ರೌಡಿ ಶೀಟರ್ ಮಾರ್ಕೆಟ್ ಗಿರಿ ಹತ್ಯೆ

ಶಿವಮೊಗ್ಗ: ರೌಡಿ ಶೀಟರ್ ಮಾರ್ಕೆಟ್ ಗಿರಿಯನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದಾರೆ.

ಜ್ಯುವೆಲ್ ರಾಕ್ ಹೋಟೆಲ್ ಬಳಿಯ ಸೂರ್ಯ ಕಂಫರ್ಟ್‌ ಬಳಿ ಗಿರಿ (45) ಕಾರಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು, ಕಾರಿನ ಹಿಂಭಾಗದ ಗಾಜು ಒಡೆದು ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿದರು. ಒಂದು ಕಾಲು ಕಾರಿನಲ್ಲೇ ತುಂಡಾಗಿ ದೇಹ ಹೊರಗೆ ಬಿತ್ತು. ಮೂರು ವರ್ಷಗಳ ಹಿಂದೆ ನಡೆದಿದ್ದ ಡಿಸಿಸಿ ಬ್ಯಾಂಕ್‌ನ ₹ 62.77 ಕೋಟಿ ಮೊತ್ತದ ಬಂಗಾರ ಅಡಮಾನ ಸಾಲ ಪ್ರಕರಣದ ಆರೋಪಿಗಳಲ್ಲಿ ಗಿರಿ ಕೂಡ ಒಬ್ಬನಾಗಿದ್ದ.

ಹಲವು ದಿನಗಳಿಂದ ರೌಡಿಸಂ ಬಿಟ್ಟು, ರಿಯಲ್ ಎಸ್ಟೇಟ್‌ ಉದ್ಯಮ ಹಾಗೂ ಮರಳು ದಂಧೆಯಲ್ಲಿ ತೊಡಗಿದ್ದ.

 

ಪ್ರಮುಖ ಸುದ್ದಿಗಳು