ಸ್ಥಿರ ಸಾಮರ್ಥ್ಯ ನನ್ನ ಗುರಿ: ನೀರಜ್‌ ಚೋಪ್ರಾ

ನವದೆಹಲಿ: ‘ಸ್ಥಿರ ಸಾಮರ್ಥ್ಯ ತೋರುವುದು ನನಗೆ ಮುಖ್ಯ. ಹೀಗಾಗಿ, ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತೇನೆ’ ಎಂದು ಭಾರತದ ಜಾವೆಲಿನ್‌ ಥ್ರೋ ಅಥ್ಲೀಟ್‌ ನೀರಜ್‌ ಚೋಪ್ರಾ ಹೇಳಿದ್ದಾರೆ. 

ಇತ್ತೀಚೆಗೆ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ನೀರಜ್‌ ಅವರು 88.06 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ಚಿನ್ನದ ಪದಕ ಗೆದ್ದಿದ್ದರು. 

‘ಈ ಋತುವಿನಲ್ಲಿ ನಾನು ತೋರಿದ ಸಾಮರ್ಥ್ಯ ತೃಪ್ತಿ ತಂದಿದೆ. ಈ ವರ್ಷ ನಡೆದ ಪ್ರಮುಖ ಟೂರ್ನಿಗಳಲ್ಲಿ 85 ಮೀಟರ್ಸ್‌ ಆಸುಪಾಸಿನಲ್ಲಿ ಜಾವೆಲಿನ್‌ ಎಸೆದಿದ್ದೇನೆ. ಇಂಡೊನೇಷ್ಯಾದ ಜಕಾರ್ತದಲ್ಲಿ ನನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡೆ. ಮುಂದೆ 90 ಮೀಟರ್ಸ್‌ ದೂರ ಜಾವೆಲಿನ್ ಎಸೆಯಬೇಕು. ಇದನ್ನು ಸಾಧಿಸಲು ಸ್ಥಿರತೆ ಮುಖ್ಯ’ ಎಂದು ನೀರಜ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸುದ್ದಿಗಳು