9 ಎನ್‌ಜಿಒಗಳಿಗೆ ವಿಶ್ವಸಂಸ್ಥೆ ವಿಶೇಷ ಸಮಾಲೋಚನಾ ಸ್ಥಾನದ ಮಾನ್ಯತೆ

ವಿಶ್ವಸಂಸ್ಥೆ: ಚೀನಾ, ರಷ್ಯಾ ಮತ್ತು ಭಾರತ ಸೇರಿ ಹಲವು ದೇಶಗಳು ವಿರೋಧದ ನಡುವೆಯೇ ಒಂಬತ್ತು ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ವಿಶೇಷ ಸಮಾಲೋಚನಾ ಸ್ಥಾನದ ಮಾನ್ಯತೆ ನೀಡಲು ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು (ಇಸಿಒಎಸ್‌ಒಸಿ) ಬುಧವಾರ ಅನುಮೋದನೆ ನೀಡಿದೆ. ದಲಿತದ ಮಾನವ ಹಕ್ಕುಗಳ ಪರ ಕೆಲಸ ಮಾಡುತ್ತಿರವ ಎನ್‌ಜಿಒ ಕೂಡಾ ಈ ಪಟ್ಟಿಯಲ್ಲಿ ಸೇರಿದೆ.
ಎನ್‌ಜಿಒಗಳಿಗೆ ವಿಶೇಷ ಸಮಾಲೋಚನಾ ಸ್ಥಾನ ನೀಡಲು ಅಮೆರಿಕ ಕರಡು ತಯಾರಿಸಿತ್ತು. ಇದರಲ್ಲಿ ದಿ ಇಂಟರ್‌ನ್ಯಾಷನಲ್ ದಲಿತ್ ಸಾಲಿಡಾರಿಟಿ ನೆಟ್‌ವರ್ಕ್ (ಐಡಿಎಸ್‌ಎನ್), ಅರಬ್–ಯುರೋಪಿಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್, ಇಂಟರರೀಜನಲ್ ನಾನ್ ಗವರ್ನಮೆಂಟಲ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ ಮೆನ್ ಆ್ಯಂಡ್ ಲಾ, ದ ಆ್ಯಂಡ್ರೆ ರೈಲ್‌ಕೋವ್ ಫೌಂಡೇಷನ್ ಪಾರ್ ಹೆಲ್ತ್ ಆ್ಯಂಡ್ ಸೋಷಿಯಲ್ ಜಸ್ಟೀಸ್, ದ ವರ್ಲ್ಡ್ ಯೂನಿಯನ್ ಆಫ್ ಕೊಸ್ಸಾಕ್ ಆಟಮನ್ಸ್ ಮತ್ತು ವರ್ಲ್ಡ್ ವಿದೌಟ್ ಜೀನೊಸೈಡ್ ಸಂಸ್ಥೆಗಳು ಈ ಪಟ್ಟಿಯಲ್ಲಿ ಸೇರಿವೆ. ದಾಖಲೆಯ 24 ಮತಗಳ ಮೂಲಕ ಈ ಸಂಸ್ಥೆಗಳಿಗೆ ವಿಶೇಷ ಸಮಾಲೋಚನಾ ಸ್ಥಾನವನ್ನು ನೀಡಲಾಗಿದೆ.
ಈ ಒಂಬತ್ತು ಎನ್ಜಿಒಗಳು ವಿಶೇಷ ಸಮಾಲೋಚನಾ ಸ್ಥಾನದ ಮಾನ್ಯತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಸಿಒಎಸ್‌ಒಸಿಯ ಸರ್ಕಾರೇತರ ಸಂಸ್ಥೆಗಳಿಗೆ ಸಂಬಂಧಿಸಿದ 19 ಸದಸ್ಯರ ಸಮಿತಿಯು ಈ ವರ್ಷ ಸೆಪ್ಟೆಂಬರ್‌ನಲ್ಲಿ ರದ್ದುಪಡಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.