328 ಔಷಧಗಳ ನಿಷೇಧ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ನಿಗದಿತ ಪ್ರಮಾಣದ ಔಷಧಗಳ ಸಂಯೋಜನೆಯ (ಎಫ್‌ಡಿಸಿ) 328 ಔಷಧಗಳ  ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿದೆ.

ಎರಡು ಅಥವಾ ಅದಕ್ಕಿಂತ ಹೆಚ್ಚಿನ ನಿಗದಿತ ಪ್ರಮಾಣದ ಔಷಧಗಳ ಸಂಯೋಜನೆಯಿಂದ ತಯಾರಿಸುವ ಔಷಧಗಳಿಗೆ ಮಾತ್ರ ಈ ನಿಷೇಧ ಅನ್ವಯಿಸಲಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಔಷಧಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ನಿಷೇಧ ಹೇರಲಾಗಿದೆ ಪ್ರಕಟಣೆ ತಿಳಿಸಿದೆ.

ಈ ಸಂಯೋಜನೆಗಳನ್ನು ಬಳಸಿಕೊಂಡು ವಿವಿಧ ರೀತಿಯ ಔಷಧಗಳನ್ನು ತಯಾರಿಸಲಾಗುತ್ತಿದೆ. ಆದರೆ, ಇದು ಸರಿಯಾದ ಕ್ರಮ ಅಲ್ಲ. ವಿವಿಧ ಹೆಸರುಗಳಲ್ಲಿ ಈ ಔಷಧಗಳು ಭಾರತದಲ್ಲಿ ಮಾರಾಟವಾಗುತ್ತಿವೆ. ಔಷಧ ತಜ್ಞರ ಶಿಫಾರಸು ಆಧಾರದಲ್ಲಿ ಈ ಕ್ರಮ
ಕೈಗೊಳ್ಳಲಾಗಿದೆ. 

ನಿಷೇಧಕ್ಕೆ ಸಂಬಂಧಿಸಿ ಸರ್ಕಾರ ಮತ್ತು ಔಷಧ ಕಂಪನಿಗಳ ನಡುವೆ ಎರಡು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು.

ಪ್ರಮುಖ ಸುದ್ದಿಗಳು