ಮಾಸ ಭವಿಷ್ಯ: 2021ರ ಸೆಪ್ಟೆಂಬರ್ 1ರಿಂದ 30ರವರೆಗೆ ಮಾಸ ರಾಶಿ ಭವಿಷ್ಯ

ಮೇಷ
ಪತ್ನಿ ಪುತ್ರ, ಅಧಿಕಾರಿವರ್ಗಗಳಿಂದ ಸಹಕಾರ ಲಭ್ಯ. ಸಪ್ಟೆಂಬರ್ ೧೪ ರ ವರೆಗೆ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರಗತಿ. ಕಬ್ಬಿಣ ಉಕ್ಕು ಸಿಮೆಂಟ್ ಕಟ್ಟಿಗೆ ಕಂಪನಿ ಮಾಲಿಕರಿಗೆ ವ್ಯವಹಾರಸ್ಥರಿಗೆ ಯಶಸ್ಸು. ಇತರೆ ಉದ್ಯೋಗಗಳಿಗೆ ನೌಕರಿಯಲ್ಲಿ ಸ್ಥಿರತೆ ಇರದೆ ಬದಲಾವಣೆ ಸಾದ್ಯತೆ. ಸರಕಾರಿ ಅಧಿಕಾರಿಗಳು ರಾಜಕಾರಣಿಗಳು ಜನಾನುರಾಗ ಗಳಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗ.
ವೃಷಭ
ಹೊರನೋಟಕ್ಕೆ ಜನರಿಗೆ ನೀವು ಸುಖಿಗಳಾಗಿ ಕಂಡರೂ ವೈಯಕ್ತಿಕವಾಗಿ ದುಃಖಿಗಳಾಗುತ್ತಿರಿ. ಬಂದುಗಳು ಹಿತಚಿಂತಕರೂ ನಿಮ್ಮಿಂದ ದೂರ ಸರಿದಾರು. ಈ ತಿಂಗಳು ನೀವು ಆದಷ್ಟು ತಾಳ್ಮೆಯಿಂದ ವರ್ತಿಸಿ. ಪಾಲುದಾರಿಕೆಯ ವ್ಯವಹಾರದಲ್ಲೆ ಬಹಳ ಎಚ್ಚರಿಕೆಯಿಂದ ಇರಿ. ಮಕ್ಕಳ ನಡತೆಯ ವಿಷಯದಲ್ಲಿ ನಿಗಾ ಇರಲಿ. ತಿಂಗಳಾಂತ್ಯಕ್ಕೆ ಒಂದೊದೇ ಸಮಸ್ಯೆಗಳು ಪರಿಹಾರವಾಗುತ್ತದೆ. ಮನೆಗೆ ಅಲಂಕಾರಿಕ, ಜವಳಿ ವಸ್ತುಗಳನ್ನು ಖರೀದಿಸುವಿರಿ.
ಮಿಥುನ
ಭೌದ್ಧಿಕ ಚಟುವಟಿಗಳಲ್ಲಿ ನಿಮ್ಮನ್ನು ನೀವು ತೊಡಗಿಸಿ ಕೊಳ್ಳುವಿರಿ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಉದ್ಯೋಗದಲ್ಲಿ ಭಡ್ತಿ ಸಾದ್ಯತೆ. ಕೃಷಿ ಉತ್ಪನ್ನ ಮಾರಾಟಗಾರರಿಗೆ ಉತ್ತಮ ಲಾಭ. ಮೈಕೈ ನೋವು ನೆಗಡಿ ಇತ್ಯಾದಿ ಕಿರಿಕಿರಿ ಮಾಡುವ ರೋಗಗಳು ಕಾಡಬಹುದು. ಆರೋಗ್ಯದಲ್ಲಿ ಕಾಳಜಿ ಇರಲಿ. ದಂಪತಿಗಳಲ್ಲಿ ವೈಮನಸ್ಸು ಬರಬಹುದು. ಆಡುವ ಮಾತಿನ ಮೇಲೆ ನಿಗಾ ಇರಲಿ. ವಿಧ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನಡೆಯುವುದು.
ಕಟಕ
ಸಂಶಯವು ವಿನಾಶಕ್ಕೆ ಕಾರಣ. ವಿನಾಕಾರಣ ಸಂಶಯದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಡಿ. ದೃಡ ವಿಶ್ವಾಸದಿಂದ ಹೆಜ್ಜೆಯಿಡಿ. ಸ್ವತಂತ್ರ ಉದ್ಯೋಗ ಮಾಡುವವರಿಗೆ ವ್ಯವಹಾರದಲ್ಲಿ ನಷ್ಟ. ಕೋರ್ಟ ಕಛೇರಿ ಕೆಲಸಗಳಿಗೆ ವೃಥಾ ಅಲೆದಾಟ. ವಿದ್ಯಾರ್ಥಿಗಳಿಗೆ ಮಾನಸಿಕ ಚಂಚಲತೆ ವಿಧ್ಯಾಬ್ಯಾಸಕ್ಕೆ ಅಡಚಣೆ. ಸೆಪ್ಟೆಂಬರ್ ೨೪ ನಂತರದಿಂದ ಸಮಸ್ಯಗಳು ಮಂಜಿನಂತೆ ಕರಗುವವು. ಆರೋಗ್ಯದಲ್ಲಿ ಸಂದಿವಾತ ಆಗಾಗ ಕಾಣಿಸಬಹುದು.
ಸಿಂಹ
ಸಂಪತ್ತನ್ನು ಯೋಗ್ಯವಾದ ಮಾರ್ಗದಲ್ಲಿ ಉಪಯೋಗಿಸಿ. ಭೂಮಿ, ಮನೆ, ಖರೀದಿಗೆ ಉತ್ತಮ ಸಮಯ. ನೌಕರರಿಗೆ ಉದ್ಯೋಗಿಗಳಿಗೆ ಸ್ಥಳ ಬದಲಾವಣೆ ಸಂಭವ. ವಾಹನ, ಯಂತ್ರೋಪಕರಣ ಕಬ್ಬಿಣಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ಉತ್ತಮ ಲಾಭ. ಜೀವನದಲ್ಲಿ ಹಚ್ಚ ಹಸಿರಾಗಿಸುವ ನೆನಪುಗಳನ್ನ ನೀಡಬಲ್ಲಂತ ಘಟನೆಗಳು ಜರುಗಬಹುದು. ಆರೋಗ್ಯ ವಿಚಾರದಲ್ಲಿ ಆಗಾಗ ಕಣ್ಣುನೋವು ಕಾಣಿಸಬಹುದು.
ಕನ್ಯಾ
ತಿಂಗಳ ಪ್ರಾರಂಭದಲ್ಲಿ ಬದುಕು ನಿಸ್ಸಾರ ಎನ್ನಿಸಬಹುದು. ಬಂದುಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಉದ್ಯೊಗದಲ್ಲಿ ಕಿರಿಕಿರಿ. ರಾಜಕಾರಣಿಗಳಿಗೆ ಪ್ರಗತಿ ಕುಂಠಿತ. ಮುಖಂಡರಲ್ಲಿ ವೈಮನಸ್ಸು. ಆಸ್ತಿಗೆ ಸಂಬಂಧಿಸಿದಂತೆ ತೊಂದರೆ. ವಿದ್ಯಾಭ್ಯಾಸದಲ್ಲಿ ತೊಂದರೆ ಕಾಣಿಸಬಹುದು. ಯಾವುದೇ ಕಾರ್ಯ ಮಾಡುವಾಗಲೂ ಆತುರದ ನಿರ್ಧಾರ ಮಾಡಬೇಡಿ. ಸಾಲದ ವ್ಯವಹಾರದಲ್ಲಿ ಎಚ್ಚರವಿರಲಿ. ಒಟ್ಟಿನಲ್ಲಿ ಈ ತಿಂಗಳು ಸ್ವಲ್ಪ ಸಂಯಮ ತಾಳ್ಮೆಯಿಂದ ಕಳೆಯುವುದು ಒಳ್ಳೆಯದು.
ತುಲಾ
ಮನೆಯಲ್ಲಿ ಸ್ನೆಹದ ವಾತಾವರಣ. ವೈವಾಹಿಕ ಜೀವನದಲ್ಲಿ ಸಂತಸ. ಬಾಕಿಯಾದ ಹಳೆ ಸಾಲಗಳನ್ನು ತೀರಿಸುವಿರಿ. ಭೂಮಿ ವಹಿವಾಟು, ಕೃಷಿ ಮಾರಾಟಗಾರರಿಗೆ ಉತ್ತಮ ಲಾಭ. ಸಾಮಾಜಿಕ ಕ್ಷೆತ್ರದಲ್ಲಿ ಇರುವವರು ಜನರೊಂದಿಗೆ ನಿಷ್ಠುರವಾಗಿ ವರ್ತಿಸದಿರಿ. ಅಜೀರ್ಣದಿಂದ ತೊಂದರೆ ಕಾಣಿಸಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸು.
ವೃಶ್ಚಿಕ
ಗುರು ಹಿರಿಯರ ಆಶಿರ್ವಾದ ಪಡೆದು ಮಹತ್ವದ ನಿರ್ಣಯ ತೆಗೆದುಕೊಳ್ಳಿ. ಖನಿಜಗಳು ತೈಲ ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಲಾಭ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ. ಅಗ್ನಿಯಿಂದ ಅವಘಡ ಸಾದ್ಯತೆ ಎಚ್ಚರಿಕೆಯಿಂದ ಇರಿ. ಹಳೆಯ ಕೋರ್ಟ್ ಕಾನೂನು ಪ್ರಕರಣಗಳು ಇದ್ದಲ್ಲಿ ಪರಿಹಾರವಾಗುತ್ತದೆ. ಕುಟುಂಬ ಸಮೇತ ಚಿಕ್ಕ ಪ್ರವಾಸವೊಂದನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹ ಯೋಗ.
ಧನು
ವಾಹನ, ಅಲಂಕಾರಿಕ ವಸ್ತುಗಳ ಖರೀದಿ ಯೋಗ. ಸಂಗೀತ ಸಾಹಿತ್ಯ ಲೇಖನ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅಭಿವೃದ್ಧಿ. ಆಕಸ್ಮಿಕ ಧನಲಾಭ. ತಂದೆತಾಯಿ ಆರೋಗ್ಯದಲ್ಲಿ ಚೇತರಿಕೆ. ಮನೆಯ ವ್ಯವಹಾರಗಳಲ್ಲಿ ನೆಮ್ಮದಿ. ಹೊಟ್ಟೆ ನೋವು ಸಂದಿನೋವುಗಳು ಆಗಾಗ ಕಾಣಿಸಬಹುದು. ಸಂಘ ಸಂಸ್ಥೆಗಳ ಸದಸ್ಯರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗುವಿರಿ. ತಿಂಗಳ ಅಂತ್ಯದಲ್ಲಿ ಆರ್ಥಿಕವಾಗಿ ಚೇತರಿಕೆ.
ಮಕರ
ಆರ್ಥಿಕವಾಗಿ ಸುಭದ್ರವಾಗುವಿರಿ. ಹಳೇಸಾಲ ತೀರಿಸುವಿರಿ. ನಿಮ್ಮ ವಿರೋದಿಗಳ ಆಟ ನಿಮ್ಮ ಮುಂದೆ ನಡೆಯದು. ಕಲೆ ಸಂಸ್ಕೃತಿ ಹೊಟೆಲ್ ಸಿನೇಮಾ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಉನ್ನತಿ. ಸರಕಾರದ ಕೆಲಸಗಳು ಅಡೆ ತಡೆ ಇಲ್ಲದೆ ನಡೆಯುವುದು. ಪಿತ್ರಾರ್ಜಿತ ಆಸ್ತಿಗೆ ಸಂಬಂದ ಪಟ್ಟ ವಿವಾದಗಳು ಇದ್ದಲ್ಲಿ ಇತ್ಯರ್ಥ. ವಾಹನ ಚಲಾಯಿಸುವಾಗ ಜಾಗರೂಕತೆ ವಹಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು.
ಕುಂಭ
ಅಸ್ತಿರವಾದ ಮನಸ್ಸಿಂದ ಗೊಂದಲವಾಗುವುದು. ಸಜ್ಜನರ ಸಹವಾಸ ಆಧ್ಯಾತ್ಮಿಕ ಚಿಂತನೆಯ ಅವಶ್ಯಕತೆ ಇದೆ. ಸರಕಾರಿ ನ್ಯಾಯಾಲದ ಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದು. ನಂಬಿದ ಜನರು ನಂಬಿಕೆ ಕಳೆದುಕೊಳ್ಳುವರು. ವೈವಾಹಿಕ ಸಂಬಂಧಗಳು ಹದಗೆಡುವ ಪ್ರಸಂಗ. ಆಡುವ ಮಾತಿನ ಮೇಲೆ ನಿಗಾವಹಿಸಿ. ತಿಂಗಳಾಂತ್ಯದಲ್ಲಿ ಮಕ್ಕಳಿಂದ ಶುಭ ಸುದ್ದಿ. ಆರೋಗ್ಯದಲ್ಲಿ ಚೇತರಿಕೆ.
ಮೀನ
ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಸೋದರ ಸೋದರಿಯರ ಜತೆಗೆ ಬಾಂಧವ್ಯ ಗಟ್ಟಿಯಾಗಲಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೀರಿ. ಹೆಸರಾಂತ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರೆಯುವ ಅವಕಾಶ ಇದೆ. ಪದೋನ್ನತಿ ಸಿಗುವ ಯೋಗ ಇದೆ. ನಿಮ್ಮ ಕೆಲಸ ಸಾಧನೆಯಿಂದ ಪೋಷಕರು ಸಂತೋಷ ಪಡುತ್ತಾರೆ. ಶೈಕ್ಷಣಿಕ ರಂಗದಲ್ಲಿ ಉತ್ತಮ ಪ್ರಗತಿ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಪ್ರಮುಖ ಸುದ್ದಿಗಳು
ಇತ್ತೀಚಿನ ಸುದ್ದಿಗಳು