ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ 1,000ಕ್ಕೂ ಹೆಚ್ಚು ಸೈನಿಕರ ಹತ್ಯೆ: ಉಕ್ರೇನ್

Last Updated 25 ಫೆಬ್ರುವರಿ 2022, 14:35 IST
ಅಕ್ಷರ ಗಾತ್ರ

ಕೀವ್ (ಉಕ್ರೇನ್): ಇದುವರೆಗೆ ರಷ್ಯಾದ 1,000ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈಯಲಾಗಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ರಷ್ಯಾಗೆ ಎದುರಾಗಿರುವ ಅತಿ ದೊಡ್ಡ ಹೊಡೆತ ಇದಾಗಿದೆ ಎಂದು ಹೇಳಿದೆ.

ಅಮೆರಿಕ ಹಾಗೂ ನ್ಯಾಟೊ ಮಿತ್ರರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ರಷ್ಯಾ ಫೆಬ್ರುವರಿ 25ರಂದು (ಗುರುವಾರ) ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಎರಡನೇ ದಿನವೂ ರಷ್ಯಾ ಆಕ್ರಮಣ ಮುಂದುವರಿಸಿದ್ದು, ಹಲವು ನಗರಗಳಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ರಾಜಧಾನಿ ಕೀವ್‌‌ನತ್ತ ರಷ್ಯಾದ ಮಿಲಿಟರಿ ಪಡೆ ಮುನ್ನುಗ್ಗುತ್ತಿದೆ. ಇನ್ನೊಂದೆಡೆ ತಿರುಗೇಟು ನೀಡಲುಉಕ್ರೇನ್ ಸರ್ವಪ್ರಯತ್ನವನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT