ಬೆಂಗಳೂರು: ಕರ್ನಾಟಕದ ಈಜುಪಟುಗಳು ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ 51ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ಸ್ ಚಾಂಪಿಯನ್ಷಿಪ್ ವಾಟರ್ಪೋಲೊ ಸ್ಪರ್ಧೆಯಲ್ಲಿ ನಿರಾಸೆ ಅನುಭವಿಸಿದರು. ಬಾಲಕಿಯರ ಈಜು ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಬಾಲಕರ ತಂಡವು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕೇರಳಕ್ಕೆ ಮಣಿಯಿತು.

ಟೂರ್ನಿಯ ಅಂತಿಮ ದಿನವಾದ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಬಾಲಕಿಯರ ತಂಡವು 8–14ರಿಂದ ಕೇರಳ ಎದುರು ಪರಾಭವಗೊಂಡಿತು. ಸಂಘಟಿತವಾಗಿ ಆಡಿದ ಕೇರಳ ತಂಡದ ಪರ ನಿತ್ಯಾ 4 ಅಂಕ ಗಳಿಸಿ, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಕರ್ನಾಟಕ ತಂಡದ ರೋಶಿಣಿ ಎಸ್. (5) ಹಾಗೂ ನಿತ್ಯಾ (3) ಪ್ರಬಲ ಪ್ರತಿರೋಧ ತೋರಿದರಾದರೂ, ಇತರರು ಅಂಕ ಗಳಿಸುವಲ್ಲಿ ವಿಫಲರಾದರು.

ಗುರುವಾರ ನಡೆದ ಸೆಮಿಫೈನಲ್ನ ರೋಚಕ ಹಣಾಹಣಿಯಲ್ಲಿ ಬಂಗಾಳ ತಂಡಕ್ಕೆ ಮಣಿದಿದ್ದ ಬಾಲಕರ ತಂಡವು ಕಂಚಿನ ಪದಕ ಗೆಲ್ಲುವಲ್ಲಿಯೂ ವಿಫಲವಾಯಿತು. ಕೇರಳ ತಂಡವು 15–10ರಿಂದ ಆತಿಥೇಯ ತಂಡವನ್ನು ಸುಲಭವಾಗಿ ಸೋಲಿಸಿತು.

ಗೋಕುಲ ಕೃಷ್ಣ 4 ಹಾಗೂ ಇರ್ಫಾನ್, ವಿಶಾಲ್ ವಿ. ಮತ್ತು ಆದಿತ್ಯನ್ ಎ.ಎಸ್. ತಲಾ 3 ಅಂಕ ಗಳಿಸಿ ಕೇರಳ ತಂಡಕ್ಕೆ ಗೆಲುವು ತಂದುಕೊಟ್ಟರು. ಆತಿಥೇಯ ತಂಡದ ಚಿನ್ಮಯ್ ಪೈ (3) ಕೊಂಚ ಪ್ರತಿರೋಧ ತೋರಿದರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಬಾಲಕರ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ತಂಡವು 16–15ರಿಂದ ಬಂಗಾಳ ತಂಡವನ್ನು ಮಣಿಸಿತು. ಜಾಯ್ ಮೊಂಡಲ್ (5) ಹಾಗೂ ರಾಜೇಶ್ ಎಸ್.(4) ಮಹಾರಾಷ್ಟ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಂಗಾಳ ತಂಡದ ಮಂಥನ್ ಐ.ಎಸ್. (7) ಹಾಗೂ ಸಾಮ್ರಾಟ್ ರವೀಂದ್ರ ಬಿ. (5) ಪ್ರಬಲ ಹೋರಾಟ ತೋರಿದರು.

ಬಾಲಕಿಯರ ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವು 13–8ರಿಂದ ಒಡಿಶಾ ತಂಡವನ್ನು ಪರಾಭವಗೊಳಿಸಿತು.

ಮಹಾರಾಷ್ಟ್ರದ ಜಾಯ್ ಮಂಡಲ್ ಬಾಲಕರ ವಿಭಾಗದ ಶ್ರೇಷ್ಠ ಈಜುಪಟು ಪ್ರಶಸ್ತಿಗೆ ಭಾಜನರಾದರು. ಕೇರಳದ ಸಫ್ವಾ ಸಕೀರ್ ಅವರು ಬಾಲಕಿಯರ ವಿಭಾಗದಲ್ಲಿ ಈ ಗೌರವ ಪಡೆದರು.

