೆ, ಪ್ರಶ್ನೋತ್ತರಗಳಿಗಾಗಿ ಮಸ್ಕ್‌ ಅವರು ಶೀಘ್ರದಲ್ಲೇ ಸಿಬ್ಬಂದಿಯನ್ನು ಎದುರಾಗಲಿದ್ಗಾರೆ ಎಂದು ಸಂಸ್ಥೆ ತನ್ನ ಉದ್ಯೋಗಿಗಳಿಗೆ ತಿಳಿಸಿದೆ.

ಕಂಪನಿಗಾಗಿ ಮಸ್ಕ್‌ ಅವರ ಯೋಜನೆಗಳು, ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಗಳು ಮತ್ತು ಆಡಳಿತ ಮಂಡಳಿಯ ನಿಲುವುಗಳ ಬಗ್ಗೆ ಸಿಬ್ಬಂದಿ ಅಗರವಾಲ್ ಅವರನ್ನು ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಹಲವು ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದರು.

ಖರೀದಿ ಒಪ್ಪಂದ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಪ‍್ರಾಯ ಹಂಚಿಕೊಂಡಿರುವ ಮಸ್ಕ್‌, ‘ವಾಕ್ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿ. ಟ್ವಿಟರ್ ಡಿಜಿಟಲ್ ವೇದಿಕೆಯಾಗಿದ್ದು, ಮಾನವೀಯ ಭವಿಷ್ಯಕ್ಕೆ ಅಗತ್ಯವಾದ ಪ್ರಮುಖ ಸಂಗತಿಗಳು ಇಲ್ಲಿ ಚರ್ಚೆಯಾಗಲಿವೆ’ ಎಂದು ಹೇಳಿದ್ದಾರೆ

ಇನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬಗ್ಗೆಯೂ ಟ್ವಿಟರ್‌ ಸಿಬ್ಬಂದಿ ಅಗರವಾಲ್‌ ಅವರ ಬಳಿ ಪ್ರಶ್ನೆ ಮಾಡಿದರು. ಸಂಸ್ಥೆಯನ್ನು ಮಸ್ಕ್‌ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡ ಮೇಲೆ ಟ್ವಿಟರ್‌ನಲ್ಲಿ ಟ್ರಂಪ್‌ಗೆ ಮತ್ತೆ ಅವಕಾಶ ಸಿಗುವುದೇ ಎಂದು ಸಿಬ್ಬಂದಿ ಕೇಳಿದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಟ್ರಂಪ್‌ ಅವರ ನಡವಳಿಕೆಗಳ ಹಿನ್ನೆಲೆಯಲ್ಲಿ ಅವರ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಲಾಗಿದೆ.

‘ಒಮ್ಮೆ ಖರೀದಿ ಒಪ್ಪಂದವು ಮುಗಿದ ಕೂಡಲೇ, ಸಂಸ್ಥೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದು ನಮಗೆ ತಿಳಿಯುವುದಿಲ್ಲ’ ಎಂದು ಟ್ರಂಪ್‌ಗೆ ಸಂಬಂಧಿಸಿದ ಪ್ರಶ್ನೆಯನ್ನು ಉಲ್ಲೇಖಿಸಿ ಅಗರವಾಲ್ ಉತ್ತರಿಸಿದರು. ‘ನಾವು ಎಲಾನ್ ಅವರೊಂದಿಗೆ ಮಾತನಾಡಲು ಅವಕಾಶಗಳನ್ನು ಹೊಂದಿರುವಾಗ, ಅವರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅವರಿಗೇ ಕೇಳಬೇಕು ಎಂದು ನಾನು ನಂಬಿದ್ದೇನೆ’ ಎಂದು ಅಗರವಾಲ್‌ ಹೇಳಿದರು.

ಉದ್ಯೋಗಿಗಳನ್ನು ವಜಾಗೊಳಿಸುವ ಯಾವುದೇ ಯೋಜನೆಗಳು ಸದ್ಯ ಕಂಪನಿ ಎದುರು ಇಲ್ಲ ಎಂದು ಅಗರವಾಲ್ ಇದೇ ವೇಳೆ ಉದ್ಯೋಗಿಗಳಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT