ಬುಧವಾರ, ಆಗಸ್ಟ್ 17, 2022
25 °C

ಡಬ್ಲ್ಯುಎಚ್‌ಒ, ಚೀನಾ ವೇಗವಾಗಿ ಕಾರ್ಯಪ್ರವೃತ್ತವಾಗಬಹುದಿತ್ತು: ತನಿಖಾ ತಂಡ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಜಿನೇವ: ಕೊರೊನಾ ವೈರಸ್ ಮೊದಲು ಪತ್ತೆಯಾದಾಗ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇನ್ನಷ್ಟು ತ್ವರಿತವಾಗಿ ಕಾರ್ಯಪ್ರವೃತ್ತವಾಗಬಹುದಿತ್ತು ಎಂದು ಜಾಗತಿಕ ಪ್ರತಿಕ್ರಿಯೆಯ ಬಗ್ಗೆ ತನಿಖೆ ನಡೆಸುತ್ತಿರುವ ತಂಡ ಅಭಿಪ್ರಾಯಪಟ್ಟಿದೆ.

ಸಾಂಕ್ರಾಮಿಕದ ಬಗ್ಗೆ ಮರೆಮಾಚಿದ್ದು ಜಾಗತಿಕ ಹರಡುವಿಕೆಗೆ ಕಾರಣವಾಯಿತು ಎಂದೂ ತಂಡ ವಿಷಾದ ವ್ಯಕ್ತಪಡಿಸಿದೆ.

‘ಆರಂಭಿಕ ಲಕ್ಷಣಗಳು ಅತಿವೇಗವಾಗಿ ಬೆಳವಣಿಗೆ ಹೊಂದಲು ಪೂರಕವಾದ ಅಂಶಗಳಿದ್ದವು ಎಂಬುದು ಪಿಡುಗಿನ ಆರಂಭಿಕ ಕಾಲಾನುಕ್ರಮಣಿಕೆಯನ್ನು ಅಧ್ಯಯನ ಮಾಡಿದಾಗ ಗೊತ್ತಾಗಿದೆ’ ಎಂದು ‘ಸಾಂಕ್ರಾಮಿಕ ತಡೆ ಸಿದ್ಧತೆ ಮತ್ತು ಪ್ರತಿಕ್ರಿಯೆ ಸ್ವತಂತ್ರ ತಂಡ (ಐಪಿಪಿಆರ್)’ವು ಎರಡನೇ ವರದಿಯಲ್ಲಿ ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು