ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಮತ್ತು ನೀಲಿ ರಾಜ್ಯಗಳ ನಡುವೆ ಭೇದಭಾವ ಮಾಡಲಾರೆ: ಜೊ ಬೈಡನ್‌

Last Updated 4 ನವೆಂಬರ್ 2020, 2:59 IST
ಅಕ್ಷರ ಗಾತ್ರ

ಫಿಲಡೆಲ್ಫಿಯಾ(ಅಮೆರಿಕ): ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಕೆಂಪು ಮತ್ತು ನೀಲಿ ರಾಜ್ಯಗಳ ನಡುವೆ ಭೇದಭಾವ ಮಾಡುವುದಿಲ್ಲ ಎಂದು ಅಮೆರಿಕದ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡೆನ್‌ ತಿಳಿಸಿದ್ದಾರೆ

ಕೆಂಪು ಬಣ್ಣ ರಿಪಬ್ಲಿಕನ್‌ ಹಾಗೂ ನೀಲಿ ಬಣ್ಣ ಡೆಮಾಕ್ರಟಿಕ್‌ ಪಕ್ಷಗಳನ್ನು ಪ್ರತಿನಿಧಿಸುವ ವರ್ಣಗಳಾಗಿವೆ.

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಜನರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿರುವ ಬೈಡನ್‌, 'ನೀವು ನನ್ನನ್ನು ಚುನಾಯಿಸಿದರೆ, ನಾನು ಡೆಮಾಕ್ರಟಿಕ್‌ ಪಕ್ಷದ ಹೆಮ್ಮೆಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ. ನಾನು ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದರೆ, ಕೆಂಪು ಮತ್ತು ನೀಲಿ ರಾಜ್ಯಗಳ ನಡುವೆ ಭೇದಭಾವ ತೋರದೇ ಕಾರ್ಯನಿರ್ವಹಿಸುತ್ತೇನೆ' ಎಂದು ಹೇಳಿದ್ದಾರೆ.

'ಒಂದು ಸುಭದ್ರ ದೇಶವಾಗಿ ಕಾರ್ಯನಿರ್ವಹಿಸಲು ನಮಗೆ ಅಪಾರ ಅವಕಾಶವಿದೆ. ಬುದ್ಧಿವಂತಿಕೆಯ ನಿರ್ಧಾರಗಳಿಂದ ಕೋವಿಡ್‌ ಸಾಂಕ್ರಾಮಿಕವನ್ನು ತಡೆಯಬಹುದಾಗಿದೆ. ನಾವು ಅಮೆರಿಕದ ಮಧ್ಯಮ ವರ್ಗದ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ. ಕಾರಣ, ಮಧ್ಯಮ ವರ್ಗವು ಅಮೆರಿಕವನ್ನು ಕಟ್ಟಿದೆ' ಎಂದು ಬೈಡನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ 23.9 ಕೋಟಿ ಅರ್ಹ ಮತದಾರರಿದ್ದು, ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಕುತೂಹಲ ಕೆರಳಿಸಿರುವ ಚುನಾವಣೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT