ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಂಕಿಪಾಕ್ಸ್' ಸದ್ಯ ಆರೋಗ್ಯ ತುರ್ತುಸ್ಥಿತಿಯಲ್ಲ: ಡಬ್ಲ್ಯುಎಚ್‌ಒ

Last Updated 26 ಜೂನ್ 2022, 2:31 IST
ಅಕ್ಷರ ಗಾತ್ರ

ಜಿನೀವಾ:'ಮಂಕಿಪಾಕ್ಸ್' ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧನೊಂ ಗೆಬ್ರೇಯೇಸಸ್‌ ಕಳವಳ ವ್ಯಕ್ತಪಡಿಸಿದ್ದು, ಸದ್ಯ ಈ ಸೋಂಕುಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ಶನಿವಾರ ಹೇಳಿದ್ದಾರೆ.

ಮುಖ್ಯವಾಗಿ ಪಶ್ಚಿಮ ಯುರೋಪ್‌ನಲ್ಲಿ ಹರಡುತ್ತಿರುವ 'ಮಂಕಿಪಾಕ್ಸ್‌' ವಿಚಾರದಲ್ಲಿಡಬ್ಲ್ಯುಎಚ್‌ಒ ಗಂಭೀರ ಎಚ್ಚರಿಕೆ ನೀಡಬೇಕೇ ಎಂಬುದನ್ನು ನಿರ್ಧರಿಸಲು ಆರೋಗ್ಯ ತಜ್ಞರನ್ನೊಳಗೊಂಡ ತುರ್ತು ಸಮಿತಿ ಸಭೆಯನ್ನುಗುರುವಾರ ನಡೆಸಿದರು.

ಸಮಿತಿಯ ವರದಿಯನ್ನು ಉಲ್ಲೇಖಿಸಿ,'ಸದ್ಯ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆ ಸಮಿತಿಯು ಕಳವಳ ವ್ಯಕ್ತಪಡಿಸಿದೆ' ಎಂದಿರುವ ಟೆಡ್ರೋಸ್‌, 'ಮಂಕಿಪಾಕ್ಸ್‌' ಹರಡುವಿಕೆಯ ವೇಗ ಮತ್ತು ಅಂತರದ ವಿಚಾರದಲ್ಲಿ ತಜ್ಞರಲ್ಲಿ ಒಮ್ಮತವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದುವರಿದು, ಈ ಸೋಂಕುಸದ್ಯ ಅಂತರರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತು (PHEIC) ಅಲ್ಲ ಎಂದು ಸಮಿತಿ ಹೇಳಿದೆ. ಆದಾಗ್ಯೂ, ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

'ಮಂಕಿಪಾಕ್ಸ್‌' ಪ್ರಕರಣಗಳ ಏಕಾಏಕಿ ಏರಿಕೆಯನ್ನು 'ಅಂತರರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತು' ಎಂದು ಪರಿಗಣಿಸಬೇಕೇ ಎಂಬುದನ್ನು ನಿರ್ಧರಿಸಲು ತುರ್ತು ಸಮಿತಿ ಕರೆಯುವುದಾಗಿ ಟೆಡ್ರೋಸ್‌ ಜೂನ್‌ 14ರಂದು ಹೇಳಿದ್ದರು.

ಪಶ್ಚಿಮ ಮತ್ತು ಮಧ್ಯ ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ 'ಮಂಕಿಪಾಕ್ಸ್‌' ಪ್ರಕರಣಗಳು ಮೇ ತಿಂಗಳಿಂದ ಈಚೆಗೆ ಇತರ ದೇಶಗಳಲ್ಲಿಯೂ ಉಲ್ಬಣಗೊಂಡಿವೆ. ಹೆಚ್ಚಾಗಿಪಶ್ಚಿಮ ಯುರೋಪ್‌ನಲ್ಲಿ ಪತ್ತೆಯಾಗುತ್ತಿವೆ.

ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ವರ್ಷ 3,200ಕ್ಕಿಂತ ಅಧಿಕ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಡಬ್ಲ್ಯುಎಚ್‌ಒಗೆ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT