ಭಾನುವಾರ, ಸೆಪ್ಟೆಂಬರ್ 26, 2021
23 °C

ಲಕ್ಷಾಂತರ ಸಾವುಗಳನ್ನು ತಪ್ಪಿಸಲು ತಾಲಿಬಾನ್ ಜೊತೆ ಮಾತುಕತೆ ನಡೆಸಬೇಕಿದೆ: ಗುಟೆರಸ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಲಕ್ಷಾಂತರ ಸಾವುಗಳನ್ನು ತಪ್ಪಿಸಲು ನಾವು ತಾಲಿಬಾನ್‌ ಸಂಘಟನೆಯೊಂದಿಗೆ ಮಾತುಕತೆ ನಡೆಸಬೇಕಾಗಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಗುಟೆರಸ್‌, ʼನಾವು ತಾಲಿಬಾನಿಗಳೊಂದಿಗೆ ಮಾತುಕತೆ  ನಡೆಸಬೇಕು. ಮಾತುಕತೆ ವೇಳೆ ನಮ್ಮ ತತ್ವಗಳನ್ನು ನೇರವಾಗಿ ಹೇಳುವುದರೊಟ್ಟಿಗೆ ಅಫ್ಗಾನ್‌ ಜನರೊಂದಿಗೆ ನಾವಿದ್ದೇವೆ ಎಂಬುದನ್ನೂ ಖಚಿತಪಡಿಸಬೇಕುʼ ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ʼಸಂಕಷ್ಟ ಎದುರಿಸುತ್ತಿರುವ ಜನರೊಂದಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಅಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಸಾಯುವ ಅಪಾಯವಿದೆʼ ಎಂದೂ ಒತ್ತಿ ಹೇಳಿದ್ದಾರೆ.

ಮುಂದುವರಿದು, ಮಾತುಕತೆಯ ಬಳಿಕ ಏನಾಗಬಹುದು ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಆದರೆ, ಅಫ್ಗಾನಿಸ್ತಾನವು ಭಯೋತ್ಪಾದನೆಯ ಕೇಂದ್ರವಾಗಬಾರದು. ಮಹಿಳೆಯರು ಹಕ್ಕುಗಳನ್ನು ಕಳೆದುಕೊಳ್ಳಬಾರದು. ಆ ಕಾರಣಕ್ಕಾಗಿ, ನಾವು ತಾಲಿಬಾನ್‌ನೊಂದಿಗೆ ಚರ್ಚಿಸುವುದು ಅಗತ್ಯವಾಗಿದೆ ಎಂದು ಗುಟೆರಸ್‌ ಅಭಿಪ್ರಾಯಪಟ್ಟಿದ್ದಾರೆ.

ಗುಟೇರಸ್‌ ಅವರ ವಿಶೇಷ ಪ್ರತಿನಿಧಿ ದೆಬೋರಾ ಲಿಯೊನ್ಸ್‌, ಅಫ್ಗಾನ್‌ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಗುರುವಾರ ಮಾತನಾಡಿದ್ದರು. ಅವರು, ತಾಲಿಬಾನ್‌ ಸರ್ಕಾರದ ಭೀತಿ ನಡುವೆಯೂ ಅಫ್ಗಾನಿಸ್ತಾನಕ್ಕೆ ಆರ್ಥಿಕ ನೆರವು ನೀಡುವುದನ್ನು ಜಾಗತಿಕ ಸಮುದಾಯ ಮುಂದುವರಿಸಬೇಕು. ಈಗಾಗಲೇ ಆರ್ಥಿಕವಾಗಿ ಹಿಂದುಳಿದಿರುವ ಅಫ್ಗಾನ್ ಐತಿಹಾಸಿಕ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಆರ್ಥಿಕ ಕುಸಿತವು ಅಫ್ಗಾನಿಸ್ತಾನದಲ್ಲಿ ನಿರಾಶ್ರಿತರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ದೇಶವನ್ನು ತಲೆಮಾರುಗಳಷ್ಟು ಹಿಂದಕ್ಕೆ ತಳ್ಳುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಇವನ್ನೂ ಓದಿತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು