ಭಾರತ ಸಂಜಾತೆಗೆ ಯುವ ವಿದ್ವಾಂಸ ಪ್ರಶಸ್ತಿ

ವಾಷಿಂಗ್ಟನ್ : ಭಾರತ ಸಂಜಾತೆ ರಾಜಲಕ್ಷ್ಮೀ ನಂದಕುಮಾರ್ ಅವರು ಅಮೆರಿಕದ ಪ್ರತಿಷ್ಠಿತ ‘ಮಾರ್ಕೊನಿ ಸೊಸೈಟಿ ಪೌಲ್ ಬಾರನ್ ಯುವ ವಿದ್ವಾಂಸ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. 

ಚೆನ್ನೈನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪೂರೈಸಿರುವ ಅವರು ಪ್ರಸ್ತುತ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ. 

ಸಂಭಾವ್ಯ ಮಾರಣಾಂತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ಮಾಡಿರುವ ಅಧ್ಯಯನಕ್ಕೆ ಪ್ರಶಸ್ತಿ ನೀಡಲಾಗಿದೆ. ರಾಜಲಕ್ಷ್ಮಿ ಅವರು ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಸಾಮಾನ್ಯ ಸ್ಮಾರ್ಟ್‌ಫೋನ್‌ ಬಳಸಿಕೊಂಡು ಸೋನಾರ್ ಸಿಸ್ಟಮ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಅಂದರೆ ಉಸಿರಾಟ ಮೊದಲಾದ ಮಾನವನ ಶಾರೀರಿಕ ಚಟುವಟಿಕೆಗಳನ್ನು ಯಾವುದೇ ಸಾಧನ ಬಳಸದೆ ಇದು ಪತ್ತೆಹಚ್ಚುತ್ತದೆ. 

ಬಾವಲಿಗಳಿಂದ ಪ್ರೇರಣೆ ಪಡೆದು ಅವರು ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಬಾವಲಿಗಳು ಕತ್ತಲಲ್ಲಿ ಸಂಚರಿಸುವಾಗ ಶಬ್ದಸಂಬಂಧಿ ಸಂಕೇತಗಳನ್ನು ಪಸರಿಸುತ್ತವೆ. ಈ ಸಂಕೇತಗಳಿಂದ ಬರುವ ಪ್ರತಿಫಲನಗಳು ಎದುರಿಗೆ ಇರುವ ವಸ್ತುಗಳನ್ನು ಪತ್ತೆಹಚ್ಚಲು ಬಾವಲಿಗಳಿಗೆ ನೆರವಾಗುತ್ತವೆ. ಇದೇ ಮಾದರಿಯನ್ನು ರಾಜಲಕ್ಷ್ಮಿ ಅನುಸರಿಸಿದ್ದಾರೆ. 

ಪ್ರಮುಖ ಸುದ್ದಿಗಳು