ಅತ್ಯಾಧುನಿಕ ಯುದ್ಧನೌಕೆಗಳು, ಯುದ್ಧವಿಮಾನ ಹೊತ್ತು ಸಾಗಬಲ್ಲ ಐಎನ್ಎಸ್ ವಿಕ್ರಮಾದಿತ್ಯ, ವಿಕ್ರಾಂತ್ನಂತಹ ಭಾರಿ ಗಾತ್ರದ ಹಡಗುಗಳನ್ನು ಒಳಗೊಂಡು ಬಲಿಷ್ಠವಾಗಿರುವ ಭಾರತೀಯ ನೌಕಾದಳಕ್ಕೆ ಈಗ ಪುಟ್ಟ ಗಾತ್ರದ ‘ಐಎನ್ಎಸ್ವಿ ಕೌಂಡಿನ್ಯ’ ಸೇರ್ಪಡೆಗೊಂಡಿದೆ.

ಭಾರಿ ಗಾತ್ರದ ಯುದ್ಧನೌಕೆಗಳ ನಡುವೆ ಈ ಪುಟ್ಟ ಗಾತ್ರದ ನೌಕೆಗೆ ಏನು ಕೆಲಸ? ಅದರ ಮಹತ್ವ ಏನು? ಎಂಬ ಪ್ರಶ್ನೆ ಮೂಡುವುದು ಸಹಜ.

‘ಜಗತ್ತಿಗೆ ಸಮುದ್ರಯಾನದ ಅರಿವೇ ಇಲ್ಲದ ಕಾಲಘಟ್ಟದಲ್ಲಿ ಹಿಂದೂ ಮಹಾಸಾಗರದ ಉದ್ದಕ್ಕೂ ಪ್ರಾಚೀನ ಭಾರತದ ಮಹರ್ಷಿ ಕೌಂಡಿನ್ಯ ನೌಕಾಯಾನ ಕೈಗೊಂಡಿದ್ದರು. ಭಾರತ ಪ್ರಾಚೀನ ಕಾಲದಲ್ಲೇ ನೌಕಾಯಾನದಲ್ಲಿ ಮುಂಚೂಣಿಯಲ್ಲಿತ್ತು ಎಂಬುದನ್ನು ಜಗತ್ತಿಗೆ ಪುನಃ ಮನದಟ್ಟು ಮಾಡಿಕೊಡಲು ಕ್ರಿಸ್ತ ಪೂರ್ವ 5ನೇ ಶತಮಾನದ ಮಾದರಿಯಲ್ಲೇ ಸಿದ್ಧಪಡಿಸಿದ ನೌಕೆ ಇದು’ ಎಂಬ ಉತ್ತರವನ್ನು ನೌಕಾದಳದ ಅಧಿಕಾರಿಗಳು ನೀಡುತ್ತಾರೆ.

ಗೋವಾದ ಮಾಂಡೋವಿ ನದಿತೀರದಲ್ಲಿ ಹೋದಿ ಇನ್ನೊವೇಶನ್ಸ್ ಪ್ರೇವೇಟ್ ಲಿಮಿಟೆಡ್ ಕಂಪನಿಯ ಶಿಪ್ಯಾರ್ಡ್ನಲ್ಲಿ ಸಿದ್ಧಗೊಂಡು, ಕಾರವಾರದ ಕದಂಬ ನೌಕಾನೆಲೆಗೆ ಬಂದು ನಿಂತಿರುವ ಭಾರತೀಯ ನೌಕಾಪಡೆಯ ನೌಕಾಯಾನ ಹಡಗು (ಐಎನ್ಎಸ್ವಿ) ‘ಕೌಂಡಿನ್ಯ’ದ ಕಥೆ ರೋಚಕವಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಬಗೆ ಬಗೆಯ ಯಂತ್ರೋಪಕರಣಗಳಿದ್ದರೂ ಅವುಗಳನ್ನು ಬಳಸದೆ ಕೇರಳ ಕಾಡಿನ ಮರದ ಹಲಗೆಗಳು, ತೆಂಗಿನ ನಾರಿನ ಹಗ್ಗಗಳನ್ನು ಬಳಸಿ ತಯಾರಾದ ನೌಕೆ ನೋಡಲು ಅತ್ಯಾಕರ್ಷಕವಾಗಿದೆ. ಅದಕ್ಕಿಂತಲೂ ಕದಂಬರ ರಾಜಲಾಂಛನ ‘ಗಂಡಭೇರುಂಡ ಪಕ್ಷಿ’ಯ ಚಿತ್ರವನ್ನೊಳಗೊಂಡ ನೌಕೆಯ ಹಾಯಿ, ನೌಕೆಯ ತುತ್ತತುದಿಯಲ್ಲಿರುವ ಸಿಂಹ ಲಾಂಛನ ಮತ್ತಷ್ಟು ಗಮನಸೆಳೆಯುತ್ತವೆ.

‘ಕೌಂಡಿನ್ಯ ನೌಕೆಯು ತಳಭಾಗದಿಂದ ಮೇಲ್ಭಾಗದವರೆಗೆ ಚೌಕಾಕಾರದಲ್ಲಿ ಸಿದ್ಧಗೊಂಡಿದೆ. ಆಳಸಮುದ್ರದಲ್ಲಿ ಸಾಗುವಾಗ ಅಲೆಗಳ ಅಬ್ಬರಕ್ಕೆ ಅದು ಮುಳುಗದಂತೆ ಈ ರೀತಿ ನಿರ್ಮಿಸಲಾಗಿದೆ. ಇಡೀ ನೌಕೆಯಲ್ಲಿ ಒಂದೇ ಒಂದು ಯಂತ್ರೋಪಕರಣಗಳಿಲ್ಲ’ ಎಂಬುದಾಗಿ ನೌಕೆ ನಿರ್ಮಿಸಿದ ಕೇರಳದ ನೌಕಾಶಿಲ್ಪಿ ಬಾಬು ಶಂಕರನ್ ಹೇಳುತ್ತಾರೆ.

‘ಸಂಪೂರ್ಣವಾಗಿ ಮರದ ಹಲಗೆ, ದಿಮ್ಮಿಗಳನ್ನು ಬಳಸಿಯೇ ನಿರ್ಮಿಸಲಾಗಿದೆ. ಒಂದೊಂದು ಹಲಗೆಗಳನ್ನು ಜೋಡಿಸಲು ತೆಂಗಿನ ನಾರಿನ ಹಗ್ಗಗಳನ್ನು ಬಳಸಿ ಹೊಲಿಗೆ ಹಾಕಲಾಗಿದೆ. 6 ಸಾವಿರ ವರ್ಷಗಳ ಹಿಂದೆ ನೌಕೆಯೊಂದನ್ನು ಹೇಗೆ ಸಿದ್ಧಪಡಿಸುತ್ತಿದ್ದರೋ ಅದೇ ಮಾದರಿಯಲ್ಲೇ ನೌಕೆ ಸಿದ್ಧಗೊಂಡಿದೆ. ಆಧುನಿಕ ತಂತ್ರಜ್ಞಾನ ನೌಕೆಗೆ ಸ್ಪರ್ಶಿಸಿಲ್ಲ’ ಎಂದು ಹೆಮ್ಮೆಯಿಂದಲೇ ಹೇಳಿಕೊಂಡರು.

‘2023ರಲ್ಲಿ ನೌಕೆ ಸಿದ್ಧಪಡಿಸುವ ಕೆಲಸ ಆರಂಭಿಸಲಾಯಿತು. 20ಕ್ಕೂ ಹೆಚ್ಚು ಕರಕುಶಲ ಕರ್ಮಿಗಳ ತಂಡ ಕಟ್ಟಿಕೊಂಡು ಕೆಲಸ ನಡೆಯಿತು. ಯೋಜನೆ ಆರಂಭಿಸುವ ಮೊದಲು ಹೀಗೆಯೇ ಸಿದ್ಧಪಡಿಸಬೇಕು ಎಂಬ ನಿಖರ ಯೋಜನೆ, ನೀಲನಕ್ಷೆ ಯಾವುದೂ ಇರಲಿಲ್ಲ. ಕಾಲಕಾಲಕ್ಕೆ ನೌಕಾದಳದ ಅಧಿಕಾರಿಗಳು, ಮದ್ರಾಸ್ ಐಐಟಿಯ ತಂತ್ರಜ್ಞರು ಮಾರ್ಗದರ್ಶನ ಮಾಡುತ್ತಿದ್ದರು. ಅದಕ್ಕೆ ತಕ್ಕಂತೆ ಕೆಲಸ ನಡೆಯಿತು’ ಎಂಬ ವಿವರಣೆಯನ್ನೂ ನೀಡಿದರು.

‘ಸಮುದ್ರ ಯಾನ ಮಾಡುವ ನೌಕೆ ಗಟ್ಟಿಮುಟ್ಟಾಗಿರಬೇಕು. ಅದಕ್ಕಾಗಿ ಬಲಿಷ್ಠ ಹಲಗೆಗಳೇ ಬೇಕಿತ್ತು. ಅಂತಹ ಹಲಗೆಗಳಿಗೆ ಕೇರಳದ ಕಣ್ಣೂರು, ವೈಯನಾಡ್ ಭಾಗದ ಕಾಡುಗಳಲ್ಲಿ ಸಾಕಷ್ಟು ಹುಡುಕಾಟ ನಡೆಸಲಾಯಿತು. ಕೊನೆಗೂ ಹಲಸು ಸೇರಿದಂತೆ ಬೇರೆ ಬೇರೆ ಜಾತಿಯ ಮರಗಳ ಹಲಗೆಗಳು ಲಭಿಸಿದವು. ಅವುಗಳೊಂದಿಗೆ ಮೀನೆಣ್ಣೆ, ಬೇವಿನ ಪುಡಿ, ಪ್ರಾಣಿಗಳ ಕೊಬ್ಬುಗಳನ್ನು ಸವರಿ ಹಲಗೆಗಳನ್ನು ಸುದೀರ್ಘ ಬಾಳಿಕೆಗೆ ಬರುವಂತೆ ಮಾಡಿದ್ದೇವೆ’ ಎಂದೂ ನೌಕೆ ತಯಾರಿಕೆಯ ಹಿಂದಿನ ಶ್ರಮದ ಕಥನ ವಿವರಿಸಿದರು.

ನೌಕೆ ತಯಾರಿಕೆಗೆ ಪುಸ್ತಕ ಕಾರಣವಾಯ್ತು

‘ಐಎನ್ಎಸ್ವಿ ಕೌಂಡಿನ್ಯ’ ತಯಾರಿಕೆಗೆ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆಗಾರರಲ್ಲಿ ಒಬ್ಬರಾದ ಸಂಜೀವ ಸನ್ಯಾಲ್ ಬರೆದ ‘ದಿ ಓಶನ್ ಆಫ್ ಚರ್ನ್’ ಪುಸ್ತಕ ಕಾರಣವಾಗಿದೆ. ಬರಹಗಾರರೂ ಆಗಿರುವ ಸಂಜೀವ್ ಪ್ರಾಚೀನ ಭಾರತದ ನೌಕಾಯಾನದ ಕುರಿತು ಪುಸ್ತಕ ಬರೆಯಲಾರಂಭಿಸಿದ್ದರು. ಇದಕ್ಕಾಗಿ ಅವರು ಸಂಶೋಧನೆ ಕೈಗೊಂಡ ವೇಳೆ ದೊರೆತ ಮಾಹಿತಿಗಳು ನೌಕೆ ರೂಪುಗೊಳ್ಳಲು ಕಾರಣವಾಯ್ತು ಎಂಬ ಅಂಶವನ್ನೂ ಸ್ವತಃ ಅವರೇ ನೌಕೆ ಲೋಕಾರ್ಪಣೆ ವೇಳೆ ವಿವರಿಸಿದ್ದಾರೆ.

‘ಆಗ್ನೇಯ ಏಷ್ಯಾ ಭಾಗದಲ್ಲಿ ನೌಕಾಯಾನ ಆರಂಭಿಸಿದ್ದ ‘ಕೌಂಡಿನ್ಯ’ ಮಹರ್ಷಿ ಕಾಂಬೋಡಿಯಾದಲ್ಲಿ ಸಿಲುಕಿಕೊಳ್ಳುತ್ತಾರೆ. ಅಲ್ಲಿನ ನಾಗಾ ಬುಡಕಟ್ಟು ಜನರು ಕೌಂಡಿನ್ಯ ಮತ್ತು ತಂಡದ ಮೇಲೆ ದಾಳಿ ನಡೆಸಲು ಮುಂದಾಗುತ್ತಾರೆ. ಎದೆಗುಂದದ ಕೌಂಡಿನ್ಯ ಬುಡಕಟ್ಟು ಸೈನ್ಯವನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿದ್ದ ಸಮಯದಲ್ಲೇ ಅಲ್ಲಿನ ‘ಫುನಾನ್’ ಸಾಮ್ರಾಜ್ಯದ ರಾಜಕುಮಾರಿ ಸೋಮಾ ಕಣ್ಣಿಗೆ ಬೀಳುತ್ತಾರೆ. ಕೌಂಡಿನ್ಯನ ಸಾಹಸ ಸೌಂದರ್ಯಕ್ಕೆ ಮನಸೋತು ಆಕೆ ವರಿಸಲು ಮುಂದಾಗುತ್ತಾಳೆ. ಫುನಾನ್ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸುವ ಮೂಲಕ ಕೌಂಡಿನ್ಯ ಸಾಮ್ರಾಜ್ಯದ ಅಧಿಪತಿಯಾಗುತ್ತಾನೆ. ಇದಕ್ಕೆಲ್ಲ ಅವರ ನೌಕಾಯಾನವೇ ಕಾರಣವಾಗಿದ್ದರಿಂದ ಆಗಿನ ಮಾದರಿಯ ನೌಕೆ ಸಿದ್ಧಪಡಿಸಲು ನೀಡಿದ ಸಲಹೆ ಕಾರ್ಯರೂಪಕ್ಕೆ ಬಂತು’ ಎಂದು ಸಂಜೀವ್ ಹೇಳುತ್ತಾರೆ.

‘ಕೌಂಡಿನ್ಯನ ಸಾಹಸಗಾಥೆ ವಿವರಿಸುವ ಚಿತ್ರಗಳು ಅಜಂತಾ ಗುಹೆಗಳಲ್ಲಿ ದಾಖಲಾಗಿವೆ. ಅವುಗಳನ್ನು ಗಮನಿಸಿಯೇ ನೌಕೆಯ ಚಿತ್ರಣಗಳು ಲಭ್ಯವಾದವು. ಅವುಗಳನ್ನು ಆಧರಿಸಿ ಯಥಾವತ್ತಾಗಿ ನೌಕೆ ರೂಪುಗೊಂಡಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.