ಶುಕ್ರವಾರ, ಮಾರ್ಚ್ 24, 2023
22 °C
ಕಪ್ಪುವರ್ಣೀಯರಿಗೊಂದು ನ್ಯಾಯ, ಬಿಳಿಯ ಅಮೆರಿಕನ್ನರಿಗೊಂದು ನ್ಯಾಯ

ಅಮೆರಿಕದಲ್ಲಿ ವ್ಯವಸ್ಥಿತ ವರ್ಣಭೇದ ನೀತಿ ಇದೆ: ಕಮಲಾ ಹ್ಯಾರಿಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಅಮೆರಿಕದಲ್ಲಿ ಕಪ್ಪು ವರ್ಣೀಯರಿಗೊಂದು, ಬಿಳಿಯ ಅಮೆರಿಕನ್ನರಿಗೊಂದು ಎನ್ನುವ ಎರಡು ನ್ಯಾಯ ವ್ಯವಸ್ಥೆಗಳಿವೆ’ ಎಂದು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಟಾರ್ನಿ ಜನರಲ್ ಅವರು ‘ಅಮೆರಿಕದ ನ್ಯಾಯವ್ಯವಸ್ಥೆಯಲ್ಲಿ ವ್ಯವಸ್ಥಿತ ವರ್ಣಭೇದ ನೀತಿ ಇಲ್ಲ’ ಎಂದು ನಿರಾಕರಿಸಿದ ಬೆನ್ನಲ್ಲೇ ತಿರುಗೇಟು ನೀಡಿರುವ ಕಮಲಾ, ‘ಇವರಿಬ್ಬರೂ ತಮ್ಮ ಪೂರ್ಣ ಸಮಯವನ್ನು ಭಿನ್ನ ವಾಸ್ತವಿಕತೆಯಲ್ಲಿ ಕಳೆಯುತ್ತಿದ್ದಾರೆಯೇ ಹೊರತು ವಾಸ್ತವದಲ್ಲಿಲ್ಲ’ ಎಂದಿದ್ದಾರೆ.

‘ಅಮೆರಿಕದ ಇಂದಿನ ವಾಸ್ತವವನ್ನು ನಾವು ತಲೆಮಾರುಗಳಿಂದ ನೋಡುತ್ತಾ ಬಂದಿದ್ದೇವೆ. ಅಮೆರಿಕದಲ್ಲಿ ಎರಡು ರೀತಿಯ ನ್ಯಾಯ ವ್ಯವಸ್ಥೆಗಳಿವೆ’ ಎಂದು ಸಿಎನ್‌ಎನ್‌ಗೆ ನೀಡಿರುವ ಸಂದರ್ಶನದಲ್ಲಿ ಕಮಲಾತಿಳಿಸಿದ್ದಾರೆ.

‘ಒಂದು ರಾಷ್ಟ್ರವಾಗಿ ಅಮೆರಿಕದ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ. ಅಮೆರಿಕದ ಸುಪ್ರೀಂಕೋರ್ಟ್‌ನ ಅಮೃತಶಿಲೆಯ ಮೇಲೆ ಕಾನೂನಿನಲ್ಲಿ ಎಲ್ಲರಿಗೂ ಸಮಾನವಾದ ನ್ಯಾಯವಿದೆ ಎಂದು ಕೆತ್ತಲಾಗಿದೆ. ಈ ಮಾತನ್ನು ಒಪ್ಪುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಹಾಗಾಗಿ, ನಾವು ಎರಡು ನ್ಯಾಯವ್ಯವಸ್ಥೆಗಳಿದ್ದಾಗ್ಯೂ ಕಾನೂನಿನಡಿಯಲ್ಲಿ ಸಮಾನತೆ ತರಲು ನಾನು ಮತ್ತು  ಜೊ ಬೈಡನ್ ಹೋರಾಡುತ್ತಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಮುರಿಯುವ ಪೊಲೀಸ್ ಅಧಿಕಾರಿಗಳಿಗೆ ಹೊಣೆಗಾರಿಕೆಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಬೇಕಿದೆ ಎಂಬುದು ನಮ್ಮಿಬ್ಬರ ಪ್ರತಿಪಾದ’ ಎಂದು ಕಮಲಾ ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ನಿಜವಾದ ನಾಯಕನಲ್ಲ: ‘ವರ್ಣಭೇದ ನ್ಯಾಯಕ್ಕೆ ಸಂಬಂಧಿಸಿದಂತೆ ಟ್ರಂಪ್ ನಿಜವಾದ ನಾಯಕನಲ್ಲ. ಕೊರೊನಾ ವೈರಸ್ ಸಂದರ್ಭದಲ್ಲಿ ತಾನು ನಾಯಕನಾಗಿದ್ದೆ ಎನ್ನುವ ಬಗ್ಗೆ ಅವರು ನಟನೆ ಮಾಡುತ್ತಿದ್ದಾರೆ’ ಎಂದೂ ಕಮಲಾ ಹೇಳಿದ್ದಾರೆ.

ನಿರಾಕರಣೆ: ‘ಅಮೆರಿಕದಲ್ಲಿ ಎರಡು ನ್ಯಾಯವ್ಯವಸ್ಥೆಗಳಿವೆ’ ಎಂಬ ಮಾತನ್ನು ಅಮೆರಿಕದ ಕಾನೂನು ಜಾರಿ ನಿರ್ದೇಶನಾಲಯವು ನಿರಾಕರಿಸಿದೆ. ‘ವರ್ಣಭೇದದ ಕುರಿತು ಮಾತನಾಡುವಾಗ ನಾವು ಸ್ವಲ್ಪ ಜಾಗರೂಕರಾಗಿರಬೇಕು’ ಎಂದೂ ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು