ಮಂಗಳವಾರ, ಮಾರ್ಚ್ 21, 2023
29 °C
ಬ್ರಿಟನ್ ಪ್ರಧಾನಿ ಬದಲು ಸಚಿವರು ಭಾಗವಹಿಸುವ ನಿರೀಕ್ಷೆ

ವಿಶ್ವಸಂಸ್ಥೆಯ ಹವಾಮಾನ ಸಮಾವೇಶಕ್ಕೆ ಸುನಕ್ ಗೈರು: ಬ್ರಿಟನ್ ಸರ್ಕಾರ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ‘ನವೆಂಬರ್‌ನಲ್ಲಿ ಈಜಿಪ್ಟ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಪ್ರಮುಖ ಹವಾಮಾನ ಸಮಾವೇಶದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪಾಲ್ಗೊಳ್ಳುವುದಿಲ್ಲ’ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. 

‘ನವೆಂಬರ್ 17ರಂದು ಬ್ರಿಟನ್‌ನ ತುರ್ತು ಬಜೆಟ್‌ನ ಸಿದ್ಧತೆಗಳು ಸೇರಿದಂತೆ ಕೆಲ ಮುಖ್ಯವಾದ ಕಾರ್ಯಗಳಿವೆ. ಹಾಗಾಗಿ ರಿಷಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಿಲ್ಲ. ರಿಷಿ ಅವರ ಬದಲಾಗಿ ಬ್ರಿಟನ್‌ನ ಹಿರಿಯ ಸಚಿವರು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಸುನಕ್ ಅವರ ಕಚೇರಿಯ ಮೂಲಗಳು ತಿಳಿಸಿವೆ. 

‘ಕಾಪ್ 27’ ಎಂದೇ ಕರೆಯಲಾಗುವ ಹವಾಮಾನ ಸಮಾವೇಶದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ಹೇಗೆ ಎದುರಿಸುವುದು ಎನ್ನುವುದರ ಕುರಿತು ಚರ್ಚಿಸಲು ಸುಮಾರು 200 ದೇಶಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶವು ನ. 6ರಿಂದ ಈಜಿಪ್ಟ್‌ನಲ್ಲಿ ನಡೆಯಲಿದೆ. 

ಕಳೆದ ವರ್ಷ ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ಆಯೋಜನೆಯಾಗಿದ್ದ ‘ಕಾಪ್ 26’ ಸಮ್ಮೇಳನದಲ್ಲಿ ಬ್ರಿಟನ್‌ನ ಆಗಿನ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು