ಲಂಡನ್: ಬ್ರಿಟನ್ನಿನ ಕೆಲವು ಪ್ರಮುಖ ಸೂಪರ್ ಮಾರ್ಕೆಟ್‌ಗಳಲ್ಲಿ ಹಣ್ಣು ಮತ್ತು ತರಕಾರಿಗಳ ಖರೀದಿಗೆ ಮಿತಿ ಹೇರಲಾಗಿದೆ.
ಹವಾಮಾನ ವೈಪರೀತ್ಯ ಮತ್ತು ರಷ್ಯಾ–ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಸರಬರಾಜಿನಲ್ಲಿ ಏರುಪೇರಾಗಿದ್ದು, ಕಂಪನಿಗಳ ಈ ನಿರ್ಧಾರಕ್ಕೆ ಕಾರಣವಾಗಿದೆ.
ದಿನಬಳಕೆಯ ಟೊಮೆಟೊ, ಕರಿಮೆಣಸು, ಕ್ಯಾಪ್ಸಿಕಂ, ಸೌತೆಕಾಯಿ, ಬ್ರೊಕೊಲಿ, ಹೂಕೋಸು, ರಸ್‌ಬೆರಿ ಮುಂತಾದ ಹಣ್ಣು ತರಕಾರಿಗಳ ಖರೀದಿಯಲ್ಲಿ ಮಿತಿ ಹೇರಲಾಗಿದೆ.
ದಕ್ಷಿಣ ಯೂರೋಪ್ ಮತ್ತು ಆಫ್ರಿಕಾದಲ್ಲಿ ಕೆಟ್ಟ ಹವಾಗುಣ ಹಾಗೂ ಬ್ರಿಟನ್, ನೆದರ್‌ಲ್ಯಾಂಡ್ಸ್ ಇಂಧನ ಬೆಲೆ ಹೆಚ್ಚಳದಿಂದ ಗ್ರೀನ್ ಹೌಸ್ ಮೇಲೆ ಬೀರಿರುವ ಪರಿಣಾಮ ಕೊರತೆಗೆ ಪ್ರಮುಖ ಕಾರಣಗಳಾಗಿವೆ.
‘ಈ ಪರಿಸ್ಥಿತಿ ಇನ್ನೂ 2ರಿಂದ 4 ವಾರಗಳವರಗೆ ಇರುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಆಹಾರ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ ಥೆರೆಸ್ ಕೊಫೆ ಹೇಳಿದ್ದಾರೆ.
‘ಪರ್ಯಾಯ ಮಾರ್ಗಗಳಿಂದ ಹಣ್ಣು ಮತ್ತು ತರಕಾರಿ ಆಮದಿಗೆ ಪ್ರಯತ್ನ ನಡೆಸಬೇಕಿದೆ. ಆ ಮೂಲಕ ಪರಿಹಾರ ಕಂಡುಕೊಳ್ಳಬಹುದು’ಎಂದೂ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷ ಲೇಬರ್ ಪಾರ್ಟಿಯು, ಆಹಾರ ಪದಾರ್ಥಗಳ ಲಭ್ಯತೆ ಕುರಿತಂತೆ ಸಾರ್ವಜನಿಕರಲ್ಲಿ ಕಳವಳ ಉಂಟಾಗಿದೆ. ಆಹಾರ ಇಲಾಖೆಯ ಕಾರ್ಯದರ್ಶಿ ನಮ್ಮ ಆಹಾರ ಭದ್ರತೆಗೆ ಜವಾಬ್ದಾರರು. ಆಹಾರ ಭದ್ರತೆ ರಾಷ್ಟ್ರೀಯ ಭದ್ರತೆ ಎಂಬುದನ್ನು ನೆನಪಿಡಿ. ಇದು ನಿಜಕ್ಕೂ ಕಠಿಣ ಪರಿಸ್ಥಿತಿ ಎಂದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.