ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಚುನಾವಣೆಯಲ್ಲಿ ಮತಗಳಿಕೆ: ಬರಾಕ್ ಒಬಾಮ ದಾಖಲೆ ಮುರಿದ ಬೈಡನ್

ಅಮೆರಿಕದ ಇತಿಹಾಸದಲ್ಲೇ ಅತಿ ಹೆಚ್ಚು ಮತ ಗಳಿಸಿರುವ ದಾಖಲೆ
Last Updated 5 ನವೆಂಬರ್ 2020, 6:54 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ಅಮೆರಿಕದ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಮತಗಳಿಸಿದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಮತಗಳಿಕೆಯ ದಾಖಲೆಯನ್ನು ಮುರಿದಿರುವ ಬೈಡನ್, ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬುಧವಾರದ (ನವೆಂಬರ್ 4)ವರೆಗಿನ ಮತ ಎಣಿಕೆಯ ಪ್ರಕಾರ ಬೈಡನ್ ಅವರು 7 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಮುಂದಿದ್ದಾರೆ. ‘ಇದು ಇಲ್ಲಿವರೆಗೆ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದಿರುವ ಮತಗಳ ದಾಖಲೆಯನ್ನು ಮುರಿದಿದೆ‘ ಎಂದು ನ್ಯಾಷನಲ್ ಪಬ್ಲಿಕ್ ರೇಡಿಯೊ (ಎನ್‌ಪಿಆರ್‌) ವರದಿ ಮಾಡಿದೆ.

ಟ್ರಂಪ್ ಅವರು 6.7 ಕೋಟಿಗೂ ಹೆಚ್ಚು (67.32 ಮಿಲಿಯನ್) ಮತಗಳೊಂದಿಗೆ ಒಬಾಮಾ ಅವರ ಮತಗಳಿಕೆಯ ದಾಖಲೆ ಸಮೀಪದಲ್ಲಿದ್ದಾರೆ. ಒಬಾಮಾ ಅವರು 2008ರಲ್ಲಿ 6,94,98,516 ಮತಗಳನ್ನು ಪಡೆದಿದ್ದರು.

ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಬೈಡನ್ ಅವರು ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್‌ ಪಾರ್ಟಿಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗಿಂತ 27 ಲಕ್ಷಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ. ಇಲ್ಲಿವರೆಗೆ ಶೇ 64ರಷ್ಟು ಮತಗಳ ಏಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕ್ಯಾಲಿಫೋರ್ನಿಯಾ ಸೇರಿದಂತೆ ದೇಶದಾದ್ಯಂತ ಮತ ಎಣಿಕೆ ಕಾರ್ಯ ಮುಂದುವರಿದಿದೆ‘ ಎಂದು ಎನ್‌ಪಿಆರ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT