ವೃತ್ತಿಗಾಗಿ ಜಾಗೃತರಾಗಿ

– ಉಪಾಸನಾ ಕೊನಿಡೇಲ

‘ಮಹಿಳೆಯರ ಪಾಲಿನ ಅತಿ ದೊಡ್ಡ ವಿಮೆ ಎಂದರೆ ಅವರ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟುಕೊಳ್ಳುವುದು. ಆಗ ನೀವು ಆರ್ಥಿಕವಾಗಿ ಸ್ವಾವಲಂಬಿಯಾದ ಬಳಿಕವಷ್ಟೇ ಮದುವೆಯಾಗಬಹುದು ಮತ್ತು ನೀವು ಬಯಸಿದಾಗ ಮಗು ಪಡೆಯಬಹುದು’– ತೆಲುಗು ನಟ ರಾಮ್ಚರಣ್ ತೇಜ ಅವರ ಪತ್ನಿ, ಉದ್ಯಮಿ ಉಪಾಸನಾ ಕೊನಿಡೇಲ ಹೈದರಾಬಾದ್ನ ಐಐಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇತ್ತೀಚೆಗೆ ಮಾಡಿದ ಭಾಷಣದಲ್ಲಿ ವ್ಯಕ್ತಪಡಿಸಿದ ಈ ಅಭಿಪ್ರಾಯ ಇದೀಗ ಬಹುಮುಖ್ಯವಾದ ಚರ್ಚೆಯೊಂದನ್ನು ಹುಟ್ಟುಹಾಕಿದೆ.

ಮಹಿಳಾ ಸಬಲೀಕರಣದ ದಿಸೆಯಲ್ಲಿ ಇಂತಹದ್ದೊಂದು ಕ್ರಮ ಅನಿವಾರ್ಯ ಎಂದು ಒಂದು ವರ್ಗ ಹೇಳುತ್ತಿದ್ದರೆ, ಜೈವಿಕ ಕ್ರಿಯೆಯು ನಿಮ್ಮ ವೃತ್ತಿಬದುಕನ್ನು ಅವಲಂಬಿಸಿರುವುದಿಲ್ಲ, ಹಾಗಾಗಿ, ಮದುವೆ, ಮಕ್ಕಳು ಎಲ್ಲ ಆಗಬೇಕಾದ ವಯಸ್ಸಿಗೆ ಆದರೇ ಚೆಂದ ಎಂದು ಇನ್ನೊಂದು ವರ್ಗ ಅಸಮಾಧಾನ ವ್ಯಕ್ತಪಡಿಸಿದೆ. ಆರ್ಥಿಕವಾಗಿ ಸಬಲರಾಗಿರುವ ಉಪಾಸನಾ ಅಂತಹವರು ಹೇಳುವುದು ಸುಲಭ, ಆದರೆ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟುಕೊಳ್ಳುವುದು ಆರ್ಥಿಕ ದೃಷ್ಟಿಯಿಂದ ಎಲ್ಲ ಹೆಣ್ಣುಮಕ್ಕಳಿಗೂ ಸಾಧ್ಯವಾಗದ ಮಾತು ಎನ್ನುವ ಅಭಿಪ್ರಾಯವೂ ಕೇಳಿಬಂದಿದೆ.

ಇದೇವೇಳೆ, ‘ಯಾರು ಬೇಗ ಮದುವೆಯಾಗಲು ಬಯಸಿದ್ದೀರಿ?’ ಎಂಬ ಉಪಾಸನಾ ಪ್ರಶ್ನೆಗೆ, ನೆರೆದಿದ್ದ ವಿದ್ಯಾರ್ಥಿಗಳಲ್ಲಿ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳೇ ಹೆಚ್ಚು ಮಂದಿ ಕೈಎತ್ತಿದ್ದು ಕುತೂಹಲಕಾರಿಯಾಗಿದೆ. ‘ಮಹಿಳೆಯರು ಹೆಚ್ಚು ವೃತ್ತಿಕೇಂದ್ರಿತ ಆಗಿರುವುದು ಇದರಿಂದ ತಿಳಿಯುತ್ತದೆ. ಇದು ಪ್ರಗತಿಪರ ನವಭಾರತ’ ಎಂದು ಉಪಾಸನಾ ಹೇಳಿದ್ದಾರೆ.

23 ವರ್ಷಕ್ಕೆ ಮದುವೆಯಾಗಿದ್ದ ಉಪಾಸನಾ ಅವರಿಗೆ 34 ವರ್ಷದವರಿದ್ದಾಗ ಹೆಣ್ಣುಮಗು ಜನಿಸಿದ್ದು, ಈಗ ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಮದುವೆಯಾಗಿ ಬಹಳಷ್ಟು ವರ್ಷಗಳಾದರೂ ಮಕ್ಕಳಾಗದೇ ಇದ್ದ ಬಗ್ಗೆ ಕೆಲವರು ತಕರಾರು ಎತ್ತಿದ್ದಾಗ, ಮಗು ಪಡೆಯುವುದು ಬಿಡುವುದು ಅವರವರ ವೈಯಕ್ತಿಕ ವಿಷಯ ಎಂದು ಉಪಾಸನಾ ದಿಟ್ಟವಾಗಿ ತಿರುಗೇಟು ನೀಡಿದ್ದರು.

ಯಾಕಾಗಿ? ಯಾರಿಗಾಗಿ?

– ಡಾ. ಶಾಂತಲ ಕುಮಾರಿ ಆರ್.

ಒಂದು ಹೆಣ್ಣುಮಗು ತನ್ನ ಜೀವಿತಾವಧಿಯಲ್ಲಿ ಹೊಂದಿರುವ ಎಲ್ಲ ಅಂಡಾಣುಗಳೊಂದಿಗೇ ಜನಿಸಿರುತ್ತದೆ. ಅಂದರೆ, ಸುಮಾರು 10 ಲಕ್ಷದಿಂದ 20 ಲಕ್ಷದಷ್ಟು ಅಂಡಾಣುಗಳು ಆ ಮಗುವಿನಲ್ಲಿ ಇರುತ್ತವೆ. ಆದರೆ, ಮೊದಲ ಮುಟ್ಟಿನ ವೇಳೆಗೆ ಆಕೆಯ ಎರಡೂ ಅಂಡಾಶಯಗಳಲ್ಲಿ 40,000ದಷ್ಟು ಅಂಡಾಣುಗಳು ಮಾತ್ರ ಉಳಿದಿರುತ್ತವೆ. ವಯಸ್ಸಾಗುತ್ತಾ ಬಂದಂತೆ ಇವುಗಳ ಸಂಖ್ಯೆ ಸತತವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆಕೆಗೆ 35-37 ವರ್ಷಗಳಾದ ನಂತರ ಇಳಿಕೆಯ ಪ್ರಮಾಣ ತೀವ್ರಗೊಳ್ಳುತ್ತದೆ. ಋತುಬಂಧ ಅಥವಾ ಮೆನೊಪಾಸ್ ಹಂತವನ್ನು (ಸರಾಸರಿ 45- 47 ವರ್ಷ) ತಲುಪುವ ಹೊತ್ತಿಗೆ 1,000 ಅಂಡಾಣುಗಳಷ್ಟೇ ಅವಳಲ್ಲಿ ಉಳಿದುಕೊಂಡಿರುತ್ತವೆ!

ಹೀಗೆ ಅಂಡಾಣುಗಳು ಸಹಜವಾಗಿಯೇ ನಶಿಸಿ ಹೋಗುವುದರಿಂದ, ಮುಂದೊಂದು ದಿನ ಬೇಕಾದಾಗ ಉಪಯೋಗಿಸಿಕೊಳ್ಳುವ ಸಲುವಾಗಿ ಅವುಗಳನ್ನು ಸಂರಕ್ಷಿಸಿ ಇಡಲು ಅವಕಾಶ ಇರುತ್ತದೆ.

ಹಾಗಿದ್ದರೆ ಅಂಡಾಣುಗಳ ಸಂರಕ್ಷಣೆ ಹೇಗೆ? ಕ್ರಯೋ ಪ್ರಿಸರ್ವೇಶನ್ ಎನ್ನುವುದು ಜೈವಿಕ ವಸ್ತುಗಳನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಸಂರಕ್ಷಿಸುವ ಒಂದು ಪ್ರಕ್ರಿಯೆ. ಈ ತಂತ್ರಜ್ಞಾನದಿಂದ ಜೀವಕೋಶಗಳು ಕೊಳೆಯುವುದನ್ನು ತಡೆಗಟ್ಟಬಹುದು ಮತ್ತು ಅಂಗಾಂಶಗಳು ಜೈವಿಕ ಪ್ರಕ್ರಿಯೆಗೆ ಒಳಗಾಗದಂತೆ ಮಾಡಬಹುದು. ಅಂಡಾಣುಗಳನ್ನೂ ಇದೇ ಮಾದರಿಯ ಶೀತಲೀಕರಣ ವ್ಯವಸ್ಥೆಯ ಮೂಲಕ ಸಂರಕ್ಷಿಸಿ, ಅಗತ್ಯವಿದ್ದಾಗ ಉಪಯೋಗಿಸಬಹುದು!

ಅಂಡಾಣುಗಳ ಸಂರಕ್ಷಣೆಗೆ ಪಾಶ್ಚಾತ್ಯ ದೇಶಗಳಲ್ಲಿ ಇರುವಷ್ಟು ಬೇಡಿಕೆ ಸದ್ಯಕ್ಕೆ ಭಾರತದಲ್ಲಿ ಇಲ್ಲ. ಆದರೂ ಭಾರತೀಯ ಫಲವತ್ತತೆ ಉದ್ಯಮವು ₹ 25,000 ಕೋಟಿ ಮೌಲ್ಯದ್ದಾಗಿದೆ ಮತ್ತು ವಾರ್ಷಿಕವಾಗಿ ಇದು ಶೇ 15–20ರಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದೆ. ಅಮೆರಿಕ ಮತ್ತು ಯುರೋಪಿನಲ್ಲಿ ಅಂಡಾಣುಗಳ ಸಂರಕ್ಷಣೆಯ ಸೌಲಭ್ಯವನ್ನು ಹೆಚ್ಚಾಗಿ ಕಾರ್ಪೊರೇಟ್ ಆರೋಗ್ಯ ರಕ್ಷಣಾ ಹೊಣೆಗಾರಿಕೆಯ ಭಾಗವಾಗಿ ಒದಗಿಸಲಾಗುತ್ತದೆ. ಉದಾಹರಣೆಗೆ, ಫೇಸ್ಬುಕ್ ಮತ್ತು ಆ್ಯಪಲ್ನಂತಹ ತಂತ್ರಜ್ಞಾನ ದೈತ್ಯ ಸಂಸ್ಥೆಗಳು ಇಂತಹದ್ದೊಂದು ಉಪಕ್ರಮಕ್ಕೆ ಮುಂದಾಗಿವೆ. ಭಾರತದಲ್ಲಿ ಖಾಸಗಿ ಫಲವತ್ತತೆ ಚಿಕಿತ್ಸಾಲಯಗಳು ಒಂದು ಜೀವನಶೈಲಿಯ ಆಯ್ಕೆ ಎಂಬಂತೆ ಇದನ್ನು ಬೆಂಬಲಿಸುತ್ತಿವೆ.

ಸದ್ಯ ಅಂಡಾಣುಗಳನ್ನು ಸಂರಕ್ಷಿಸಿಕೊಳ್ಳುತ್ತಿರುವ ಮಹಿಳೆಯರಲ್ಲಿ ಸುಮಾರು ಶೇ 40ರಷ್ಟು ಮಂದಿ ಅವಿವಾಹಿತ ವೃತ್ತಿಪರರು ಹಾಗೂ ಮಗುವನ್ನು ಹೆರುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ವಿವಾಹಿತ ಮಹಿಳೆಯರಾಗಿದ್ದಾರೆ ಎಂಬ ವರದಿಗಳಿವೆ. ಪ್ರಸ್ತುತ ಇದಕ್ಕೆ ತಗಲುವ ವೆಚ್ಚವು ಆರ್ಥಿಕವಾಗಿ ಸಬಲರಾದ ನಗರದ ಮಹಿಳೆಯರಿಗಷ್ಟೇ ಕೈಗೆಟಕುವಂತಿದೆ. ಹೀಗಾಗಿ, ಗ್ರಾಮೀಣ ಜನಸಂಖ್ಯೆಗೆ ಈ ಸೇವೆ ಇನ್ನೂ ದೂರದ ಮಾತೇ ಆಗಿದೆ.

ಅಂಡಾಣು ಸಂರಕ್ಷಣೆಯು ಪ್ರತಿಷ್ಠೆ, ಫ್ಯಾಶನ್ ಅಥವಾ ಟ್ರೆಂಡ್ ಆಗಿದ್ದು, ಈ ಸಂಬಂಧದ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಟೀಕೆಗಳೂ ಇವೆ. ಭಾರತದಲ್ಲಿ ಒಂಟಿ ಮಹಿಳೆಯರಿಗೆ ಅಂಡಾಣುಗಳನ್ನು ಸಂರಕ್ಷಿಸಿಕೊಳ್ಳಲು ಅನುಮತಿಯೇನೋ ಇದೆ. ಆದರೆ ದಾನಿಯ ಅಂಡಾಣು ಮತ್ತು ಸರೊಗೆಸಿ (ಬಾಡಿಗೆ ಗರ್ಭಧಾರಣೆ) ಸುತ್ತಲಿನ ನಿಯಮಗಳು ಇನ್ನೂ ಕಠಿಣವಾಗಿಯೇ ಉಳಿದಿವೆ.

ಇದೆಲ್ಲದರ ನಡುವೆಯೂ ಶೈಕ್ಷಣಿಕ ಅಭಿಯಾನಗಳು ಮತ್ತು ಮಾಧ್ಯಮಗಳಲ್ಲಿ ಸಿಗುತ್ತಿರುವ ಪ್ರಚಾರವು ಅಂಡಾಣು ಸಂರಕ್ಷಣಾ ತಂತ್ರಜ್ಞಾನವನ್ನು ಮಾನ್ಯಗೊಳಿಸುತ್ತಿವೆ ಮತ್ತು ಈ ಸಂಬಂಧ ಜನಜಾಗೃತಿಯೂ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಅಂಡಾಣು ಸಂರಕ್ಷಣಾ ಸೌಲಭ್ಯವನ್ನು ಆರೋಗ್ಯ ವಿಮಾ ಪ್ಯಾಕೇಜ್ಗಳಲ್ಲಿ ಸೇರ್ಪಡಿಸುವ ಸಂಭವವೂ ಇಲ್ಲದಿಲ್ಲ.

ಲೇಖಕಿ: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ

ಹೀಗಿರುತ್ತದೆ ಸಂರಕ್ಷಣೆ ವಿಧಾನ

ಹಾರ್ಮೋನ್ ಚುಚ್ಚುಮದ್ದು ಕೊಡುವ ಮೂಲಕ ಹೆಚ್ಚು ಅಂಡಾಣುಗಳನ್ನು ಉತ್ಪಾದಿಸಲು ಅಂಡಾಶಯಗಳನ್ನು ಪ್ರಚೋದಿಸಲಾಗುತ್ತದೆ.

ಅಂಡಾಣುಗಳನ್ನು ಸಹಜವಾಗಿ ಒಡೆಯಲು ಬಿಡದೆ, ಸೂಕ್ತ ಸಮಯಕ್ಕೆ ಅವುಗಳನ್ನು ವೈದ್ಯರೇ ಶರೀರದಿಂದ ಹೊರತೆಗೆಯುತ್ತಾರೆ. ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ, ಸ್ಕ್ಯಾನ್ ಮಾಡುತ್ತಾ ಅಂಡಾಣುಗಳನ್ನು ಹೊರತೆಗೆಯಲಾಗುತ್ತದೆ. ಒಂದು ಬಾರಿ 10– 18 ಅಂಡಾಣುಗಳನ್ನು ಸಂಗ್ರಹಿಸಬಹುದು.

ಕ್ರಯೋ ಪ್ರಿಸರ್ವೇಶನ್ನ ಭಾಗವಾದ ವಿಟ್ರಿಫಿಕೇಶನ್ ಎಂಬ ಆಧುನಿಕ ಶೀತಲೀಕರಣ ತಂತ್ರಜ್ಞಾನದಿಂದ ಈ ಅಂಡಾಣುಗಳನ್ನು ಸಂರಕ್ಷಣೆ ಮಾಡಬಹುದು. ಈ ಮೊದಲು ಬೇರೆ ವಿಧಾನಗಳಿಂದ ಶೀತಲೀಕರಿಸಿ ಸಂರಕ್ಷಿಸುವ ಪ್ರಯತ್ನ ನಡೆದಿತ್ತು. ಆಗ ಅಂಡಾಣುಗಳ ಒಳಗೆ ಮಂಜುಗಡ್ಡೆಯ ಹರಳುಗಳು ಉತ್ಪತ್ತಿಯಾಗಿ, ಅಂಡಾಣುಗಳು ನಾಶವಾಗುತ್ತಿದ್ದವು. ಆದರೆ ವಿಟ್ರಿಫಿಕೇಶನ್ ತಂತ್ರಜ್ಞಾನದಿಂದ ಅಂಡಕೋಶದ ಸುತ್ತಲೂ ಗಾಜಿನ ಗೋಳದಂತೆ ಮಂಜುಗಡ್ಡೆ ನಿರ್ಮಾಣವಾಗುವುದರಿಂದ ಅಂಡಾಣುಗಳಿಗೆ ಹಾನಿಯಾಗುವುದಿಲ್ಲ.

ಸಂಗ್ರಹಿಸಿದ ಅಂಡಾಣುಗಳನ್ನು ಅಗತ್ಯ ಇರುವವರೆಗೆ ದ್ರವ ಸಾರಜನಕದಲ್ಲಿ (ಲಿಕ್ವಿಡ್ ನೈಟ್ರೋಜನ್) -196° ಸೆಂ.ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

ಮಹಿಳೆ ಗರ್ಭ ಧರಿಸಲು ನಿರ್ಧರಿಸಿದಾಗ, ಅಂಡಾಣುಗಳನ್ನು ಹೊರತೆಗೆದು, ಹಿಮವನ್ನು ಕರಗಿಸಿ, ಪ್ರಣಾಳ ಶಿಶುಗಳನ್ನು ರೂಪಿಸುವ ವಿಧಾನದಲ್ಲಿ ಅಂಡಾಣು ಮತ್ತು ವೀರ್ಯಾಣುಗಳನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಬೆಸೆಯುವ ಮೂಲಕ ಫಲವತ್ತಾಗಿಸಲಾಗುತ್ತದೆ.

ಹೀಗೆ ಕೃತಕವಾಗಿ ಫಲವತ್ತಾಗಿಸಿದ ಭ್ರೂಣವನ್ನು ಸೂಕ್ತ ಸಮಯಕ್ಕೆ ತಾಯಿಯ ಗರ್ಭದಲ್ಲಿ ಇರಿಸಲಾಗುತ್ತದೆ.

ಎಷ್ಟು ಖರ್ಚಾಗುತ್ತದೆ?

ಅಂಡಕೋಶಗಳನ್ನು ಪ್ರಚೋದಿಸಿ, ಅಂಡಾಣುಗಳನ್ನು ಪಡೆಯಲು ಸರಾಸರಿ ₹ 1.2 ಲಕ್ಷದಿಂದ ₹ 2.5 ಲಕ್ಷ ಬೇಕಾಗಬಹುದು. ಜೊತೆಗೆ ವಾರ್ಷಿಕ ಶೇಖರಣಾ ಶುಲ್ಕ ₹ 25,000–₹ 40,000 ಆಗುತ್ತದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ವೆಚ್ಚ ಕಡಿಮೆ.

ಇದರ ಯಶಸ್ಸು ಮಹಿಳೆಯ ವಯಸ್ಸನ್ನು ಅವಲಂಬಿಸಿರುತ್ತದೆ. 35 ವರ್ಷಕ್ಕಿಂತ ಮೊದಲು ಅಂಡಾಣುಗಳನ್ನು ಸಂರಕ್ಷಿಸುವ ಮಹಿಳೆಯರಲ್ಲಿ ನಂತರ ಯಶಸ್ವಿ ಗರ್ಭಧಾರಣೆಯ ಸಾಧ್ಯತೆ ಶೇ 50–60ರಷ್ಟಿದ್ದರೆ, ಆ ನಂತರದ ವರ್ಷಗಳಲ್ಲಿ ಈ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಯಾರಿಗೆಲ್ಲ ಉಪಯೋಗ?

1. ವೈದ್ಯಕೀಯ ಕಾರಣ

ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಅಥವಾ ರೇಡಿಯೊಥೆರಪಿಯಂತಹ ವಿಕಿರಣ ಚಿಕಿತ್ಸೆ ನೀಡಬೇಕಾಗುತ್ತದೆ. ಇದರಿಂದ ಅಂಡಾಶಯದಲ್ಲಿರುವ ಅಂಡಾಣುಗಳು ಶಾಶ್ವತವಾಗಿ ನಶಿಸಿ ಹೋಗುತ್ತವೆ. ಇಂತಹ ಮಹಿಳೆಯರು ಈ ತಂತ್ರಜ್ಞಾನದಿಂದ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು.

ಕೆಲವು ಮಹಿಳೆಯರಲ್ಲಿ ಅಂಡಾಶಯವು ಅಕಾಲಿಕವಾಗಿ, ಅಂದರೆ 20- 40ರ ವಯಸ್ಸಿನಲ್ಲಿಯೇ ತನ್ನ ಕೆಲಸವನ್ನು ನಿಲ್ಲಿಸಿಬಿಡುತ್ತದೆ. ಆನುವಂಶೀಯತೆಯೂ ಒಳಗೊಂಡಂತೆ ಇದಕ್ಕೆ ಅನೇಕ ಕಾರಣಗಳಿರುತ್ತವೆ. ಇಂತಹವರು ಮುಂಜಾಗ್ರತೆಯಾಗಿ ಅಂಡಾಣುಗಳನ್ನು ಶೇಖರಿಸಿ ಇಟ್ಟುಕೊಳ್ಳಬಹುದು.

2. ಸಾಮಾಜಿಕ ಕಾರಣ

ವೃತ್ತಿಪರ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸಲು ಅನೇಕ ಮಹಿಳೆಯರು ಮದುವೆ ಮತ್ತು ತಾಯ್ತನ ಹೊಂದುವುದನ್ನು ವಿಳಂಬ ಮಾಡುತ್ತಿದ್ದಾರೆ.

ಭಾರತದ ನಗರಗಳಲ್ಲಿ ಪ್ರಸ್ತುತ ಮದುವೆಯ ಸರಾಸರಿ ವಯಸ್ಸು (30+) ಹೆಚ್ಚುತ್ತಲೇ ಇದೆ. ಇದು ಫಲವತ್ತತೆಯ ಬಗೆಗಿನ ಕಾಳಜಿಯನ್ನು ಹೆಚ್ಚಿಸುತ್ತದೆ.

ಸಂತಾನೋತ್ಪತ್ತಿಯ ಹಕ್ಕುಗಳು ಮತ್ತು ಆಯ್ಕೆಗಳ ಬಗ್ಗೆ ಅರಿವು ಹೆಚ್ಚುತ್ತಿರುವ ಸಮಾಜದಲ್ಲಿ ಮಹಿಳೆಯರು ತಮ್ಮ ಸ್ವಾಯತ್ತತೆಗೆ ಹೆಚ್ಚು ಲಕ್ಷ್ಯ ನೀಡುತ್ತಿದ್ದಾರೆ.

ಕೌಟುಂಬಿಕ ರಚನೆಗಳು ಬದಲಾಗುತ್ತಿವೆ; ಒಂಟಿ ಮಾತೃತ್ವವನ್ನು ಸಮಾಜ ಸ್ವೀಕರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.