ಮಂಗಳವಾರ, ಆಗಸ್ಟ್ 3, 2021
21 °C

ಆಫ್ಗನ್‌ನಲ್ಲಿ ಇನ್ನೂ ಉಳಿಯಲಿದ್ದಾರೆ 650 ಅಮೆರಿಕದ ಸೈನಿಕರು

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಫ್ಗಾನಿಸ್ಥಾನದಲ್ಲಿ ಅಮೆರಿಕ ನಿಯೋಜಿಸಿರುವ ಮುಖ್ಯ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪಕ್ರಿಯೆ ಪೂರ್ಣಗೊಂಡ ಮೇಲೂ, ಅಲ್ಲಿನ ರಾಜತಾಂತ್ರಿಕರಿಗೆ ಭದ್ರತೆ ಒದಗಿಸುವುದಕ್ಕಾಗಿ ಅಂದಾಜು 650 ಸೈನಿಕರನ್ನು ಅಲ್ಲೇ ಉಳಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಜತೆಗೆ, ನೂರಾರು ಹೆಚ್ಚುವರಿ ಅಮೆರಿಕಾದ ಸೈನಿಕರು ಸೆಪ್ಟೆಂಬರ್‌ವರೆಗೂ ಕಾಬೂಲ್‌ ವಿಮಾನ ನಿಲ್ದಾಣದಲ್ಲೇ ಉಳಿಯಲಿದ್ದು, ಟರ್ಕಿ ಸೇನಾಪಡೆಗಳಿಗೆ ಭದ್ರತೆಯ ವಿಷಯದಲ್ಲಿ ನೆರವಾಗಲಿವೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಟರ್ಕಿ ನೇತೃತ್ವದ ಭದ್ರತಾಪಡೆಯ ಕಾರ್ಯಾಚರಣೆ ನಡೆಯುವವರೆಗೂ ಚಾಲ್ತಿಯಲ್ಲಿರುತ್ತದೆ.

ಒಟ್ಟಾರೆ, ಜುಲೈ 4ರ ಒಳಗೆ ಅಮೆರಿಕ ಮತ್ತು ಸಮ್ಮಿಶ್ರ ಮಿಲಿಟರಿ ಕಮಾಂಡ್, ಅಲ್ಲಿ ನಿಯೋಜಿಸಿರುವ ಹೆಚ್ಚಿನ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳಲು ನಿರೀಕ್ಷಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು