ಬೆಂಗಳೂರಿನಲ್ಲಿ ನೂರಾರು ಮಕ್ಕಳಿಗೆ ತಬಲಾ ನುಡಿಸಾಣಿಕೆ ಹೇಳಿಕೊಟ್ಟ ಸತೀಶ್ ಹಂಪಿಹೊಳಿ, ಹಲವು ಗಾಯಕರಿಗೆ ತಬಲಾ ಸಾಥಿಯನ್ನೂ ನೀಡಿದವರು. ಸುಮಾರು ನಾಲ್ಕು ದಶಕಗಳಿಂದ ಲಯವಾದ್ಯದಲ್ಲಿ ತೊಡಗಿಕೊಂಡಿರುವ ಅವರು, ತಬಲಾ ಸ್ವತಂತ್ರವಾದನ ನಡೆಸಿಕೊಡುವ ಸಾಮರ್ಥ್ಯವಿರುವ ಹಲವಾರು ಶಿಷ್ಯಂದಿರನ್ನೂ ತಯಾರು ಮಾಡಿದ್ದಾರೆ.

ಹನ್ನೊಂದರ ಹರೆಯದಲ್ಲೇ ತಬಲಾ ಕಲಿಯಲು ಆರಂಭಿಸಿದ ಸತೀಶ್ ಹಂಪಿಹೊಳಿ ಸದ್ಯ ತಬಲಾ ವಾದನವನ್ನು ಮಕ್ಕಳಿಗೆ ಕಲಿಸುತ್ತ, ಹಲವಾರು ಶಿಷ್ಯರನ್ನು ತಯಾರು ಮಾಡಿದವರು. ಇವರು ತಬಲಾ ಕಲಿಯಲು ಆರಂಭಿಸಿದ ರೀತಿಯೂ ಬಹಳ ರೋಚಕವಾದದ್ದು.

ಹನ್ನೊಂದು ವರ್ಷದ ಬಾಲಕನಾಗಿದ್ದಾಗ ಒಮ್ಮೆ ಬೆಳಗಾವಿ ಜಿಲ್ಲೆಯ ಹಂಪಿಹೊಳಿಯಲ್ಲಿರುವ ಇವರ ಮನೆ ಬಳಿ ‘ಶಾರದಾ ಸಂಗೀತ ನಾಟಕ ಮಂಡಳಿ’ ಎಂಬ ನಾಟಕ ಕಂಪನಿ ಬೀಡು ಬಿಟ್ಟಿತ್ತು. ಆ ನಾಟಕ ಪ್ರದರ್ಶನ ನಡೆಯುವಾಗ ಒಬ್ಬ ತಬಲಾ ವಾದಕ ತನ್ನ ನುಡಿಸಾಣಿಕೆಯಲ್ಲಿ ಚಾಕಚಕ್ಯತೆಯನ್ನು ಪ್ರದರ್ಶಿಸಿದಾಗ ಇದು ಹಂಪಿಹೊಳಿ ಅವರನ್ನು ಬಹುವಾಗಿ ಆಕರ್ಷಿಸಿತು. ಇದೇ ಮುಂದೆ ಇವರಿಗೆ ತಬಲಾ ವಾದನವನ್ನು ನುಡಿಸಲು ಪ್ರೇರೇಪಿಸಿತು.

ತಬಲಾ ನುಡಿಸುವ ಕಲೆಯನ್ನು ಮೊದಲಿಗೆ ಎಂ.ಎನ್. ಕಸ್ತೂರಿ ಅವರ ಬಳಿ ಕಲಿತು, ಮುಂದೆ ಹೆಚ್ಚಿನ ಅಭ್ಯಾಸವನ್ನು ಪಂಡಿತ್ ಪಿ.ಟಿ. ಬಸವರಾಜ ಬೆಂಡಿಗೇರಿ ಅವರ ಬಳಿ ಮಾಡಲಾರಂಭಿಸಿದರು. ತಬಲಾ ಕಲಿಯಲು ಇವರು ಹುಬ್ಬಳ್ಳಿಯಲ್ಲಿ ಪ್ರತಿದಿನ ಕಾಲೇಜು ಮುಗಿದ ನಂತರ ಧಾರವಾಡಕ್ಕೆ ಹೋಗಬೇಕಾಗಿತ್ತು. ಅಲ್ಲಿ ಗುರುಗಳ ಸಮ್ಮುಖದಲ್ಲಿ ತಬಲಾವನ್ನು ಬಹಳ ಕಷ್ಟಪಟ್ಟು ಕಲಿತರು.

‘ನೂರು ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಕೂರಿಸಿ, ‘ಶತ ತಬಲಾ ವಾದನ’ ನಡೆಸಿಕೊಟ್ಟದ್ದು ನನ್ನ ಸಾಧನೆ. ಇದೇ ರೀತಿ ‘ದಾಸ ನಿರಂತರ’, ‘ವಚನ ನಿರಂತರ‘ ಮುಂತಾದ ಕಾರ್ಯಕ್ರಮಗಳನ್ನೂ ತಮ್ಮ ಶಿಷ್ಯಂದಿರ ಕಡೆಯಿಂದ ನಡೆಸಿಕೊಟ್ಟು ಸಂಗೀತದಲ್ಲಿ ವಿಶೇಷ ಎನಿಸುವ ಕಾರ್ಯಕ್ರಮ ರೂಪಿಸಿದರು. ರಾಗ ತರಂಗ, ಶ್ರಾವಣ ಸಂಗೀತೋತ್ಸವ, ಸದ್ಗುರು ಸಂಗೀತೋತ್ಸವ ಏರ್ಪಡಿಸಿದ್ದು ಸಹ ತಮ್ಮ ಸಾಧನೆ’ ಎನ್ನುವುದು ಹಂಪಿಹೊಳಿ ಅವರ ವಿವರಣೆ.

ಆಕಾಶವಾಣಿಯಲ್ಲಿ ಗ್ರೇಡೆಡ್ ಕಲಾವಿದರಾಗಿರುವ ಹಂಪಿಹೊಳಿ, ಹಲವು ಹಿಂದೂಸ್ತಾನಿ ಗಾಯಕರಿಗೆ ತಬಲಾ ಸಾಥಿ ನೀಡಿದ್ದಾರೆ. ಮುಂಬೈಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸುವ ವಿವಿಧ ಪರೀಕ್ಷೆಗಳಿಗೆ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಹಾಗೂ ವಿವಿಧ ಸಂಸ್ಥೆ, ಸಂಸ್ಥೆಗಳ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಂಪಿಹೊಳಿ ಅವರು ‘ಸತೀಶ್ ಹಂಪಿಹೊಳಿ ಸಂಗೀತ ಅಕಾಡೆಮಿ’ ಸ್ಥಾಪಿಸಿದ್ದಾರೆ.

ತಂದೆ ದತ್ತಾತ್ರೇಯ ಹಂಪಿಹೊಳಿ ಹಾಗೂ ತಾಯಿ ಸರಸ್ವತಿ ಬಾಯಿ ಅವರ ಮೂರನೆ ಮಗನಾಗಿ 1965ರಲ್ಲಿ ಹುಬ್ಬಳ್ಳಿಯ ಚಿಟಗುಪ್ಪಿಯಲ್ಲಿ ಜನಿಸಿದ ಇವರು, ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿದ್ದಾಗ ತಬಲಾ ನುಡಿಸುತ್ತಿದ್ದರು. ಇವರ ತಾತ ರಾಮಪ್ಪಯ್ಯ ಇನಾಂದಾರ್ ಅವರೂ ತಬಲಾವಾದಕರಾಗಿದ್ದುದರಿಂದ ಇವರಿಗೆ ಸ್ವಲ್ಪಮಟ್ಟಿಗೆ ನುಡಿಸಾಣಿಕೆ ಕಲೆ ರಕ್ತಗತವಾಗಿಯೇ ಬಂದಿದೆ ಎನ್ನಬಹುದು. ಸಂಗೀತ ಬದುಕಿನಲ್ಲಿ ಸುಮಾರು ನಲವತ್ತು ವರ್ಷ ಸವೆಸಿರುವವರು. ಬೆಂಗಳೂರಿನಲ್ಲಿ ಲಯವಾದ್ಯ ನುಡಿಸಾಣಿಕೆ ಅಲ್ಲದೆ ಸಂಘಟನೆಯಲ್ಲಿಯೂ ತೊಡಗಿಕೊಂಡಿದ್ದಾರೆ.

ಹಾಗೆ ನೋಡಿದರೆ ಸತೀಶ್, ಬೆಂಗಳೂರಿಗೆ ಬಂದದ್ದೇ ಆಕಸ್ಮಿಕವಾಗಿ. ಒಮ್ಮೆ ಕುಂದಗೋಳದ ಸವಾಯ್ ಗಂಧರ್ವ ಅವರ ಪುಣ್ಯಸ್ಮರಣೆಗಾಗಿ ಹಿಂದೂಸ್ತಾನಿ ಸಂಗೀತದ ಮೇರು ಕಲಾವಿದ ಪಂಡಿತ್ ಶೇಷಾದ್ರಿ ಗವಾಯಿ ಅವರು ಬಂದಿದ್ದ ಸಂದರ್ಭದಲ್ಲಿ ಹಂಪಿಹೊಳಿ ಅವರ ಪರಿಚಯವಾಯಿತು. ಅಲ್ಲಿಂದ ಗವಾಯಿ ಅವರ ಸಲಹೆಯಂತೆ 1986ರಲ್ಲಿ ಹಂಪಿಹೊಳಿ ಅವರು ಬೆಂಗಳೂರಿಗೆ ಬಂದರು. ತಮ್ಮ ಆಶ್ರಮದಲ್ಲೇ ಇವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ ಗವಾಯಿಗಳು, ಇಲ್ಲಿ ಮಕ್ಕಳಿಗೆ ತಬಲಾ ಕಲಿಸಲೂ ಏರ್ಪಾಡು ಮಾಡಿದರು. ಇದೇ ತನ್ನ ಸಂಗೀತ ಬದುಕಿನ ಮಹತ್ವದ ತಿರುವು ಎನ್ನುತ್ತಾರೆ ಇವರು.

ಮುಂದೆ ಉಭಯಗಾನ ವಿದುಷಿಯಾಗಿದ್ದ ಶ್ಯಾಮಲಾ ಭಾವೆ ಅವರ ಸರಸ್ವತಿ ಸಂಗೀತ ವಿದ್ಯಾಲಯದಲ್ಲೂ ಮಕ್ಕಳಿಗೆ ತಬಲಾ ನುಡಿಸಲು ವ್ಯವಸ್ಥೆ ಮಾಡಿದರು. ಮುಂದೆ 1990ರಲ್ಲಿ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ತಮ್ಮ ವಾಸ್ತವ್ಯ ಆರಂಭಿಸಿದ ಹಂಪಿಹೊಳಿ ಅವರು ಇಲ್ಲೂ ಆಸಕ್ತ ಮಕ್ಕಳಿಗೆ ತಬಲಾ ಕಲಿಸಲಾರಂಭಿಸಿ ಹಲವಾರು ಶಿಷ್ಯಪಡೆಯನ್ನೇ ತಯಾರು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.