ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯಿಂದ ಕೋವಿಡ್‌ ಪಿಡುಗು ಅಂತ್ಯವಾಗಲು ಸಾಧ್ಯವೆ? ಡಬ್ಲ್ಯು‌ಎಚ್‌ಒ ಅನುಮಾನ

Last Updated 10 ಸೆಪ್ಟೆಂಬರ್ 2021, 14:33 IST
ಅಕ್ಷರ ಗಾತ್ರ

ಯುರೋಪ್: ಕೋವಿಡ್ ಲಸಿಕೆಯಿಂದ ಕೊರೊನಾ ಸೋಂಕು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವೇ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅನುಮಾನವನ್ನು ವ್ಯಕ್ತಪಡಿಸಿದೆ.

ಕೊರೊನಾವೈರಸ್‌ನ ಹೊಸ ರೂಪಾಂತರಿ ತಳಿಯಿಂದಾಗಿ ಕೋವಿಡ್ ಲಸಿಕೆಗಳು ರೋಗನಿರೋಧಕ ಶಕ್ತಿಯನ್ನು ತಲುಪುವ ನಿರೀಕ್ಷೆಯನ್ನು ಹಾಳು ಮಾಡುತ್ತಿವೆ ಎಂದು ಡಬ್ಲ್ಯುಎಚ್‌ಒ ನಿರ್ದೇಶಕ (ಯುರೋಪ್‌) ಹ್ಯಾನ್ಸ್ ಕ್ಲುಗೆ ವರದಿಗಾರರಿಗೆ ತಿಳಿಸಿದ್ದಾರೆ.

'ಸೋಂಕು ಹಲವು ವರ್ಷಗಳ ಕಾಲ ಇರುವ ಸಾಧ್ಯತೆಯಿದೆ. ಹಾಗಾಗಿ ಆರೋಗ್ಯ ಅಧಿಕಾರಿಗಳು ಲಸಿಕೆ ತಂತ್ರವನ್ನು ಕ್ರಮೇಣವಾಗಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಅಂದಾಜಿಸಬೇಕು. ವಿಶೇಷವಾಗಿಯೂ ಹೆಚ್ಚುವರಿ ಲಸಿಕೆ ಡೋಸ್‌ಗಳ ಬಗ್ಗೆ' ಎಂದು ಹೇಳಿದ್ದಾರೆ.

ಕೋವಿಡ್ ಲಸಿಕೆ ವಿತರಣೆಯು ಶೇಕಡಾ 70ರಷ್ಟು ತಲುಪಿದಾಗ ಸಾಂಕ್ರಾಮಿಕ ಪಿಡುಗು ಅಂತ್ಯವಾಗಲಿದೆಎಂದು ವಿಶ್ವ ಆರೋಗ್ಯ ಸಂಸ್ಥೆಯು ಮೇ ತಿಂಗಳಲ್ಲಿ ಹೇಳಿಕೆ ನೀಡಿತ್ತು.

ಆದರೆ ಡೆಲ್ಟಾದಂತಹ ಹೊಸ ರೂಪಾಂತರಿ ತಳಿಗಳಿಂದಾಗಿ ಪರಿಸ್ಥಿತಿಯು ಸಂಪೂರ್ಣವಾಗಿ ಬದಲಾಗಿದೆ. ಆದ್ಯಾಗೂ ಗಂಭೀರ ರೋಗಗಳನ್ನುನಿಯಂತ್ರಿಸುವ ಮೂಲಕ ಸಾವಿನ ಪ್ರಮಾಣ ತಡೆಗಟ್ಟುವುದಕ್ಕೆ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT