ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಿಶ್ರ ಲಸಿಕೆ' ಪ್ರಯೋಗದ ಹಿಂದೆ 4000 ಕೊರೊನಾ ವೈರಸ್‌ಗಳು, ರೂಪಾಂತರಿಗಳ ಆತಂಕ

Last Updated 5 ಫೆಬ್ರುವರಿ 2021, 10:17 IST
ಅಕ್ಷರ ಗಾತ್ರ

ಲಂಡನ್‌: ಜಗತ್ತು 4000 ಕೊರೊನಾ ವೈರಸ್‌ಗಳನ್ನು ಎದುರಿಸಲಿದೆ. ಈ ಆತಂಕವು ಲಸಿಕೆ ಸುಧಾರಣೆ ಕಡೆಗಿನ ಓಟವನ್ನು ಪ್ರೇರೇಪಿಸುತ್ತಿದೆ ಎಂದು ಬ್ರಿಟನ್‌ ಆರೋಗ್ಯ ಇಲಾಖೆ ಹೇಳಿದೆ.

ಬ್ರಿಟನ್‌ನಲ್ಲಿ ಎರಡು ಪ್ರತ್ಯೇಕ ಕೋವಿಡ್‌ ಲಸಿಕೆಗಳನ್ನು (ಮಿಶ್ರ ಲಸಿಕೆ) ನೀಡುವ ಪ್ರಯೋಗ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದೆ.

ವೈರಸ್‌ನಲ್ಲಿ ಆಗುವ ರೂಪಾಂತರಗಳ ಆಧಾರದ ಮೇಲೆ ಸಾವಿರಾರು ಬಗೆಯ ವೈರಸ್‌ಗಳನ್ನು ದಾಖಲೀಕರಿಸಲಾಗಿದೆ. ಇದರಲ್ಲಿ ಬ್ರಿಟಿಷ್, ದಕ್ಷಿಣ ಆಫ್ರಿಕಾದ ಮತ್ತು ಬ್ರೆಜಿಲಿಯನ್ ಬಗೆಯ ವೈರಸ್‌ಗಳೂ ಇವೆ. ಇವು ಈಗಿನ ಕೊರೊನಾ ವೈರಸ್‌ಗಿಂತಲೂ ವೇಗವಾಗಿ ಹರಡುವ ಶಕ್ತಿ ಪಡೆದುಕೊಂಡಿವೆ.

ಈಗ ಜಗತ್ತು ಕಂಡುಕೊಂಡಿರುವ ಲಸಿಕೆಗಳು ಭವಿಷ್ಯದಲ್ಲಿ ಎದುರಾಗುವ ರೂಪಾಂತರಿ ವೈರಸ್‌ಗಳ ವಿರುದ್ಧ ಕೆಲಸ ಮಾಡಲಾರವು ಎಂಬುದು ತೀರಾ ಅಸಂಭವ ಎಂದು ಬ್ರಿಟಿಷ್ ಲಸಿಕೆ ನಿಯೋಜನಾ ಸಚಿವ ನದೀಮ್ ಜಹಾವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಫೈಜರ್, ಮಾಡರ್ನಾ, ಅಸ್ಟ್ರಾಜೆನೆಕಾ ಸೇರಿದಂತೆ ಬಹುತೇಕ ಎಲ್ಲ ಲಸಿಕೆ ತಯಾರಕರೂ ತಮ್ಮ ಲಸಿಕೆಯನ್ನು ಹೇಗೆ ಸುಧಾರಿಸಬಹುದು ಎಂಬುದರತ್ತ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಕೊರೊನಾ ವೈರಸ್‌ನ ಯಾವುದೇ ರೂಪಾಂತರವನ್ನು ಎದುರಿಸಲೂ ನಾವು ಸಿದ್ಧರಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪ್ರಯತ್ನಗಳು ನಡೆಯುತ್ತಿವೆ. ಈಗ ಪ್ರಪಂಚದಾದ್ಯಂತ ಸುಮಾರು 4,000 ರೂಪಾಂತರ ಕೊರೊನಾ ವೈರಸ್‌ಗಳಿವೆ,' ಎಂದು ಅವರು ತಿಳಿಸಿದರು.

ವೈರಸ್‌ಗಳ ಪುನಾರಾವರ್ತನೆ ಆಧಾರದ ಮೇಲೆ ರೂಪಾಂತರಗಳು ಮತ್ತು ವಿವಿಧ ಬಗೆಯ ವೈರಸ್‌ಗಳು ಸೃಷ್ಟಿಯಾಗುತ್ತವೆ. ಅದರಲ್ಲಿ ಕೆಲವು ಮಾತ್ರವೇ ಮುಖ್ಯವಾಗುತ್ತವೆ. ಅವು ಗಮನಾರ್ಹ ಬದಲಾವಣೆ ಪಡೆದಿರುತ್ತವೆ ಎಂದು 'ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌' ಅಭಿಪ್ರಾಯಪಟ್ಟಿದೆ.

VUI-202012/01 ಎಂದು ಕರೆಯಲಾಗುವ ಬ್ರಿಟಿಷ್ ಮಾದರಿಯ ವೈರಸ್‌ನ ಸ್ಪೈಕ್ ಪ್ರೋಟೀನ್‌ನಲ್ಲಿ ಬದಲಾವಣೆಯಾಗಿದೆ. ಕೋಶಗಳನ್ನು ಸುಲಭವಾಗಿ ಹಿಡಿದುಕೊಳ್ಳುವಂತೆ ಅವು ರೂಪಾಂತರಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT