ಬೆಂಗಳೂರು: ಭತ್ತ, ಜೋಳಕ್ಕೆ ಬಾಧಿಸುತ್ತಿದ್ದ ಬೆಂಕಿ ರೋಗ (ಎಲೆ ಚುಕ್ಕೆ ರೋಗ) ಈಗ ರಾಜ್ಯದ ಶುಂಠಿ ಬೆಳೆಯನ್ನು ಬಾಧಿಸುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಸೂಕ್ತ ಸಮಯದಲ್ಲಿ ಸಮರ್ಪಕ ನಿರ್ವಹಣಾ ಕ್ರಮ ಕೈಗೊಳ್ಳದಿದ್ದರೆ ಸಂಪೂರ್ಣ ಬೆಳೆ ನಾಶವಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಪೆರಿಕ್ಯುಲೇರಿಯಾ ಫಂಗಸ್ನಿಂದ ಬರುವ ಈ ‘ಬೆಂಕಿ ರೋಗ ಕಳೆದ ವರ್ಷ ಕುಶಾಲನಗರ ಭಾಗದ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಈ ವರ್ಷ ಹಾಸನ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆ ವ್ಯಾಪಿಸಿದೆ, ಶುಂಠಿ ಬೆಳೆಯನ್ನು ಬಾಧಿಸುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕೃಷಿ ಮಾಡುತ್ತಿರುವ ರೈತರಲ್ಲಿ ಬೆಳೆ ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ.

ರೋಗ ವಿಸ್ತರಣೆ ಸಾಧ್ಯತೆ

ರಾಜ್ಯದಲ್ಲಿ ಸುಮಾರು 70 ಸಾವಿರ ಎಕರೆ ಪ್ರದೇಶದಲ್ಲಿ ಶುಂಠಿ ಕೃಷಿ ಇದೆ. ದಶಕಗಳ ಹಿಂದೆ ಮೈಸೂರು, ಕೊಡಗು ಮತ್ತು ಹಾಸನದ ಕೆಲ ತಾಲ್ಲೂಕುಗಳಿಗೆ ಸೀಮಿತವಾಗಿದ್ದ ಶುಂಠಿ ಕೃಷಿ ರಾಜ್ಯದ ಇತರೆ ಜಿಲ್ಲೆಗಳಿಗೂ ಹಬ್ಬಿದೆ. ಈಗ ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಉತ್ತರಕನ್ನಡ ಮತ್ತು ಬೀದರ್ ಜಿಲ್ಲೆಗಳಲ್ಲೂ ಶುಂಠಿ ಕೃಷಿ ವಿಸ್ತರಿಸಿದೆ.

‘ಕಳೆದ ವರ್ಷ ಆರು ತಿಂಗಳ ವಯಸ್ಸಿನ ಶುಂಠಿ ಬೆಳೆಗೆ ರೋಗ ಬಾಧಿಸಿತ್ತು. ಆ ವೇಳೆಗೆ ಗೆಡ್ಡೆಗಳು ಬಲಿತಿದ್ದವು. ಗಿಡಗಳು ಮಾತ್ರ ಒಣಗಿದವು. ಹಾಗಾಗಿ ಗೆಡ್ಡೆಗಳಿಗೆ ಅಷ್ಟಾಗಿ ತೊಂದರೆಯಾಗಲಿಲ್ಲ. ಈ ಬಾರಿ ಎರಡು ತಿಂಗಳ ಬೆಳೆಗೆ ರೋಗ ಬಾಧಿಸುತ್ತಿದೆ. ಹೀಗಾಗಿ ಗಿಡಗಳು ಒಣಗುತ್ತವೆ, ಗೆಡ್ಡೆ ಕೊಳೆಯುತ್ತಿದೆ. ಚಿಕಿತ್ಸೆ ನೀಡದಿದ್ದರೆ, ರೋಗ ತಗುಲಿದ ಎರಡು–ಮೂರು ವಾರಗಳಲ್ಲಿ ಬೆಳೆ ಸಂಪೂರ್ಣ ನಾಶವಾಗುತ್ತದೆ’ ಎಂದು ಕುಶಾಶಲನಗರದ ಹೆಬ್ಬಾಲೆ ಕೃಷಿಕ ಪುನೀತ್ ಆತಂಕ ವ್ಯಕ್ತಪಡಿಸುತ್ತಾರೆ.

ರೋಗಕ್ಕೆ ಪ್ರಮುಖ ಕಾರಣ

‘ಈ ವರ್ಷ ವಾಡಿಕೆಗಿಂತ ಮುನ್ನವೇ( ಮೇನಿಂದ) ಆರಂಭಾದ ಮಳೆ ಎಡಬಿಡದೇ ಸುರಿಯುತ್ತಲೇ ಇದೆ. ಜೊತೆಗೆ, ತಗ್ಗಿದ ಉಷ್ಣಾಂಶ, ತುಂತುರು ಮಳೆ, ಮೋಡ ಮುಸುಕಿದ ವಾತಾವರಣ, ಕಡಿಮೆ ಬಿಸಿಲು, ಮಣ್ಣಿನಲ್ಲಿ ಹೆಚ್ಚಿರುವ ತೇವಾಂಶ, ವೇಗವಾಗಿ ಬೀಸುವ ಗಾಳಿ, ಸೂಕ್ತ ಬಸಿಗಾಲುವೆ ಇಲ್ಲದಿರುವುದು– ಇವೆಲ್ಲ ರೋಗ ಉಲ್ಬಣಗೊಳ್ಳಲು ಕಾರಣವಾಗಿದೆ’ ಪ್ರಮುಖ ಕಾರಣ’ ಎನ್ನುತ್ತಾರೆ ವಿಜ್ಞಾನಿ ಬಿ.ಎಸ್. ಹರೀಶ್.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ರೋಗ ಸರ್ವೇಕ್ಷಣೆ ನಡೆಸಿದೆ. ಕೊಡುಗು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ತೆಂಗಿನ ತೋಟಗಳಲ್ಲಿ ಶುಂಠಿ ಮಿಶ್ರ ಕೃಷಿಯಾಗಿಸಿರುವ ಕಡೆ ರೋಗ ಹೆಚ್ಚು ಉಲ್ಬಣಿಸಿರುವುದನ್ನು ಗುರುತಿಸಿದ್ದಾರೆ.

ನಿರ್ವಹಣಾ ಕ್ರಮ

ರೋಗ ಬರುವ ಮೊದಲು: ಶೇ 1 ರ ಬೋರ್ಡೋ ದ್ರಾವಣ, ಮ್ಯಾಂಕೋಝೆಬ್ (2 ಗ್ರಾಂ ಪ್ರತಿ ಲೀಟರ್ ನೀರಿಗೆ) ಅಥವಾ ತಾಮ್ರದ ಆಕ್ಸಿ ಕ್ಲೋರೈಡ್ (3 ಗ್ರಾಂ ಪ್ರತಿ ಲೀಟರ್ ನೀರಿಗೆ) ಗಳನ್ನು 12 ರಿಂದ15 ದಿನಗಳ ಅಂತರದಲ್ಲಿ ಸಿಲಿಕಾನ್ ಆಧಾರಿತ ಅಂಟು (ಗಮ್) ಸೇರಿಸಿ ಸಿಂಪಡಿಸಬೇಕು.

ರೋಗ ಬಂದಿದ್ದರೆ: ಮಳೆ ಇಲ್ಲದಿರುವಾಗ (ಕನಿಷ್ಟ 4 ರಿಂದ 5 ಗಂಟೆ) ಪ್ರೋಪಿಕೋನಝೋಲ್ 25 ಇ.ಸಿ. (1 ಮಿಲೀ ಪ್ರತಿ ಲೀಟರ್ ನೀರಿಗೆ)/ಹೆಕ್ಸಾಕೋನಝೋಲ್ 5 ಇ.ಸಿ. (1 ಮಿಲೀ ಪ್ರತಿ ಲೀಟರ್ ನೀರಿಗೆ)/ಟೆಬುಕೋನಝೋಲ್ 38.39 ಎಸ್ಸಿ (1 ಮಿಲೀ ಪ್ರತಿ ಲೀಟರ್ ನೀರಿಗೆ) ಅಂತರ್ವ್ಯಾಪಿ ಶಿಲೀಂಧ್ರನಾಶಕಗಳನ್ನು ಸಿಂಪಡಿಸಬೇಕು. ಅಥವಾ ಕಾರ್ಬೆಂಡೈಝಿಂ ಶೇ 12 + ಮ್ಯಾಂಕೋಝೆಬ್ ಶೇ 63 (2 ಗ್ರಾಂ ಪ್ರತಿ ಲೀಟರ್ ನೀರಿಗೆ) 8-10 ದಿನಗಳ ಅಂತರದಲ್ಲಿ ಗುಣಮಟ್ಟದ ಅಂಟು ಬೆರೆಸಿ ಸಿಂಪಡಿಸಬೇಕು.

ಬಹಳಷ್ಟು ಕೃಷಿಕರು ರೋಗ ಬಂದ ನಂತರ ಟೆಬುಕೋನಝೋಲ್ ಶೇ 50 + ಶೇ 25 ಟ್ರೈಫ್ಲಾಕ್ಸಿಸ್ಟ್ರಾಬಿನ್ ಡಬ್ಲ್ಯೂಜಿ ಸಿಂಪಡಿಸಿ ಉತ್ತಮ ಫಲಿತಾಂಶ ಪಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಸಂಶೋಧನೆಯಿಂದ ದೃಢಪಡಿಸಬೇಕಿದೆ. ಆದರೂ ಸ್ಟ್ರಾಬುಲಿನ್ ಗುಂಪಿಗೆ ಸೇರಿರುವ ಶಿಲೀಂಧ್ರನಾಶಕಗಳನ್ನು ಪದೇ ಪದೇ ಬಳಕೆ ಮಾಡುವುದರಿಂದ ರೋಗಾಣು ಅಂಥಹ ಶಿಲೀಂಧ್ರನಾಶಕಗಳಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ಅವುಗಳ ಪುನರಾವರ್ತಿತ ಬಳಕೆ ಮಾಡದಿರಲು ತಿಳಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಎಲೆಚುಕ್ಕೆ ರೋಗಕ್ಕೆ ಕಾರಣ?

ಶುಂಠಿಗೆ ಎಲೆಚುಕ್ಕೆ ರೋಗ ಹೊಸದೇನಲ್ಲ. ಆದರೆ ಇಷ್ಟು ತೀವ್ರವಾಗಿ ಈ ಮೊದಲು ಬರುತ್ತಿರಲಿಲ್ಲ, ಹಾಗೆಯೇ ಸುಲಭವಾಗಿ ನಿರ್ವಹಿಸಬಹುದಿತ್ತು ಎನ್ನುತ್ತಾರೆ ವಿಜ್ಞಾನಿಗಳು.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸರ್ವೇಕ್ಷಣೆಯ ಪ್ರಕಾರ, ಪೈರಿಕ್ಯುಲೇರಿಯಾ (ಭತ್ತದ ಬೆಂಕಿ ರೋಗಕ್ಕೆ ಕಾರಣವಾದ ಶಿಲೀಂಧ್ರದ ಜಾತಿಗೆ ಸೇರಿದ್ದು), ಫಿಲ್ಲೋಸ್ಟಿಕ್ಟ ಹಾಗೂ ಕೊಲ್ಲೆಟೋಟ್ರೈಕಂ ಶಿಲೀಂಧ್ರಗಳಿಂದ ಈ ರೋಗ ಕಾಣಿಸಿಕೊಂಡಿದೆ. ಇವುಗಳ ಪೈಕಿ ಪೈರಿಕ್ಯುಲೇರಿಯಾ ಅತಿ ಶೀಘ್ರವಾಗಿ ಹರಡುವ ರೋಗಾಣುವಾಗಿದೆ.

ಪರೀಕ್ಷೆಗೆ ಮಾದರಿ ರವಾನೆ

ಪೈರಿಕ್ಯುಲೇರಿಯಾದ ಪ್ರಬೇಧ ದೃಢಪಡಿಸುವ ಸಲುವಾಗಿ ರೋಗದ ಮಾದರಿಯನ್ನು ಹೈದರಾಬಾದ್ನ ರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ.

ವಿಜ್ಞಾನಿಗಳು ಸರ್ವೇಕ್ಷಣೆ ನಡೆಸಿದ ಕೊಡಗು (ಕುಶಾಲನಗರ) ಮೈಸೂರು (ಪಿರಿಯಾಪಟ್ಟಣ, ಹುಣಸೂರು) ಮತ್ತು ಹಾಸನ (ಅರಕಲಗೂಡು) ಜಿಲ್ಲೆಗಳಲ್ಲಿನ ಶುಂಠಿ ತಾಕುಗಳಲ್ಲಿ ಈ ರೋಗ ಲಕ್ಷಣಗಳು ಮತ್ತು ರೋಗಾಣುಗಳು ಕಂಡು ಬಂದಿವೆ.

ಕುಶಾಲನಗರ ಮತ್ತು ಅರಕಲಗೂಡು ಭಾಗಗಳಲ್ಲಿ ರೋಗ ಹರಡಲು ಪೂರಕವಾದ ಅಂಶಗಳಿರುವುದರಿಂದ ಬಹಳಷ್ಟು ಕಡೆ ತುಸು ಹೆಚ್ಚೇ ಚುಕ್ಕೆ ಮತ್ತು ಬೆಂಕಿ ರೋಗ ಕಂಡು ಬಂದಿದೆ. ಉಳಿದಂತೆ ಮಳೆ ಕಡಿಮೆ ಇರುವ ಮತ್ತು ಶುಷ್ಕ ವಾತಾವರಣ ಅಥವಾ ಆದ್ರತೆ ಕಡಿಮೆಯಿರುವ ತಾಲ್ಲೂಕುಗಳಲ್ಲಿ ರೋಗದ ಸಮಸ್ಯೆ ಕಡಿಮೆಯಿದೆ.

ಔಷಧ ಸರಿಯಾಗಿ ಕೆಲಸ ಮಾಡದಿರಲು ಕಾರಣಗಳು

ನಿರಂತರ ಮಳೆ (ಸಿಂಪಡಣೆಗೆ ಬಿಡುವು ಕೊಡದಷ್ಟು)

ಶಿಲೀಂಧ್ರನಾಶಕಗಳ ಜೊತೆ ಬೆಳೆ ಉತ್ತೇಜಕಗಳು, ಹಾರ್ಮೋನುಗಳು, ಅಮೈನೋ ಆಮ್ಲ, ಕಡಲಪಾಚಿ ಆಧಾರಿತ ಉತ್ಪನ್ನಗಳ ಬಳಕೆ

ಉತ್ಪನ್ನಗಳ ಹೊಂದಾಣಿಕೆ ಅರಿವಿಲ್ಲದೆಯೇ ಒಮ್ಮೆಗೆ ನಾಲ್ಕಾರು ಉತ್ಪನ್ನಗಳನ್ನು ಬಳಸುವುದು

ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದ ಔಷಧಗಳ ಬಳಕೆ ರೋಗವನ್ನು ನಿಯಂತ್ರಿಸುವಲ್ಲಿ ಪ್ರಮುಖ ತೊಡಕಾಗಿವೆ.

ಪೋಷಕಾಂಶ ನಿರ್ವಹಣೆಯಲ್ಲಿ ತಪ್ಪು ಕ್ರಮಗಳು

ಮಣ್ಣು ಪರೀಕ್ಷೆ ಮಾಡಿಸದೆಯೇ ರಸಗೊಬ್ಬರ ನೀಡುತ್ತಿರುವುದು, ಅತಿಯಾದ ಸಾರಜನಕ ರಸಗೊಬ್ಬರಗಳ ಬಳಕೆ, ಕಡಿಮೆ ಪ್ರಮಾಣದ ಪೊಟ್ಯಾಷ್ ಬಳಕೆ, ಗೊಬ್ಬರಗಳನ್ನು ಬೆಳೆಯ ಬೇಡಿಕೆಗೆ ತಕ್ಕಂತೆ ನೀಡದಿರುವುದು, ಲಘುಪೋಷಕಾಂಶಗಳ ಅಸಮರ್ಪಕ ಬಳಕೆ, ಔಷಧಗಳೊಂದಿಗೆ ಪೋಷಕಾಂಶಗಳನ್ನು ಮಿಶ್ರಣ ಮಾಡಿ ಸಿಂಪಡಿಸುತ್ತಿರುವುದು. ಸೂಕ್ತ ಪೋಷಣೆ ದೊರೆಯದೆ ಶುಂಠಿ ಬೆಳೆ ರೋಗಕ್ಕೆ ಸುಲಭವಾಗಿ ತುತ್ತಾಗುತ್ತಿರುವುದು ಕಂಡುಬಂದಿದೆ. ತೋವಿವಿಯ ಸರ್ವೇಕ್ಷಣೆ ಸಮಯದಲ್ಲಿ ಪೊಟ್ಯಾಷ್ ಸರಿಯಾದ ಪ್ರಮಾಣದಲ್ಲಿ ಕೊಡದಿರುವ ಅಥವಾ ತೀರಾ ಕಡಿಮೆ ಕೊಟ್ಟಿರುವ ತಾಕುಗಳಲ್ಲಿ ಎಲೆಚುಕ್ಕೆ ರೋಗ ಮೇಲ್ನೋಟಕ್ಕೆ ಹೆಚ್ಚಾಗಿರುವುದು ಕಂಡುಬಂದಿದೆ.

ತರಬೇತಿ ಆಯೋಜನೆ

ರೋಗದ ತೀವ್ರತೆಯನ್ನು ಮನಗಂಡಿರುವ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯವ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಶೋಧನೆಯನ್ನು ನಡೆಸಿ ಸೂಕ್ತ ಮತ್ತು ಸಮಗ್ರ ನಿರ್ವಹಣಾ ಕ್ರಮಗಳನ್ನು ಅಭಿವೃದ್ಧಿಪಡಿಸಲಿದೆ. ಮಾತ್ರವಲ್ಲ, ಶುಂಠಿ ಕೃಷಿಕರಿಗೆ ಅವಶ್ಯವಿರುವ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಲಿದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ದಕ್ಷಿಣ ವಲಯದ ಸಹ-ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಜಗದೀಶ್ ಎಸ್.ಎಲ್ ತಿಳಿಸಿದ್ದಾರೆ.

ವಿಶೇಷ ಸೂಚನೆ

ಬೆಳೆಗಾರರು ಆಗ್ರೋ ಕೇಂದ್ರಗಳಿಗೆ ಔಷಧ ಖರೀದಿಗಾಗಿ ಹೋಗುವ ಮೊದಲು ತಜ್ಞರ ಸಲಹೆ ಪಡೆದು ಅವರು ಶಿಫಾರಸು ಮಾಡುವ ಶಿಲೀಂಧ್ರನಾಶಕಗಳನ್ನು ಮಾತ್ರ ಬಳಸಲು ರೈತರಿಗೆ ಸೂಚಿಸಲಾಗಿದೆ.

ರೋಗ–ನಿರ್ವಹಣೆಯ ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರ ಮೊಬೈಲ್ ಸಂಖ್ಯೆಗಳು; ಕಿರಣ್ ಕುಮಾರ್, ಮೈಸೂರು–9740172729, ಹರೀಶ್ ಬಿ ಎಸ್ 9480557634, ಬೆಂಗಳೂರು, ಮಹೇಶ್ ವೈ ಎಸ್, ಹಾಸನ– 89713 83036); ರವಿಕುಮಾರ್, ದೇವಿಹೊಸೂರು–9886504026, ಪ್ರಸಾದ್ ಪಿ ಎಸ್, ಶಿರಸಿ 9901066699, ಅಬ್ದುಲ್ ಕರೀಮ್, ಬೀದರ್–8792698087 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.