ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ವೈದೇಹಿ ಡೋಂಗ್ರೆಗೆ ಮಿಸ್‌ ಇಂಡಿಯಾ ಯುಎಸ್‌ಎ ಕಿರೀಟ

Last Updated 20 ಜುಲೈ 2021, 6:01 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಿಚಿಗನ್‌ನ 25 ವರ್ಷದ ವೈದೇಹಿ ಡೋಂಗ್ರೆ ಅವರು ಮಿಸ್‌ ಇಂಡಿಯಾ ಯುಎಸ್‌ಎ–2021 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ವಾರಾಂತ್ಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಜಾರ್ಜಿಯಾದ ಆರ್ಶಿ ಲಾಲಾನಿ ಅವರು ಪ್ರಥಮ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದಾರೆ.

ವೈದೇಹಿ ಅವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರಾಗಿ ಪ್ರಮುಖ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

‘ನಾನು ಸಮುದಾಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರಲು ಮತ್ತು ಮಹಿಳೆಯರ ಆರ್ಥಿಕ ಸ್ವಾತಂ‌ತ್ರ್ಯ ಹಾಗೂ ಸಾಕ್ಷರತೆಯತ್ತ ಗಮನಹರಿಸಲು ಇಚ್ಛಿಸುತ್ತೇನೆ’ ಎಂದು ವೈದೇಹಿ ಅವರು ಹೇಳಿದ್ದಾರೆ.

ವೈದೇಹಿ ಅವರು ತಮ್ಮ ಕಥಕ್‌ ನೃತ್ಯ ಪ್ರದರ್ಶನಕ್ಕೆ ‘ಮಿಸ್ ಟ್ಯಾಲೆಂಟೆಡ್‌’ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಆರ್ಶಿ ಲಾಲಾನಿ ಅವರನ್ನು ಈ ಸ್ಪರ್ಧೆಯ ಪ್ರಥಮ ರನ್ನರ್‌ಅಪ್‌ ಆಗಿ ಆಯ್ಕೆ ಮಾಡಲಾಗಿದ್ದು, ಅವರು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ. ಉತ್ತರ ಕ್ಯಾರೊಲಿನಾದ ಮೀರಾ ಕಸಾರಿ ಅವರು ದ್ವಿತೀಯ ರನ್ನರ್‌ ಅಪ್‌ ಆಗಿದ್ದಾರೆ. 1997ರ ಮಿಸ್‌ ವರ್ಲ್ಡ್‌ ಡಯಾನಾ ಹೇಡನ್ ಈ ಸ್ಪರ್ಧೆಯ ಮುಖ್ಯ ಅತಿಥಿ ಮತ್ತು ಮುಖ್ಯ ತೀರ್ಪುಗಾರ್ತಿಯಾಗಿದ್ದರು.

ಮಿಸ್‌ ಇಂಡಿಯಾ ಯುಎಸ್‌ಎ, ಮಿಸಸ್‌ ಇಂಡಿಯಾ ಯುಎಸ್‌ಎ ಮತ್ತು ಮಿಸ್‌ ಟೀನ್‌ ಇಂಡಿಯಾ ಯುಎಸ್‌ಎ ಸೌಂದರ್ಯ ಸ್ಪರ್ಧೆಗಳಲ್ಲಿ ಅಮೆರಿಕದ 30 ರಾಜ್ಯಗಳಿಂದ 61 ಸ್ಪರ್ಧಿಗಳು ಭಾಗವಹಿಸಿದ್ದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT