ಟ್ರಾಫಿಕ್‌ನೊಳಗೆ ’ನಟರಾಜ’; ನೃತ್ಯ ಭಂಗಿಗಳೇ ವಾಹನ ಚಾಲನೆಗೆ ಸೂಚನೆ

ಭುವನೇಶ್ವರ: ಎರಡು–ಮೂರು ನಿಮಿಷ ಟ್ರಾಫಿಕ್‌ನಲ್ಲಿ ಕಾಯುವುದೆಂದರೆ ದೊಡ್ಡ ಬೋರು, ಅದೇ ಟ್ರಾಫಿಕ್‌ನಲ್ಲಿ ನಿರಂತರವಾಗಿ ಓಡಾಡುವ ವಾಹನಗಳನ್ನು ಬೆಳಗ್ಗಿಂದ ಸಂಜೆ ವರೆಗೂ ನಿಯಂತ್ರಿಸುವುದೆಂದರೆ? ಇದು ಟ್ರಾಫಿಕ್‌ ಪೊಲೀಸರಿಗೆ ನಿತ್ಯದ ಕೆಲಸ, ಇಂಥ ಕೆಲಸವನ್ನು ಖುಷಿಯಾಗಿ ಡ್ಯಾನ್ಸ್‌ ಮಾಡುತ್ತಾ ಮಾಡಿದರೆ? 

ತಲೆ ಚಿಟ್ಟು ಹಿಡಿಸುವ ಟ್ರಾಫಿಕ್‌ನಲ್ಲಿ ಕೆಂಪು, ಹಸಿರು ದೀಪಗಳು ಕ್ಷಣಕಾಲ ಕೆಟ್ಟು ತಟಸ್ಥಗೊಂಡರೆ ಉದ್ದ–ಅಗಲದ ವಾಹನ ದಟ್ಟಣೆ ಮೀಟರ್‌ ದೂರ ದಾಟಿ ಕಿಲೋ ಮೀಟರ್‌ ವರೆಗೂ ವಿಸ್ತರಿಸುತ್ತದೆ. ಇದನ್ನು ತಪ್ಪಿಸಲು ಪ್ರತಿ ಸಿಗ್ನಲ್‌ಗಳ ಬಳಿಯೂ ಟ್ರಾಫಿಕ್‌ ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿ ಅತ್ಯಗತ್ಯ. ಇಂಥದ್ದೇ ಒಂದು ಸಿಗ್ನಲ್‌ನಲ್ಲಿ ನಿಂತ; ಅಲ್ಲ...ನೃತ್ಯ ಮಾಡುತ್ತ ಓಡಾಡುವ ಪೊಲೀಸ್‌ ಸಿಬ್ಬಂದಿ ಪ್ರತಾಪ್‌ ಚಂದ್ರ ಖಾಂಡ್ವಾಲ್‌. 

ಒಡಿಶಾದ ಭುವನೇಶ್ವರದಲ್ಲಿ ಟ್ರಾಫಿಕ್‌ ನಿಯಂತ್ರಣ ಕಾರ್ಯದಲ್ಲಿರುವ 33 ವರ್ಷದ ಹೋಮ್‌ ಗಾರ್ಡ್‌ ಪ್ರತಾಪ್‌ ಚಂದ್ರ, ನೃತ್ಯ ಭಂಗಿಗಳನ್ನು ಟ್ರಾಫಿಕ್‌ ನಿಯಂತ್ರಣಕ್ಕೆ ಒಗ್ಗಿಸಿಕೊಂಡಿದ್ದಾರೆ. ಪೊಲೀಸರು ನೀಡುತ್ತಿದ್ದ ಸೂಚನೆಗಳನ್ನು ಕಂಡೂ ಕಾಣದಂತೆ ವಾಹನ ಚಲಾಯಿಸುತ್ತಿದ್ದ ಜನರು ನೃತ್ಯದ ಪ್ರಭಾವಕ್ಕೆ ಒಳಗಾಗಿದ್ದಾರೆ. ಭಿನ್ನ ರೀತಿಯಲ್ಲಿ ಪ್ರತಾಪ್‌ ನೀಡುವ ಸೂಚನೆಗಳ ಅನುಸಾರ ಜನರು ವಾಹನ ಸವಾರಿ ಮಾಡುತ್ತಿದ್ದು, ಟ್ರಾಫಿಕ್‌ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಈ ಬಗ್ಗೆ ಪ್ರತಾಪ್‌ ಹೆಮ್ಮೆಯಿಂದ ಮುಗುಳು ನಗುತ್ತಾರೆ.  

 

ಪ್ರಮುಖ ಸುದ್ದಿಗಳು