ನಗರದ ಜೆ.ಎನ್. ಟಾಟಾ ಸಭಾಂಗಣದಲ್ಲಿ ಫೆಬ್ರುವರಿ 3ರಂದು (ಶನಿವಾರ) ಇಂಡೊ- ಜಪಾನ್ ಹಬ್ಬ ಆಯೋಜಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಜಪಾನ್ ಭಾಷಾ ವಿಭಾಗದಿಂದ 2005ರಲ್ಲಿ ಆರಂಭಗೊಂಡ ಈ ಹಬ್ಬ ಭಾರತ ಮತ್ತು ಜಪಾನ್ ದೇಶಗಳ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಬೆಂಗಳೂರಿನ ನಾಗರಿಕರಿಗೆ ಜಪಾನಿ ಭಾಷೆ, ಸಂಸ್ಕೃತಿ, ಆಚರಣೆ, ತಿನಿಸುಗಳನ್ನು ಪರಿಚಯಿಸುವ ಪ್ರಯತ್ನಕ್ಕೆ ಈ ಹಬ್ಬ ಸಾಕ್ಷಿಯಾಗಲಿದೆ.

‘ಜಪಾನ್ ಹಬ್ಬ ಟ್ರಸ್ಟ್’ ಇಡೀ ಉತ್ಸವವನ್ನು ಆಯೋಜಿಸುತ್ತಿದ್ದು, ಅಂದಾಜು ನಾಲ್ಕು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಉತ್ಸವದಲ್ಲಿ ಸಂಭ್ರಮಿಸಲಿದ್ದಾರೆ. 2019ರ ಜಪಾನ್ ಹಬ್ಬವು ಎರಡು ದೇಶದ ನಡುವಿನ ಒಪ್ಪಂದಗಳು ಹಾಗೂ ಸಂಬಂಧಗಳ ಪ್ರತೀಕವಾಗಿದ್ದು, ಜಪಾನ್ ವಿದೇಶಾಂಗ ಸಚಿವಾಲಯ ಈ ಹಬ್ಬವನ್ನು ಪ್ರಮಾಣೀಕರಿಸಿದೆ.

ಈ ಬಾರಿಯ ಕಾರ್ಯಕ್ರಮದಲ್ಲಿ ಜಪಾನ್‍ನ ಖ್ಯಾತ ಸಾಂಸ್ಕೃತಿಕ ನೃತ್ಯ ಕಲಾವಿದ ರನ್ನಕೂ ಫುಜಿಮ ಅವರ ಕಲಾ ಪ್ರದರ್ಶನವೂ ಇರುತ್ತದೆ.

ಜಪಾನಿ ಸಂಸ್ಕೃತಿ, ಆಚಾರ, ವಿಚಾರ, ತಿಂಡಿ, ತಿನಿಸುಗಳೇ ಅಲ್ಲದೆ, ಜಪಾನಿ ಲಿಪಿ ಬರವಣಿಗೆ, ಇಕೆಬಾನಾ, ಜಪಾನಿ ಸಾಂಪ್ರದಾಯಿಕ ಉಡುಗೆ ತೊಡುವ ಕಾರ್ಯಕ್ರಮಗಳು ಈ ಬಾರಿಯ ಉತ್ಸವದಲ್ಲಿ ಜರುಗಲಿವೆ. ಜತೆಗೆ ಜಪಾನಿ ದೇಶಭಕ್ತಿ ಗೀತೆಗಳ ಗಾಯನ, ಬಾಲಿವುಡ್ ಸಿನಿಮಾ ಗೀತೆಗಳಿಗೆ ನೃತ್ಯ, ಬಾಲಿವುಡ್ ಚಿತ್ರಗೀತೆಗಳ ಹಾಗೂ ಕನ್ನಡ ಹಾಡುಗಳ ಗಾಯನವೂ ಇರುವುದು ವಿಶೇಷ.ಎರಡೂ ದೇಶಗಳ ಸಂಸ್ಕೃತಿಯ ವಿನಿಮಯಕ್ಕೆ ವೇದಿಕೆಯಂತಿರುವ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.