ಡೈವಿಂಗ್ನಲ್ಲಿ ಸ್ಕಂದನ್ಗೆ ಕಂಚು: ಕೆನ್ಸಿಂಗ್ಟನ್ ಈಜುಕೊಳದಲ್ಲಿ ನಡೆದ ಡೈವಿಂಗ್ ಸ್ಪರ್ಧೆಯಲ್ಲಿ ಬಾಲಕರ ಜಿ–2 (3 ಮೀ.) ಸ್ಪ್ರಿಂಗ್ಬೋರ್ಡ್ ವಿಭಾಗದಲ್ಲಿ ಸ್ಕಂದನ್ ಪ್ರಸಾದ್ (262.45 ಅಂಕ) ಕಂಚು ಗೆದ್ದರು. ಆದರೆ ಉಳಿದ ಸ್ಪರ್ಧೆಗಳಲ್ಲಿ ಕರ್ನಾಟಕದ ಈಜುಪಟುಗಳು ನಿರಾಶೆ ಅನುಭವಿಸಿದರು. ಈ ಸ್ಪರ್ಧೆಯಲ್ಲಿ ಮಧ್ಯಪ್ರದೇಶದ ಆರುಶ್ ರಘುವಂಶಿ (297.15 ಅಂಕ) ಚಿನ್ನ ಗೆದ್ದರೆ, ಮಣಿಪುರದ ಶೈಖೊಮ್ ಕೊರುಂಗನ್ಬಾ (275.55) ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಬಾಲಕಿಯರ ಜಿ–1 (1 ಮೀ.) ಸ್ಪ್ರಿಂಗ್ಬೋರ್ಡ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಶ್ರಾವಣಿ ಪ್ರತಾಪ್ ಸೂರ್ಯವಂಶಿ 268.15 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು. ಮೃಣಾಲಿನಿ (ತಮಿಳುನಾಡು, ಅಂಕ: 254.10) ಬೆಳ್ಳಿ ಪದಕವನ್ನು ಹಾಗೂ ಅನ್ನೇಶಾ ಧಾರಾ (ಬಂಗಾಳ, ಅಂಕ: 250.8) ಕಂಚಿನ ಪದಕವನ್ನು ಜಯಿಸಿದರು.

Highlights - Karnataka women's waterpolo team settled for a silver medal as the home side lost to Kerala 8-14 in the final of the 51st Junior National Aquatic Championship here on Thursday. Meanwhile, the boys' team lost to Kerala 10-15 in the bronze medal match. For the girls' team, Roshni S and Nithya C scored five and three goals respectively, but Nivya M's late-scoring spree of four goals for Kerala took the game away from the hosts. Roshni and Nithya scored the bulk of the goals in the semifinal game against Odisha as well. Kerala's Safwa Sakeer was awarded the best women's player of the tournament. Meanwhile, the boys' bronze medal match saw Karnataka's defense struggle to contain Kerala's attack, led by Gokul Krishna (four goals), while three more scored a hat-trick. Bengal, who defeated K'taka the other day in semifinals, clinched the gold medal with a close 16-15 victory over Maharashtra. Joy Mondal was also awarded the best men's player of the tournament. In diving, Karnataka's Skandan Prasad claimed the bronze medal with a score of 264.45 behind Madhya Pradesh's Arush Raghuvanshi (297.15) and Manipur's Shaikhom Korounganba (275.55). Results: Waterpolo: Boys: Gold medal match: Bengal: 16 bt Maharashtra: 15; Bronze medal match: Kerala: 15 bt Karnataka: 10Girls: Gold Medal Match: Kerala: 14 bt Karnataka: 8; Bronze medal match: Maharashtra: 13 bt Odisha: 8 Diving: Boys: Group II: 3m Springboard: Arush Raghuvanshi (MP, 297.15) 1; Shaikhom Korounganba (Man, 275.55) 2; Skandan Prasad T (Kar, 264.45) 3 Girls: Group I: 1m Springboard: Shravani Pratap Suryawanshi (Mah, 268.15) 1; Mrunalini K (TN, 254.10) 2; Annesha Dhara (Ben, 250.80) 3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.