ನವದೆಹಲಿ: ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ರೂಪಾಂತರ ತಳಿ ಓಮೈಕ್ರಾನ್, ಉಸಿರಾಟ ವ್ಯವಸ್ಥೆಯ ಮೇಲ್ಭಾಗದ ಅಂಗಗಳಿಗೆ ಹಾನಿ ಮಾಡುತ್ತದೆ ಎಂಬ ಬಗ್ಗೆ ಮತ್ತಷ್ಟು ಪುರಾವೆಗಳು ಲಭ್ಯವಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅಂದರೆ, ಗಂಟಲು, ಮೂಗಿನ ಭಾಗದಲ್ಲಿ ಹಾನಿ ಮಾಡಬಹುದು ಎನ್ನಲಾಗಿದೆ.

ಆದರೆ, ಈ ಹಿಂದಿನ ತಳಿಗಳಿಗೆ ಹೋಲಿಸಿದರೆ ರೋಗ ಲಕ್ಷಣ ಕಡಿಮೆ ಇರುತ್ತದೆ ಎಂದು ಡಬ್ಲ್ಯುಎಚ್‌ಒ ಅಧಿಕಾರಿ ಹೇಳಿದ್ದಾರೆ.

ಓಮೈಕ್ರಾನ್ ಹರಡುವಿಕೆ ತಡೆಗೆ ನಿರ್ದಿಷ್ಟ ಲಸಿಕೆಯ ಅಗತ್ಯವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ವ್ಯವಸ್ಥಾಪಕ ಅಬ್ದಿ ಮಹಮೂದ್, ಆ ಬಗ್ಗೆ ಹೇಳುವುದಕ್ಕೆ ಈ ಸಮಯ ಸೂಕ್ತವಾದುದಲ್ಲ ಎನಿಸುತ್ತದೆ. ಈ ನಿರ್ಧಾರಕ್ಕೆ ಜಾಗತಿಕ ಸಮನ್ವಯತೆಯ ಅಗತ್ಯವಿದೆ. ವಾಣಿಜ್ಯ ವಲಯವು ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಡಬಾರದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.