ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನಾ ದಾಳಿಗೆ ಸಹಕಾರ; ಅಮೆರಿಕದ ಸೈನಿಕನ ಬಂಧನ

Last Updated 20 ಜನವರಿ 2021, 6:58 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಡಿ ಅಮೆರಿಕದ ಸೈನಿಕ ಕೋಲ್ ಜೇಮ್ಸ್ ಬ್ರಿಡ್ಜಸ್‌ ಅವರನ್ನು ಜಾರ್ಜಿಯಾದಲ್ಲಿ ಮಂಗಳವಾರ ಬಂಧಿಸಲಾಗಿದೆ.

‘ನ್ಯೂಯಾರ್ಕ್‌ ನಗರದಲ್ಲಿ 9/11ರ ದಾಳಿಯ ನೆನಪಿನಲ್ಲಿ ನಿರ್ಮಿಸಲಾಗಿರುವ ಸ್ಮಾರಕ ಸೇರಿದಂತೆ ಇತರೆ ಪ್ರಮುಖ ಸ್ಮಾರಕಗಳನ್ನು ಸ್ಫೋಟಿಸಲು ಹಾಗೂ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾಪಡೆ ಮೇಲೆ ದಾಳಿ ನಡೆಸುವ ಕುರಿತು ಅವರು ಆನ್‌ಲೈನ್‌ನಲ್ಲಿ ಚರ್ಚೆ ನಡೆಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಂಧಿತ ಕೋಲ್ ಜೇಮ್ಸ್ ಬ್ರಿಡ್ಜಸ್‌, ಓಹಿಯೋದ ನಿವಾಸಿಯಾಗಿದ್ದು, ಈತನನನ್ನು ಉಗ್ರ ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ಗೆ ಬೆಂಬಲ, ಮಿಲಿಟರಿ ಸಿಬ್ಬಂದಿ ಕೊಲೆ ಪ್ರಯತ್ನ ಆರೋಪದಡಿ ಬಂಧಿಸಲಾಗಿದೆ’ ಎಂದು ಮ್ಯಾನ್‌ಹ್ಯಾಟನ್‌ನ ಫೆಡರಲ್‌ ಪ್ರಾಸಿಕ್ಯೂಟರ್‌ನ ವಕ್ತಾರ ನಿಕೋಲಸ್ ಬಯಾಸ್ ಅವರು ತಿಳಿಸಿದರು.

‘ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯ ಸದಸ್ಯರೆಂದು ತಪ್ಪಾಗಿ ತಿಳಿದುಕೊಂಡು, ಎಫ್‌ಬಿಐ ಅಧಿಕಾರಿಗಳೊಂದಿಗೆ ಜೇಮ್ಸ್‌ ಆನ್‌ಲೈನ್‌ ಚಾಟ್‌ ನಡೆಸಿದ್ದಾರೆ. ಈ ಚಾಟ್‌ನಲ್ಲಿ ಆತ ಭಯೋತ್ಪದನಾ ದಾಳಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಮೆರಿಕದ ಸೇನೆಯ ಮೇಲೆ ದಾಳಿ ನಡೆಸಲು ಹೊಂಚು ಹಾಕಲಾಗುತ್ತಿದೆ ಎಂಬುದರ ಬಗ್ಗೆ ನಮಗೆ ಮುಂಚಿತವಾಗಿಯೇ ಮಾಹಿತಿ ಲಭ್ಯವಾಗಿತ್ತು’ ಎಂದು ಅವರು ಹೇಳಿದರು.

‘ಕೋಲ್ ಜೇಮ್ಸ್ ಬ್ರಿಡ್ಜಸ್, ಅಮೆರಿಕಕ್ಕೆ ದ್ರೋಹ ಬಗೆದಿದ್ದಾರೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾಪಡೆ ಮೇಲೆ ದಾಳಿ ನಡೆಸಲು ಐಎಸ್‌ಐಎಸ್‌ಗೆ ಸಹಾಯ ಮಾಡಿದ್ದಾರೆ’ ಎಂದು ನ್ಯೂಯಾರ್ಕ್ ನಗರದ ಎಫ್‌ಬಿಐ ಕಚೇರಿಯ ಮುಖ್ಯಸ್ಥ ವಿಲಿಯಂ ಎಫ್. ಸ್ವೀನಿ ಜೂನಿಯರ್ ಮಾಹಿತಿ ನೀಡಿದರು.

2019 ಸೆಪ್ಟೆಂಬರ್‌ ತಿಂಗಳಲ್ಲಿ ಕೋಲ್ ಜೇಮ್ಸ್ ಬ್ರಿಡ್ಜಸ್, ಅಮೆರಿಕದ ಸೇನೆಗೆ ಸೇರ್ಪಡೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT