ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೋವಿಡ್‌-19 ದೃಢ

Last Updated 2 ಅಕ್ಟೋಬರ್ 2020, 6:29 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಅವರ ಪತ್ನಿಗೆ ಕೋವಿಡ್‌–19 ಇರುವುದುಗುರುವಾರ ರಾತ್ರಿ ದೃಢಪಟ್ಟಿದೆ.

'ಮೆಲಾನಿಯಾ ಟ್ರಂಪ್‌ ಮತ್ತು ನನಗೆ ಕೋವಿಡ್‌–19 ಪಾಸಿಟಿವ್ ಇರುವುದು ಇಂದು ರಾತ್ರಿ ದೃಢಪಟ್ಟಿದೆ. ನಾವು ನಮ್ಮ ಕ್ವಾರಂಟೈನ್‌ ಹಾಗೂ ಗುಣಮುಖರಾಗುವ ಪ್ರಕ್ರಿಯೆ ತಕ್ಷಣವೇ ಆರಂಭಿಸಲಿದ್ದೇವೆ. ನಾವು ಒಟ್ಟಿಗೆ ಇದರಲ್ಲಿ ಸಾಗೋಣ' ಎಂದು ಟ್ರಂಪ್‌ ಟ್ವೀಟಿಸಿದ್ದಾರೆ.

ಡೋನಾಲ್ಡ್‌ ಟ್ರಂಪ್‌ ಅವರ ಉನ್ನತ ಸಲಹೆಗಾರರಾದ ಹೋಪ್ ಹಿಕ್ಸ್‌ಗೆ ಕೋವಿಡ್-19 ದೃಢಪಟ್ಟಿದ್ದು, ರೋಗಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ಟ್ರಂಪ್‌ ಮತ್ತು ಅವರ ಪತ್ನಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್‌ 3ರಂದು ನಿಗದಿಯಾಗಿದೆ. ಚುನಾವಣೆ ಪ್ರಚಾರದ ಕಾವು ಏರುತ್ತಿರುವ ಸಮಯದಲ್ಲೇ ಟ್ರಂಪ್‌ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ.

ಶೀಘ್ರ ಗುಣುಮುಖರಾಗುವಂತೆ ಪ್ರಧಾನಿ ಮೋದಿ ಕೋರಿದ್ದಾರೆ. 'ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್‌ ಮತ್ತು ಮೆಲಾನಿಯಾ ಆದಷ್ಟು ಬೇಗೆ ಗುಣಮುಖರಾಗಿ ಮತ್ತು ಉತ್ತಮ ಆರೋಗ್ಯ ನಿಮ್ಮದಾಗುವಂತೆ ಕೋರುವೆ' ಎಂದು ಟ್ವೀಟಿಸಿದ್ದಾರೆ.

ಹಿಕ್ಸ್ ಅವರು ಅಧ್ಯಕ್ಷರೊಂದಿಗೆ ಏರ್ ಫೋರ್ಸ್ ಒನ್‌ನಲ್ಲಿ ನಿಯಮಿತವಾಗಿ ಪ್ರಯಾಣಿಸುತ್ತಿರುತ್ತಾರೆ ಮತ್ತು ಈ ವಾರದ ಆರಂಭದಲ್ಲಿ ಇತರ ಹಿರಿಯ ಸಹಾಯಕರೊಂದಿಗೆ ಅಧ್ಯಕ್ಷರ ಚುನಾವಣಾ ಚರ್ಚೆಗೆ ಕ್ಲೀವ್‌ಲ್ಯಾಂಡ್‌ಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT