ಶನಿವಾರ, ಸೆಪ್ಟೆಂಬರ್ 25, 2021
30 °C

ಬ್ರೆಜಿಲ್‌ನಲ್ಲಿ ಕೋವಿಡ್‌ 3ನೇ ಅಲೆಗೆ ಗರ್ಭಿಣಿಯರು ಗುರಿಯಾಗುವ ಆತಂಕ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಸೀಲಿಯಾ:  ಕೋವಿಡ್ -19 ಬ್ರೆಜಿಲ್‌ನಲ್ಲಿ ಗರ್ಭಿಣಿ ಮಹಿಳೆಯರ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶದಲ್ಲಿ ಈ ವರೆಗೆ 1,000 ಕ್ಕೂ ಹೆಚ್ಚು ಗರ್ಭಿಣಿಯರ ಸಾವುಗಳು ಸಂಭವಿಸಿವೆ. 

ಬ್ರೆಜಿಲ್‌ನಲ್ಲಿ ಕೋವಿಡ್‌ನಿಂದ ಸಾಯುತ್ತಿರುವ ಐವರು ಮಹಿಳೆಯರಲ್ಲಿ ಒಬ್ಬರು ತೀವ್ರ ನಿಗಾ ಘಟಕದ ಸೌಲಭ್ಯ ದೊರೆಯದೇ ಪ್ರಾಣ ಬಿಡುತ್ತಿದ್ದರೆ, ಮೂರರಲ್ಲಿ ಒಬ್ಬರು ವೆಂಟಿಲೇಟರ್‌ ಸಿಗದೇ ಜೀವ ಕಳೆದುಕೊಳ್ಳುತ್ತಿದ್ದಾರೆ. 

ಇಲ್ಲಿಯವರೆಗೆ ಬ್ರೆಜಿಲ್ 5,30,000ಕ್ಕಿಂತಲೂ ಹೆಚ್ಚು ಕೋವಿಡ್‌ ಸಂಬಂಧಿತ ಸಾವುಗಳನ್ನು ಕಂಡಿದೆ. ಜನಸಂಖ್ಯೆಯ ಕೇವಲ 45% ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ.

ಕೋವಿಡ್‌ಗೆ ಗುರಿಯಾಗುವ ಆತಂಕ: ಜನನ ಪ್ರಮಾಣ ಕುಸಿತ 

ಬ್ರೆಜಿಲ್‌ನ ಮನೌಸ್ ಎಂಬಲ್ಲಿ ಇದೇ ವರ್ಷದ ಏಪ್ರಿಲ್‌ನಲ್ಲಿ ಕೊರೊನಾ ವೈರಸ್‌ನ ಹೊಸ ತಳಿಯೊಂದು (ಪಿ.1) ಪತ್ತೆಯಾಗಿದ್ದು, ಅದು ಗರ್ಭಿಣಿಯರಿಗೆ ಸಮಸ್ಯಾತ್ಮಕವಾಗಿ ಪರಿಣಮಿಸುತ್ತಿದೆ ಎಂದು ಸರ್ಕಾರ ಹೇಳಿತ್ತು. ಇದೇ ಹಿನ್ನೆಲೆಯಲ್ಲಿ, ಕೋವಿಡ್‌ ಸಾಂಕ್ರಾಮಿಕ ಅಂತ್ಯವಾಗುವ ವರೆಗೆ ಮಹಿಳೆಯರು ಗರ್ಭ ಧರಿಸುವಿಕೆಯಿಂದ ದೂರ ಇರಬೇಕು ಎಂದೂ ಮನವಿ ಮಾಡಲಾಗಿತ್ತು. ಹೀಗಾಗಿ ಬ್ರೆಜಿಲ್‌ನಲ್ಲಿ ಈ ಬಾರಿ ಜನನ ಪ್ರಮಾಣವೂ ಕಡಿಮೆಯಾಗಿದೆ. 

‘ಸಾಂಕ್ರಾಮಿಕ ರೋಗದ ಆರಂಭದಲ್ಲಿ ಗರ್ಭಧಾರಣೆಯನ್ನು ಸಮಸ್ಯೆ ಎಂದೇನೂ ಪರಿಗಣಿಸಿರಲಿಲ್ಲ. ಆದರೆ, ಗರ್ಭಿಣಿಯರು ಕೊರೊನಾ ವೈರಸ್‌ ಸೋಂಕಿಗೆ ಒಳಗಾದರೆ, ಹೆಚ್ಚಿನ ಅಪಾಯಗಳಾಗಬಹುದಾದ ಸಾಧ್ಯತೆಗಳಿವೆ ಎಂದು ಇತ್ತೀಚಿನ  ಸಂಶೋಧನೆಗಳು, ಅಧ್ಯಯನಗಳು ಹೇಳಿವೆ,‘ ಎಂದು ವೈದ್ಯಕೀಯ ನಿಯತಕಾಲಿಕೆ ‘ದಿ ಲ್ಯಾನ್ಸೆಟ್‌’ನ ವೆಬ್‌ಸೈಟ್‌ ‘ಇ ಕ್ಲಿನಿಕಲ್‌ ಮೆಡಿಸಿನ್‌’ನಲ್ಲಿ ಪ್ರಕಟಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು