ದಾವಣಗೆರೆ ಸಮೀಪದ ಆವರಗೆರೆ ಗ್ರಾಮದ ಬಸ್ ನಿಲ್ದಾಣದ ಸಮೀಪ ನಿಂತಿದ್ದೆ. ಅಲ್ಲಿನ ಚಿತ್ರಣವನ್ನು ಕಂಡು ಬೆರಗಾಗಿದ್ದೆ. ಏಕೆಂದರೆ, ಆ ಊರಿನ ರಸ್ತೆಗಳು ಚೆನ್ನಾಗಿದ್ದವು. ಅಕ್ಕಪಕ್ಕ ಸಾಲುಮರಗಳು ಬೆಳೆದು ನಿಂತು ತಂಗಾಳಿ ಸೂಸುತ್ತಿದ್ದವು. ಸ್ವಲ್ಪ ಮುಂದೆ ಹೆಜ್ಜೆ ಹಾಕಿದರೆ, ರಸ್ತೆಯ ಎರಡೂ ಬದಿಯಲ್ಲಿ ರೋಣುಗಲ್ಲುಗಳು, ಚಕ್ಕಡಿ ಬಂಡಿಗಳನ್ನು ಒಪ್ಪವಾಗಿ ಜೋಡಿಸಿ, ಅವುಗಳಿಗೆ ಬಣ್ಣ ಬಳಿದು ನಿಲ್ಲಿಸಲಾಗಿತ್ತು. ಸಮೀಪದಲ್ಲೇ ಪಿರಂಗಿಯೂ ನಿಂತಿತ್ತು! ಆ ಊರಿನಲ್ಲಿ ಯುದ್ಧ ನಡೆದ ಕುರುಹುಗಳೇನೂ ಇರಲಿಲ್ಲ. ಆದರೂ ಈ ಪಿರಂಗಿ ಬಂದಿದ್ದಾದರೂ ಹೇಗೆ ಎನ್ನುವ ಕುತೂಹಲದಿಂದಲೇ ಹತ್ತಿರ ಹೋಗಿ ನೋಡಿದರೆ, ಅವು ಫೈಬರ್ ಪೈಪ್ ಮತ್ತು ಚಕ್ಕಡಿ ಬಂಡಿಗಳು! ಸ್ಥಳೀಯ ಕುಶಲಿಗಳ ಕೈಚಳಕವದು. ಅಲ್ಲಿ ಮಕ್ಕಳು ಆಟವಾಡುತ್ತಿದ್ದರು.

ಹೀಗೆ ಅಲ್ಲಿನ ಸುಂದರ ಚಿತ್ರಣಗಳು ಮನ ಸೆಳೆದವು. ಕುತೂಹಲದಿಂದಲೇ ಅಲ್ಲಿಯೇ ಇದ್ದ ಟೀ ಅಂಗಡಿಗೆ ತೆರಳಿ ವೃದ್ಧರೊಬ್ಬರನ್ನು ಮಾತಿಗೆಳೆದಾಗ ‘ಕಾಯಕಯೋಗಿ ಬಸವ ಪರಿಸರ ಬಳಗ’ದ ಬಗ್ಗೆ ತಿಳಿಯಿತು.

ಕೋವಿಡ್ ಆರಂಭದ ದಿನಗಳಲ್ಲಿ ಗ್ರಾಮದ ಸಮಾನಮನಸ್ಕರು ಸೇರಿ ರಚಿಸಿಕೊಂಡಿರುವ ಸಂಘಟನೆಯೇ ‘ಕಾಯಕಯೋಗಿ ಬಸವ ಪರಿಸರ ಬಳಗ’. ಈ ಬಳಗವು ವಾರಕ್ಕೊಮ್ಮೆ ಗ್ರಾಮದಲ್ಲಿನ ಎರಡು ಉದ್ಯಾನಗಳು, ಮುಖ್ಯರಸ್ತೆಗಳು ಹಾಗೂ ಸರ್ಕಾರಿ ಶಾಲೆಯ ಸ್ವಚ್ಛತೆಗೆ ಶ್ರಮದಾನ ಮಾಡುತ್ತದೆ. ಉದ್ಯಾನಗಳು ಹಾಗೂ ಪ್ರಮುಖ ರಸ್ತೆಗಳ ಬದಿಯಲ್ಲಿ ಆರು ವರ್ಷಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿದೆ. ಪ್ರತೀ ಭಾನುವಾರ ಬೆಳಿಗ್ಗೆ ಏಳರಿಂದ ಎಂಟು ಗಂಟೆಯವರೆಗೆ ಬಳಗದ ಸದಸ್ಯರು ಸ್ವಚ್ಛತೆ ಕಾಪಾಡುವ ಜೊತೆಗೆ ಗ್ರಾಮದ ಅಂದ ಹೆಚ್ಚಿಸುವ ಕಾಯಕದಲ್ಲಿ ತೊಡಗುತ್ತಾರೆ.

ಬಳಗದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಸದಸ್ಯರಿದ್ದು, ವಿವಿಧ ವೃತ್ತಿಗಳಲ್ಲಿ ತೊಡಗಿದ್ದಾರೆ. ಕೆಲವು ಸದಸ್ಯರು ವೃತ್ತಿಯಲ್ಲಿ ಪೇಂಟರ್ಗಳಾಗಿದ್ದು, ಗ್ರಾಮದ ಹಲವೆಡೆ ನುಡಿಮುತ್ತು, ಜಾಗೃತಿ ಬರಹಗಳನ್ನು ಬರೆದಿದ್ದಾರೆ. ಅವುಗಳು ವಿದ್ಯಾರ್ಥಿಗಳ ಕಣ್ಮನ ಸೆಳೆಯುತ್ತವೆ. ‘ಕವಿರತ್ನ ಕಾಳಿದಾಸ ಉದ್ಯಾನ’, ‘ಮಹರ್ಷಿ ವಾಲ್ಮೀಕಿ ಉದ್ಯಾನ’ಗಳಲ್ಲಿನ ಗಿಡಗಳಿಗೆ ನೀರುಣಿಸಲು ಬಳಗವೇ ಪೈಪ್ಲೈನ್ ವ್ಯವಸ್ಥೆ ಮಾಡಿದೆ. ಬೇವು, ತೆಂಗು, ಮಾವು, ಪಪ್ಪಾಯ, ಪೇರಲ, ನೇರಳೆ, ಅಡಿಕೆ ಸೇರಿದಂತೆ ವಿವಿಧ ಬಗೆಯ ಗಿಡಗಳು ಇಲ್ಲಿ ನಳನಳಿಸುತ್ತಿವೆ.

ಭಾನುವಾರ ಬೆಳಿಗ್ಗೆ ಒಂದೆಡೆ ಸೇರುವ ಬಳಗದ ಸದಸ್ಯರು ಪೊರಕೆ ಹಿಡಿದು ಸ್ವಚ್ಛತಾ ಕೆಲಸ ಮಾಡುತ್ತಾರೆ. ಶಾಲಾ ಆವರಣ, ರಸ್ತೆ ಬದಿ ಹಾಗೂ ಉದ್ಯಾನಗಳಲ್ಲಿ ಸಸಿ ನೆಡುವುದು, ನೀರುಣಿಸುವುದು ಸೇರಿದಂತೆ ಇನ್ನಿತರ ಕೆಲಸಗಳಲ್ಲಿ ತೊಡಗುತ್ತಾರೆ.

ಬಸ್ ನಿಲ್ದಾಣದ ಬಳಿ ಅಳವಡಿಸಿರುವ ಬಂಡಿಗಾಲಿಗಳು ದಾರಿ ಹೋಕರನ್ನು ಆಕರ್ಷಿಸುತ್ತವೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳನ್ನು ಸುತ್ತಾಡಿ, ರೋಣುಗಲ್ಲುಗಳು ಹಾಗೂ ಬಂಡಿಗಾಲಿಗಳನ್ನು ಸಂಗ್ರಹಿಸಿ ತಂದ ಬಳಗದ ಸದಸ್ಯರು, ಅವುಗಳಿಗೆ ಬಣ್ಣ ಬಳಿದು ಸುಂದರಗೊಳಿಸಿದ್ದಾರೆ. ಗ್ರಾಮದ ಎರಡು ಪ್ರಮುಖ ರಸ್ತೆಗಳಲ್ಲಿ ಅವುಗಳನ್ನು ಕಲಾತ್ಮಕವಾಗಿ ಜೋಡಿಸಿಟ್ಟಿದ್ದಾರೆ. ಬಸ್ ನಿಲ್ದಾಣ ಹಾಗೂ ಪ್ರಮುಖ ರಸ್ತೆಗಳ ಬದಿಯಲ್ಲಿ ನೂರಕ್ಕೂ ಹೆಚ್ಚು ಸಿಮೆಂಟ್ ಬೆಂಚ್ಗಳನ್ನು (ಕಟ್ಟೆ) ಅಳವಡಿಸಿ ದ್ದಾರೆ. ವರ್ಷಕ್ಕೊಮ್ಮೆ ಅವುಗಳಿಗೆ ಸುಣ್ಣ ಬಣ್ಣ ಬಳಿಯುತ್ತಾರೆ.

‘ದುಶ್ಚಟಗಳಿಗೆ ದಾಸರಾಗುವ ಬದಲು ವಾರಕ್ಕೊಮ್ಮೆ ಬೆಳಿಗ್ಗೆ ಗುದ್ದಲಿ, ಹಾರಿ, ಪಿಕಾಸಿ ಹಿಡಿದು ಗ್ರಾಮದ ಸ್ವಚ್ಛತೆಗೆ ಶ್ರಮಿಸಿದರೆ ಊರು ಚೆಂದ ಕಾಣುತ್ತದೆ. ದೈಹಿಕವಾಗಿ ವ್ಯಾಯಾಮವೂ ಆಗುತ್ತದೆ. ಬಳಗದಲ್ಲಿ ಕೃಷಿ, ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿಯವರು ಇದ್ದು, ಪ್ರತೀ ಭಾನುವಾರ ಒಂದಿಷ್ಟು ಹೊತ್ತು ಗ್ರಾಮಕ್ಕಾಗಿ ಕೆಲಸ ಮಾಡುತ್ತೇವೆ. ವೈಯಕ್ತಿಕವಾಗಿ ಹಣ ಖರ್ಚು ಮಾಡುವ ಜೊತೆಗೆ ಅಗತ್ಯವೆನಿಸಿದಾಗ ದಾನಿಗಳ ನೆರವನ್ನೂ ಪಡೆಯುತ್ತೇವೆ’ ಎಂದು ಬಳಗದ ಪ್ರಮುಖರಾದ ಗುರುಸಿದ್ಧಸ್ವಾಮಿ, ಶಾಮಿಯಾನ ವೀರೇಶ್, ಕೆ.ಮಹಾಂತೇಶ, ಗೋಣಪ್ಪ, ತಿಪ್ಪೇಶ್, ಮಹೇಶ್, ಕೆ.ಆರ್.ರಾಜು ಹೇಳುತ್ತಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗ್ರಾಮ

ಈ ಗ್ರಾಮವು 1959-60ರಲ್ಲಿ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಅತ್ಯುತ್ತಮ ಮಾದರಿ ಗ್ರಾಮ’ ಪ್ರಶಸ್ತಿಗೆ ಭಾಜನವಾಗಿದೆ. ಸ್ವಚ್ಛತೆ ಹಾಗೂ ಕಂದಾಯ ವಸೂಲಿಯನ್ನು ಪರಿಗಣಿಸಿ ಈ ಗ್ರಾಮಕ್ಕೆ ಪ್ರಶಸ್ತಿ ನೀಡಲಾಗಿತ್ತು. ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ವಿರೂಪಾಕ್ಷಪ್ಪ ಸ್ವಚ್ಛತೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿದ್ದರು. ನಿತ್ಯ ಬೆಳಿಗ್ಗೆ ಅವರು ಮನೆ ಮನೆಗೆ ತೆರಳಿ ತ್ಯಾಜ್ಯ ನಿರ್ವಹಣೆಯ ಪಾಠವನ್ನೂ ಮಾಡುತ್ತಿದ್ದರು. ಅವರ ಮಾರ್ಗದಲ್ಲೇ ಮುನ್ನಡೆಯುತ್ತಿದ್ದೇವೆ. ಈ ಎಲ್ಲ ಕೆಲಸವನ್ನು ಗ್ರಾಮದ ಒಳಿತಿಗಾಗಿ, ಆತ್ಮತೃಪ್ತಿ ಗಾಗಿ ಮಾಡುತ್ತಿದ್ದೇವೆ ಎನ್ನುತ್ತಾರೆ ಬಳಗದ ಅಧ್ಯಕ್ಷ ಎನ್.ಟಿ.ರುದ್ರಪ್ಪ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಶ್ರಮಿಸಿದ ವ್ಯಕ್ತಿಗಳು, ಸಂಘ–ಸಂಸ್ಥೆಗಳಿಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡುತ್ತಿದೆ. ಈ ಪ್ರಶಸ್ತಿಗೆ ‘ಕಾಯಕಯೋಗಿ ಬಸವ ಪರಿಸರ ಬಳಗ’ವೂ ಭಾಜನವಾಗಿರುವುದು ಸದಸ್ಯರಿಗೆ ಮತ್ತಷ್ಟು ಹುರುಪು ನೀಡಿದೆ.

ಹಿರಿಯರಾದ ಎಂ.ವಿರೂಪಾಕ್ಷಪ್ಪ ನೆಟ್ಟ ‘ಗ್ರಾಮ ಪ್ರೇಮ’ ಸಸಿ ಈಗ ಹೆಮ್ಮರವಾಗಿದೆ. ಇದು ಉಳಿದವರಿಗೂ ಮಾದರಿಯಾಗಿದೆ.

ಜಯಂತಿಗಳ ಆಚರಣೆಯಲ್ಲೂ ಮಾದರಿ

ಬಸವ ಜಯಂತಿ ದಿನದಂದು ನಾಡಿನ ಎಲ್ಲ ಜಾತಿ ಧರ್ಮಗಳ ಮಹನೀಯರ ಜಯಂತಿಯನ್ನು ಬಳಗದ ವತಿಯಿಂದ ಆಚರಿಸಲಾಗುತ್ತದೆ. ಬಳಗದಲ್ಲಿ ಎಲ್ಲ ಜಾತಿ ಧರ್ಮದವರೂ ಇರುವ ಕಾರಣ ಪ್ರತ್ಯೇಕವಾಗಿ ಜಯಂತಿ ಆಚರಿಸುವ ಬದಲು ಒಂದೇ ದಿನ ಎಲ್ಲ ಮಹನೀಯರನ್ನು ನೆನೆದು ಗೌರವಿಸುವ ಕೆಲಸ ಮಾಡಲಾಗುತ್ತದೆ. ಅಂದು ಮಹನೀಯರ ಭಾವಚಿತ್ರಗಳ ಮೆರವಣಿಗೆಯನ್ನೂ ಗ್ರಾಮದಲ್ಲಿ ನಡೆಸಲಾಗುತ್ತದೆ. ಆವರಗೆರೆ ಗ್ರಾಮವು ಕಾರ್ಮಿಕ ಹೋರಾಟದ ನೆಲವೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.