ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರಾಚ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಸೃಷ್ಟಿಸಲಿದೆ ಡೆಲ್ಟಾ: ಡಬ್ಲ್ಯುಎಚ್‌ಒ

ಅಕ್ಷರ ಗಾತ್ರ

ಕೈರೋ (ಈಜಿಪ್ಟ್):‌ ಮಧ್ಯಪ್ರಾಚ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಏಕಾಏಕಿ ಏರಿಕೆಗೆ ಕಾರಣವಾಗಿರುವ ಡೆಲ್ಟಾ ರೂಪಾಂತರವು, ಸೋಂಕಿನ ನಾಲ್ಕನೇ ಅಲೆ‌ ಸೃಷ್ಟಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ.

ʼಮಧ್ಯಪ್ರಾಚ್ಯದ ದೇಶಗಳಲ್ಲಿ ಕೋವಿಡ್-‌19 ಸೋಂಕು ಮತ್ತು ಮರಣ ಪ್ರಕರಣಗಳ ಏರಿಕೆಗೆ ಡೆಲ್ಟಾ ಹರಡುವಿಕೆಯು ಕಾರಣವಾಗಿದೆ. ಈ ಭಾಗದ22 ರಾಷ್ಟ್ರಗಳ ಪೈಕಿ15 ರಾಷ್ಟ್ರಗಳಲ್ಲಿಹೀಗೆ ವರದಿಯಾಗಿದೆʼ ಎಂದು ಡಬ್ಲ್ಯುಎಚ್‌ಒ ಪ್ರಕಟಿಸಿದೆ.

ಈ ಭಾಗದಲ್ಲಿ ಡೆಲ್ಟಾ ಪ್ರಬಲ ತಳಿಯಾಗಿ ಕಾಣಿಸಿಕೊಂಡಿದ್ದು, ಲಸಿಕೆ ಹಾಕಿಸಿಕೊಳ್ಳದವರಲ್ಲಿ ಹೆಚ್ಚಾಗಿ ಸೋಂಕು ದೃಢಪಟ್ಟಿರುವುದು ದಾಖಲಾಗಿದೆ.ಡೆಲ್ಟಾ ರೂಪಾಂತರ ತಳಿಯು ಮೂಲ ಕೊರೊನಾ‌ ವೈರಸ್‌‌ಗಿಂತ ವೇಗವಾಗಿ ಹರಡುತ್ತಿರುವುದುಕಳವಳಕಾರಿಯಾಗಿದೆʼ ಎಂದೂ ಹೇಳಿದೆ.

‌ʼಮಧ್ಯಪ್ರಾಚ್ಯದಲ್ಲಿ ಡೆಲ್ಟಾ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದು ಆತಂಕಕಾರಿ. ಹೊಸ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಇತ್ತೀಚಿನ ವಾರಗಳಲ್ಲಿ ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಹೆಚ್ಚಿನ ಸೋಂಕಿತರು ಇನ್ನೂ ಲಸಿಕೆ ಪಡೆದುಕೊಳ್ಳದೆ ಇರುವರೇ ಆಗಿದ್ದಾರೆ. ಇದೀಗ ನಾವು ಈ ಭಾಗದಲ್ಲಿಕೋವಿಡ್ ನಾಲ್ಕನೇ ಅಲೆಯನ್ನು ಎದುರಿಸುತ್ತಿದ್ದೇವೆʼ ಎಂದು ಡಬ್ಲ್ಯುಎಚ್‌ಒ ಪೂರ್ವ ಮೆಡಿಟರೇನಿಯನ್ಪ್ರಾದೇಶಿಕ ನಿರ್ದೇಶಕ ತಿಳಿಸಿದ್ದಾರೆ.

ಹಿಂದಿನ ತಿಂಗಳುಗಳ ಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ತಿಂಗಳಲ್ಲಿಸೋಂಕು ಪ್ರಮಾಣ ಶೇ.55ರಷ್ಟು ಮತ್ತು ಮರಣ ಪ್ರಮಾಣ ಶೇ.15 ರಷ್ಟು ಹೆಚ್ಚಾಗಿದೆ.3.10 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣ ಮತ್ತು3,500 ಸಾವು ವಾರದಲ್ಲೇ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT