ಗುರುವಾರ , ಫೆಬ್ರವರಿ 9, 2023
29 °C

ಸತತ ಮೂರನೇ ಬಾರಿಗೆ ಚೀನಾದ ಆಧ್ಯಕ್ಷರಾದ ಜಿನ್‌ಪಿಂಗ್‌

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸತತ ಮೂರನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಈ ವಿಷಯವನ್ನು ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಲಾಯಿತು.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ(ಸಿಪಿಸಿ) 20ನೇ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಜಿನ್‌ಪಿಂಗ್‌ ಅವರನ್ನು ಸಮಿತಿಯ ಮೊದಲ ಸರ್ವಸದಸ್ಯ ಸಭೆಯಲ್ಲಿ ಚುನಾಯಿಸಲಾಯಿತು ಎಂದು ಸುದ್ದಿ ಸಂಸ್ಥೆ ‘ಕ್ಸಿನುಹಾ’ ಭಾನುವಾರ ವರದಿ ಮಾಡಿದೆ.

ಜಿನ್‌ಪಿಂಗ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ 20ನೇ ಸಿಪಿಸಿ ಕೇಂದ್ರ ಸಮಿತಿಯ 203 ಸದಸ್ಯರು ಮತ್ತು 168 ಪರ್ಯಾಯ ಸದಸ್ಯರು ಭಾಗವಹಿಸಿದ್ದರು.

ಅಧಿವೇಶನದಲ್ಲಿ ಸಿಪಿಸಿ ಕೇಂದ್ರ ಮಿಲಿಟರಿ ಕಮಿಷನ್‌ನ ಅಧ್ಯಕ್ಷರನ್ನಾಗಿಯೂ ಜಿನ್‌ಪಿಂಗ್‌ ಅವರನ್ನು ಹೆಸರಿಸಲಾಯಿತು.

ತಮ್ಮ ಅಯ್ಕೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ಷಿ ಜಿನ್‌ಪಿಂಗ್‌, ‘ವಿಶ್ವವಿಲ್ಲದೇ ಚೀನಾ ಅಭಿವೃದ್ಧಿ ಹೊಂದಲಾರದು, ವಿಶ್ವಕ್ಕೆ ಚೀನಾ ಕೂಡ ಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಷಿ ಜಿನ್‌ಪಿಂಗ್‌ ಅವರ ಹೊಸ ತಂಡದಲ್ಲಿ ಪಕ್ಷದ ಶಾಂಘೈ ಘಟಕದ ಮಾಜಿ ಅಧ್ಯಕ್ಷ ಲಿ ಕಿಯಾಂಗ್ ಅವರನ್ನು ಹೊಸ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಗಿದೆ ಬಿಬಿಸಿ ವರದಿ ಮಾಡಿದೆ.

ತಮ್ಮ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಜಿನ್‌ಪಿಂಗ್‌ ಸಿಪಿಸಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇಶವು ‘ಸಮೃದ್ಧ ಸಮಾಜ’ ವನ್ನು ಸ್ಥಾಪಿಸುವ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು