ಲೂಸಾನ್: ಭಾರತದ ರಘು ಪ್ರಸಾದ್ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ನ (ಎಫ್ಐಎಚ್) 2025ರ ‘ವರ್ಷದ ಎಫ್ಐಎಚ್ ಪುರುಷ ಅಂಪೈರ್’ ಗೌರವಕ್ಕೆ ಪಾತ್ರರಾಗಿದ್ದಾರೆ.

198 ಅಂತರರಾಷ್ಟ್ರೀಯ ಪಂದ್ಯಗಳಿಗೆ ಅಂಪೈರಿಂಗ್ ಮಾಡಿರುವ ಅವರು, ಮಲೇಷ್ಯಾದಲ್ಲಿ ನಡೆಯಲಿರುವ ಸುಲ್ತಾನ್ ಅಜ್ಲಾನ್ ಶಾ ಕಪ್ನಲ್ಲಿ 200 ಪಂದ್ಯಗಳ ಮೈಲಿಗಲ್ಲು ದಾಟುವ ನಿರೀಕ್ಷೆಯಿದೆ. ಈ ಸಾಧನೆ ಮಾಡಿದ ಏಷ್ಯಾದ ಮೊದಲ ಅಂಪೈರ್ ಎಂಬ ಹೆಗ್ಗಳಿಕೆಯೂ ಅವರದಾಗಲಿದೆ.

ಪ್ರಸಾದ್ ಅವರು ನಾಲ್ಕು ವಿಶ್ವಕಪ್ ಹಾಕಿ, ಮೂರು ಒಲಿಂಪಿಕ್ಸ್, ಎಫ್ಐಎಚ್ ಹಾಕಿ ಪ್ರೊ ಲೀಗ್, ಕಾಮನ್ವೆಲ್ತ್ ಗೇಮ್ಸ್, ಜೂನಿಯರ್ ವಿಶ್ವಕಪ್ಗಳು, ಮೂರು ಏಷ್ಯನ್ ಗೇಮ್ಸ್, ಹಲವು ಏಷ್ಯಾ ಕಪ್ ಮತ್ತು ಏಷ್ಯನ್ ಚಾಂಪಿಯನ್ಸ್ ಟ್ರೋಫಿಗಳಂತಹ ಪ್ರಮುಖ ಟೂರ್ನಿಗಳಲ್ಲಿ ಸುಮಾರು 23 ವರ್ಷ ಅಂಪೈರಿಂಗ್ ಮಾಡಿದ ಅನುಭವ ಹೊಂದಿದ್ದಾರೆ.

‘ಅಂತರರಾಷ್ಟ್ರೀಯ ಹಾಕಿ ಪಂದ್ಯಗಳ ಕಾರ್ಯನಿರ್ವಹಣೆಯಲ್ಲಿ ಪ್ರಸಾದ್ ಅವರು ತೋರಿದ ವೃತ್ತಿಪರತೆ, ಸಮರ್ಪಣೆ ಮತ್ತು ಶ್ರೇಷ್ಠತೆಗಾಗಿ ಈ ಗೌರವ ಲಭಿಸಿದೆ’ ಎಂದು ಎಚ್ಎಎಚ್ ಹೇಳಿಕೆಯಲ್ಲಿ ತಿಳಿಸಿದೆ.

ವರ್ಷದ ಮಹಿಳಾ ಅಂಪೈರ್ ಗೌರವಕ್ಕೆ ಅರ್ಜೆಂಟೀನಾದ ಐರೀನ್ ಪ್ರೆಸೆನ್ಕ್ವಿ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.