ಶುಕ್ರವಾರ, ಸೆಪ್ಟೆಂಬರ್ 24, 2021
23 °C

ನಿಜವಾದ ಇಸ್ಲಾಂ ಯಾವ ರಾಷ್ಟ್ರದಲ್ಲಿ ಆಚರಿಸಲಾಗುತ್ತಿದೆ ಹೇಳಿ: ತಸ್ಲಿಮಾ ನಸ್ರೀನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರ ಸಂಘಟನೆಯ ಆಡಳಿತ ಹೇರಿಕೆಯಾದ ಬಳಿಕ ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲಿಮಾ ನಸ್ರೀನ್‌, ನಿಜವಾದ ಇಸ್ಲಾಂ ಯಾವ ರಾಷ್ಟ್ರದಲ್ಲಿ ಆಚರಿಸಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

'ಐಸಿಸ್‌, ತಾಲಿಬಾನ್‌, ಅಲ್‌ ಖೈದಾ, ಬೊಕೊ ಹರಾಮ್‌ನಂತಹ ಸಂಘಟನೆಗಳು ಪ್ರತಿಪಾದಿಸುವ ಇಸ್ಲಾಂ ನಿಜವಾದ ಇಸ್ಲಾಂ ಅಲ್ಲವೆಂದು ನೀವು ಹೇಳುತ್ತೀರಿ. ಹಾಗಿದ್ದರೆ ನಿಜವಾದ ಇಸ್ಲಾಂ ಅನ್ನು ಯಾವ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ?' ಎಂದು ಟ್ವೀಟ್‌ ಮೂಲಕ ಕೇಳಿದ್ದಾರೆ.

'ಸತ್ಯ ಏನೆಂದರೆ, ಯಾವೊಂದು ಮುಸ್ಲಿಂ ರಾಷ್ಟ್ರವೂ ಮಹಿಳೆಯರನ್ನು ಪುರುಷರ ಸಮನಾಗಿ ಕಾಣುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'9/11ರ ಭಯೋತ್ಪಾದಕ ದಾಳಿ ಸಂದರ್ಭ ಅವಳಿ ಟವರ್‌ನಲ್ಲಿದ್ದ ಸುಮಾರು 200 ಮಂದಿ ಪ್ರಾಣ ಕಳೆದುಕೊಂಡರು. ತಾಲಿಬಾನ್‌ ಉಗ್ರಗಾಮಿಗಳ ಭಯದಿಂದ ರಾಷ್ಟ್ರವನ್ನು ತೊರೆದು ವಿಮಾನದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಇಬ್ಬರು ಆಫ್ಗನಿಯರು ಕೆಳಗೆ ಬಿದ್ದು ಸತ್ತಿದ್ದಾರೆ. 'ಇಸ್ಲಾಮಿಕ್‌ ಭಯೋತ್ಪಾದನೆ'ಯನ್ನು ನಿಲ್ಲಿಸಿ. ಎಲ್ಲರಿಗೂ ಸ್ವತಂತ್ರವಾಗಿ, ಸುರಕ್ಷಿತವಾಗಿ ಜೀವಿಸುವ ಹಕ್ಕಿದೆ' ಎಂದು ಮತ್ತೊಂದು ಟ್ವೀಟ್‌ನಲ್ಲಿ ತಸ್ಲಿಮಾ ನಸ್ರೀನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು