ಶನಿವಾರ, ಜುಲೈ 2, 2022
25 °C

ದುಬೈ: ಹೂತಿ ಭಯೋತ್ಪಾದಕರು ಹಾರಿಸಿದ ಕ್ಷಿಪಣಿ ಧ್ವಂಸಗೊಳಿಸಿದ ಯುಎಇ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಯೆಮನ್‌ನ ಹೂತಿ ಭಯೋತ್ಪಾದಕರ ಗುಂಪು ತನ್ನತ್ತ ಹಾರಿಸಿದ ಖಂಡಾಂತರ ಕ್ಷಿಪಣಿಯೊಂದನ್ನು ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ರಕ್ಷಣಾ ಪಡೆಗಳು ತಡೆದು ಹೊಡೆದುರುಳಿಸಿವೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ. 

ಇಸ್ರೇಲ್‌ನ ಅಧ್ಯಕ್ಷ ಐಸಾಕ್‌ ಹೆರ್ಜಾಗ್ ಅವರ ಐತಿಹಾಸಿಕ ಭೇಟಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಕ್ಷಿಪಣಿ ದಾಳಿಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಕ್ಷಿಪಣಿಯ ತುಣುಕುಗಳು ವಸತಿ ಪ್ರದೇಶದ ಹೊರಗೆ ಬಿದ್ದಿವೆ. ಕ್ಷಿಪಣಿ ನಾಶಪಡಿಸುವಲ್ಲಿ ಯುಎಇ ರಕ್ಷಣಾ ಪಡೆಗಳು ಮತ್ತು ಒಕ್ಕೂಟದ ಕಮಾಂಡ್‌ಗಳು ಯಶಸ್ವಿಯಾಗಿವೆ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. 

ಯೆಮನ್‌ನ ಅಲ್‌ ಜಾಫ್‌ನಲ್ಲಿ ಕ್ಷಿಪಣಿಯನ್ನು ರಾತ್ರಿ 12.50ಕ್ಕೆ (ಸ್ಥಳೀಯ ಕಾಲಮಾನ) ನಾಶಪಡಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಟ್ವೀಟ್‌ ಮಾಡಿದ್ದು ನಾಶಪಡಿಸುತ್ತಿರುವ ವಿಡಿಯೊವನ್ನು ಸಹ ಹಂಚಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು