ಸೋಮವಾರ, ಮೇ 23, 2022
27 °C

ಯುದ್ಧದ ಬದಲು ನಿಮ್ಮ ಪ್ರಾಣ ಉಳಿಸಿಕೊಳ್ಳಿ: ರಷ್ಯಾ ಸೈನಿಕರಿಗೆ ಝೆಲೆನ್‌ಸ್ಕಿ ಸಂದೇಶ

ಎಪಿ Updated:

ಅಕ್ಷರ ಗಾತ್ರ : | |

ಕೀವ್: ಯುದ್ಧದಲ್ಲಿ ಸಾವಿರಾರು ಜನರು ಸಾಯುತ್ತಾರೆ ಎಂದು ನಿಮ್ಮ ಜನರಲ್‌ಗಳಿಗೂ ತಿಳಿದಿದೆ. ಹೀಗಿರುವಾಗ ನೀವು ಉಕ್ರೇನ್‌ ಯುದ್ಧದಲ್ಲಿ ಹೋರಾಟ ಮಾಡಬೇಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಮ್ಮ ವಿಡಿಯೊ ಭಾಷಣದಲ್ಲಿ ರಷ್ಯಾದ ಸೈನಿಕರಿಗೆ ಒತ್ತಾಯಿಸಿದರು.

ಯುದ್ಧದ ಆರಂಭಿಕ ವಾರಗಳಲ್ಲಿ ನಾಶವಾಗಿರುವ ಘಟಕಗಳಿಗೆ 'ಕಡಿಮೆ ಪ್ರೇರಣೆ ಮತ್ತು ಕಡಿಮೆ ಯುದ್ಧದ ಅನುಭವ' ಹೊಂದಿರುವವರನ್ನು ಕೂಡ ರಷ್ಯಾ ಹೊಸ ಪಡೆಗಳಾಗಿ ನೇಮಿಸಿಕೊಳ್ಳುತ್ತಿದೆ. ಆದ್ದರಿಂದ ಈ ಘಟಕಗಳನ್ನು ಮತ್ತೆ ಯುದ್ಧಕ್ಕೆ ಬಿಡಬಹುದು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಅವರಲ್ಲಿ ಸಾವಿರಾರು ಜನರು ಸಾವಿಗೀಡಾಗುತ್ತಾರೆ ಮತ್ತು ಸಾವಿರಕ್ಕೂ ಅಧಿಕ ಜನರು ಗಾಯಗೊಳ್ಳುತ್ತಾರೆ ಎಂಬುದು ರಷ್ಯಾದ ಕಮಾಂಡರ್‌ಗಳಿಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಅವರು ಹೇಳಿದರು.

'ಅವರು ಯುದ್ಧದಲ್ಲಿ ಹೋರಾಡಲು ನಿರಾಕರಿಸಿದ್ದಕ್ಕಾಗಿ ರಷ್ಯಾದ ಕಮಾಂಡರ್‌ಗಳು ತಮ್ಮ ಸೈನಿಕರಿಗೆ ಸಾವಿನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಉದಾಹರಣೆಗೆ, ಶವಗಳನ್ನು ಸಂಗ್ರಹಿಸಲು ರಷ್ಯಾದ ಸೈನ್ಯವು ಹೆಚ್ಚುವರಿ ರೆಫ್ರಿಜರೇಟರ್ ಟ್ರಕ್‌ಗಳನ್ನು ಸಿದ್ಧಪಡಿಸುತ್ತಿದೆ. ಜನರಲ್‌ಗಳು ನಿರೀಕ್ಷಿಸುವ ಹೊಸ ನಷ್ಟಗಳ ಬಗ್ಗೆ ಅವರು ಸೈನಿಕರಿಗೆ ಹೇಳುವುದಿಲ್ಲ' ಎಂದು ಝೆಲೆನ್‌ಸ್ಕಿ ಶನಿವಾರ ತಡರಾತ್ರಿ ತಿಳಿಸಿದ್ದಾರೆ.

'ಹೀಗಾಗಿ ಪ್ರತಿ ರಷ್ಯಾದ ಸೈನಿಕನು ಇನ್ನೂ ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದು. ನಮ್ಮ ನೆಲದಲ್ಲಿ ನಾಶವಾಗುವುದಕ್ಕಿಂತ ನೀವು ರಷ್ಯಾದಲ್ಲಿಯೇ ಬದುಕುವುದು ಉತ್ತಮ' ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು