ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ಜನನಿಬಿಡ ಪ್ರದೇಶ ಗುರಿಯಾಗಿಸುತ್ತಿರುವ ರಷ್ಯಾ: ಬ್ರಿಟನ್ ಗುಪ್ತಚರ

Last Updated 6 ಮಾರ್ಚ್ 2022, 9:08 IST
ಅಕ್ಷರ ಗಾತ್ರ

ಲಂಡನ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಜನನಿಬಿಡ ಪ್ರದೇಶವನ್ನು ರಷ್ಯಾ ಗುರಿಯಾಗಿಸುತ್ತಿದೆ ಎಂದು ಬ್ರಿಟನ್ ಮಿಲಿಟರಿ ಗುಪ್ತಚರ ಇಲಾಖೆ ಭಾನುವಾರ ಹೇಳಿಕೆ ನೀಡಿದೆ.

ಆದರೆ ಉಕ್ರೇನ್ ಪ್ರತಿರೋಧದ ಶಕ್ತಿಯು ರಷ್ಯಾವನ್ನು ಅಚ್ಚರಿಗೊಳಿಸಿದ್ದು, ಮುನ್ನಡೆಯನ್ನು ನಿಧಾನಗೊಳಿಸುತ್ತಿದೆ ಎಂದು ಹೇಳಿದೆ.

ಹಾರ್ಕಿವ್, ಮರಿಯುಪೋಲ್ ನಗರಗಳು ಸೇರಿದಂತೆ ಹಲವೆಡೆ ಜನನಿಬಿಡ ಪ್ರದೇಶಗಳನ್ನು ರಷ್ಯಾ ಗುರಿಯಾಗಿಸಿಕೊಳ್ಳುತ್ತಿದೆ ಎಂದು ತಿಳಿಸಿದೆ.

2016ರಲ್ಲಿ ಸಿರಿಯಾದಲ್ಲೂ ರಷ್ಯಾ ಇದೇ ರೀತಿಯ ಯುದ್ಧ ತಂತ್ರವನ್ನು ಬಳಕೆ ಮಾಡಿತ್ತು ಎಂದು ಬ್ರಿಟನ್ ಮಿಲಿಟರಿ ಗುಪ್ತಚರಇಲಾಖೆ ವರದಿ ಮಾಡಿದೆ.

ಇನ್ನೊಂದೆಡೆ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂಬ ಆರೋಪವನ್ನು ರಷ್ಯಾ ಪದೇ ಪದೇ ನಿರಾಕರಿಸುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT