ರಫ್ತು ನಿಷೇಧ ಬಳಿಕ ಗೋಧಿ ಬೆಲೆ ದಾಖಲೆ ಮಟ್ಟಕ್ಕೆ

ಪ್ಯಾರಿಸ್ (ಎಎಫ್‌ಪಿ): ಭಾರತವು ಗೋಧಿ ರಫ್ತು ನಿಷೇಧಿಸಿದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಹೆಚ್ಚಳವಾಗಿದೆ.
ಐರೋಪ್ಯ ಮಾರುಕಟ್ಟೆಯಲ್ಲಿ ಒಂದು ಟನ್ ಗೋಧಿಯ ಬೆಲೆ ₹35,273ಕ್ಕೆ(435 ಯುರೊ) ಏರಿದೆ.
ಜಾಗತಿಕ ಮಾರುಕಟ್ಟೆಗೆ ಶೇಕಡ 12ರಷ್ಟು ಗೋಧಿ ಪೂರೈಕೆ ಮಾಡುತ್ತಿದ್ದ ಉಕ್ರೇನ್‌ನ ವಿರುದ್ಧ ರಷ್ಯಾ ಯುದ್ಧ ಪ್ರಾರಂಭಿಸಿದ ನಂತರ ಗೋಧಿ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಮಧ್ಯೆ ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತ ರಫ್ತು ನಿಷೇಧಿಸಿದ ಬಳಿಕ ಬೆಲೆ ಹೆಚ್ಚಳವಾಗಿದೆ.
‘ಕಡಿಮೆ ಉತ್ಪಾದನೆ ಹಾಗೂ ತ್ವರಿತವಾಗಿ ಬೆಲೆ ಏರಿಕೆ ಆಗುತ್ತಿರುವುದರಿಂದ ನಮ್ಮ ದೇಶದ 140 ಕೋಟಿ ಜನರ ಆಹಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಫ್ತು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಭಾರತ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.