ವಿಡಿಯೊಗಳು
ಜಿಲ್ಲಾ ಸುದ್ದಿ
ಭವಿಷ್ಯ
ಮೇಷ ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ತಂಟೆ ತಕರಾರುಗಳು ನಿಧಾನವಾಗಿ ದೂರ ಸರಿಯಲಿವೆ. ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಿ ಉತ್ತಮ ಆದಾಯ ತೋರಿಬಂದು ಅಭಿವೃದ್ಧಿಗೆ ಕಾರಣವಾಗುವುದು.
ವೃಷಭ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಂತ್ರಗಳ ಹಾನಿ ಉಂಟಾಗಬಹುದು. ಆರೋಗ್ಯದಲ್ಲಿನ ವ್ಯತ್ಯಾಸಕ್ಕೆ ನಿದ್ರಾಭಂಗವೇ ಮೂಲ ಕಾರಣವಾಗುವುದು. ಲೇವಾದೇವಿ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು.
ಕಟಕ ಹೊಸ ವಾಹನ ಖರೀದಿ ಅಗತ್ಯವೆನಿಸುತ್ತದೆ. ಮಾನಸಿಕ ಶಕ್ತಿಗಳು ಬಲಯುತ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಇಳಿಸುತ್ತೀರಿ. ಮಗನ ವಿವಾಹದ ಸಿದ್ಧತೆಗಳು ಚುರುಕಾಗಿಸಾಗಲಿದೆ.
ಸಿಂಹ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ದಿನ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಇಷ್ಟು ದಿನದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.
ತುಲಾ ಜವಾಬ್ದಾರಿಯುತ ಯೋಜನೆಯ ಸ್ಪಷ್ಟ ವಿಷಯವೊಂದನ್ನು ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಬಾಡಿಗೆ ರೂಪದಲ್ಲಿ ಸಂಘ ಸಂಸ್ಥೆಯೊಂದಕ್ಕೆ ಕಟ್ಟಡವನ್ನು ಕಟ್ಟಿಸಿಕೊಡಲು ಒತ್ತಡ ಬರಲಿದೆ.
ವೃಶ್ಚಿಕ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವ ಸನ್ನಿವೇಶಗಳು ಈ ದಿನ ಎದುರಾಗಲಿದೆ. ಯಾವ ಪರಿಸ್ಥಿತಿಯಲ್ಲಿ ಧೈರ್ಯಗೆಡುವುದು ಸರಿಯಲ್ಲ. ರೈತರು ಉತ್ತಮ ತಳಿಯ ಬೆಳೆಯಿಂದ ಹೆಚ್ಚಿನ ಸಂತೋಷ ಹೊಂದುವರು.
ಮಕರ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ತೆರಿಗೆ ಅಧಿಕಾರಿಗಳಿಗೆ ಮಧ್ಯಾಹ್ನದ ನಂತರದ ಸಮಯದಲ್ಲಿ ಕೆಲಸಗಳ ಒತ್ತಡ ಕಡಿಮೆಯಾಗಲಿದೆ. ಸೃಜನಶೀಲತೆಗೆ ಮನ್ನಣೆ ದೊರಕುವುದು.
ಕುಂಭ ಕುಟುಂಬದ ಅಭಿವೃದ್ಧಿಗೆ ಅಂತಃಕಲಹ, ಹಿತಶತ್ರುಗಳ ಬಾಧೆ ಅನುಭವಕ್ಕೆ ಬರಲಿದೆ. ಹಿರಿಯರ ಬಳಿಯಲ್ಲಿ ಅನವಶ್ಯಕ ವಿವಾದ, ಗೊಂದಲಗಳಿಗೆ ಅವಕಾಶ ನೀಡಬೇಡಿ.
ಪ್ರಜಾವಾಣಿ ಪಿಕ್ಸ್